ಬ್ರಾಹ್ಮಣ ಮಹಾಸಭಾ ಆಶ್ರಯದಲ್ಲಿ 104 ನೇ ಅಖಂಡ ವೀಣಾ ಸಪ್ತಾಹ

104th Akhanda Veena Week under the auspices of Brahmin Mahasabha

ಬ್ರಾಹ್ಮಣ ಮಹಾಸಭಾ ಆಶ್ರಯದಲ್ಲಿ 104 ನೇ ಅಖಂಡ ವೀಣಾ ಸಪ್ತಾಹ 

ಹಾನಗಲ್ 20 :ಇಲ್ಲಿನ ಶಂಕರ ಮಂಗಲ ಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಶ್ರಯದಲ್ಲಿ 104 ನೇ ಅಖಂಡ ವೀಣಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  

   ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಶ್ರೀನಿವಾಸ ಮಾನೆ  ಅವರು ಸತ್ಸಂಗ, ಭಜನೆ ಮತ್ತು ಚಿದಂಬರ ನಾಮಸ್ಮರಣೆ ಮಾಡಿದರು.ಶಿವ ಚಿದಂಬರರು ಈಶ್ವರನ ರೂಪ. ಅಂಥ ಶಿವ ಚಿದಂಬರರ ಇತಿಹಾಸ, ಲೀಲೆಗಳನ್ನು ಸಾರುವ ಮಹತ್ವದ ಕಾರ್ಯಕ್ರಮ ನಡೆದಿರುವುದು ಸಂತಸದ ಸಂಗತಿ. ಒಂದು ವಾರ ನಿರಂತರ ಚಿದಂಬರ ನಾಮ ಸ್ಮರಣೆ ಮಾಡಲಾಗುತ್ತದೆ. ಶಿವನಾಮ ಸ್ಮರಣೆಗೆ ಮಹತ್ವದ ಶಕ್ತಿ ಇದ್ದು, ಪಾಪ, ಕರ್ಮಗಳನ್ನೆಲ್ಲ ನಾಶ ಮಾಡಲಿದೆ.ದೇಶದ ಪ್ರಮುಖ ನಗರಗಳಲ್ಲಿ ಪ್ರತಿವರ್ಷ ಅಖಂಡ ವೀಣಾ ಸಪ್ತಾಹ ನಡೆಯುತ್ತಿದ್ದು, ಈ ಬಾರಿ ಹಾನಗಲ್ ನಗರ ಸಪ್ತಾಹಕ್ಕೆ ಸಾಕ್ಷಿಯಾಗುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬ್ರಾಹ್ಮಣ ಸಮಾಜ ಸದಾಕಾಲ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರಗಳ ಉಳಿವಿಗೆ ಕಾಳಜಿ ವಹಿಸಿದೆ ಎಂದು ಇದೇ ಸಂದರ್ಭದಲ್ಲಿ ಶಾಸಕ ಮಾನೆ ತಿಳಿಸಿದರು. 

  ಜ.26 ರ ವರೆಗೆ ಶಂಕರ ಮಂಗಲ ಭವನದಲ್ಲಿ ಕಾಕಡಾರತಿ,ಪಾರ್ಥಿವೇಶ್ವರ ಪೂಜೆ, ಚಿದಂಬರೇಶ್ವರನಿಗೆ ಅಭಿಷೇಕ, ಸಾಮೂಹಿಕ ನಾಮಸ್ಮರಣೆ, ಆರತಿ ನೈವೇದ್ಯ, ಸಾಂಪ್ರದಾಯಿಕ ಭಜನೆ, ಪ್ರವಚನ, ಕೀರ್ತನೆ, ಆರತಿ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 

  ಕರ್ಕಿಹಳ್ಳಿಯ ಸುರೇಶ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.ಸಪ್ತಾಹದ ಸ್ವಾಗತ ಸಮಿತಿ ಅಧ್ಯಕ್ಷ ಶ್ರೀನಿವಾಸ ಶಿವಪೂಜಿ, ವಿಪ್ರ ಸಮಾಜದ ತಾಲೂಕಾಧ್ಯಕ್ಷ ರವಿಚಂದ್ರ ಪುರೋಹಿತ, ಸಮಿತಿಯ ಸಂಚಾಲಕರಾದ ಉದಯ ನಾಸಿಕ, ಗೀರೀಶ್ ದೇಶಪಾಂಡೆ, ಗೌರವಾಧ್ಯಕ್ಷರಾದ ಶಂಕರಭಟ್ ಜೋಶಿ, ಘನಶಾಮ ದೇಶಪಾಂಡೆ, ಕಾರ್ಯದರ್ಶಿಗಳಾದ ಕೃಷ್ಣ ಪೂಜಾರ, ಪ್ರಮೋದ ಕುಲಕರ್ಣಿ, ರಾಜಾರಾಂ ಕುಲಕರ್ಣಿ, ಮಾಲತೇಶ ಕಾಮನಹಳ್ಳಿ, ಆದರ್ಶ ಶೆಟ್ಟಿ ಸೇರಿದಂತೆ ಅನೇಕರಿದ್ದರು.