ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಬಳ್ಳಾರಿ ರಾಜ್ಯಕ್ಕೆ ಎರಡನೇ ಸ್ಥಾನ

ಲೋಕದರ್ಶನ ವರದಿ

ಬಳ್ಳಾರಿ03: ನೌಕರರ ಶ್ರಮದ ಫಲವಾಗಿ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ನ ಬಳ್ಳಾರಿ ಶಾಖೆಯು ಖಾತೆ ತೆರುಯುವಲ್ಲಿ ದೇಶದಲ್ಲೇ 13ನೇ ಹಾಗೂ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ಬಳ್ಳಾರಿ ಶಾಸಕ ಗಾಲಿ ಸೋಮಶೇಖರರೆಡ್ಡಿ ಹರ್ಷ ವ್ಯೆಕ್ತ ಪಡಿಸಿದ್ದಾರೆ. 

 ನಗರದ ಬಿಪಿಎಸ್ಸಿ ಸಮೂಹ ಶಿಕ್ಷಣ ಸಂಸ್ಥೆಯ ಶರಣ ಸಭಾಂಗಣದಲ್ಲಿ ಕೇಂದ್ರ ಸಕರ್ಾರದ ನೂತನ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿ ಸ್ವತ: ತಮ್ಮ ಖಾತೆಯನ್ನು ತೆರೆದು ಅವರು ಮಾತನಾಡುತ್ತಿದ್ದರು. ಇಂಗ್ಲಾಂಡ್ ಲೆಟರ್, ಪೋಸ್ಟ್ ಕಾಡರ್್ ಬರಿಯುತ್ತಿದ್ದ ಕಾಲದಿಂದಲು ಅಂಚೆಕಛೇರಿ ತುಂಬ ಮಹತ್ವ ಪಡೆದಿತ್ತು. 

   ಆದರೆ ಇತ್ತೀಚೆಗೆ ತಂತ್ರಜ್ಞಾನದ ಬೆಳವಣಿಗೆ ಇಂದ ಅಂಚೆಕಛೇರಿಯು ಸೇವೆಗಳಿಗೆ ಹೊಡೆತ ಬಿದ್ದಿದೆ. ಅಂಚೆಕಛೇರಿಯನ್ನು ಬಲಪಡಿಸಲು ಡಿಜಿಟಲ್ ಬ್ಯಾಂಕ್ ಅಭಿವೃದ್ಧಿಗೊಳಿಸಿದೆ. ಗ್ರಾಹಕರಿಗೆ ಮನೆ-ಮನೆಗೆ ತೆರಳಿ ಸೇವೆ ನೀಡಲಿದೆ. 

 ನಗರದ ಎಲ್ಲಾ ವಾಡರ್್ ಗಳಲ್ಲಿನ ಅಂಚೆಕಛೇರಿಗಳಲ್ಲಿ ಈ ಬ್ಯಾಂಕ್ ಕಾರ್ಯನಿರ್ವಹಿಸಲಿದ್ದು ಸಕರ್ಾರದ ಯೋಜನೆಗಳನ್ನು ಪಡೆಯಲು ಬಡ ಜನರಿಗೆ ಇದು ಸಹಕಾರಿಯಾಗಲಿದೆ ಎಂದರು. ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ನ ವ್ಯೆವಸ್ಥಾಪಕ ಶ್ರೀರಾಮ ಬಿವರ್ಾ ಪ್ರಾಸ್ತವಿಕವಾಗಿ ಮಾತನಾಡಿದರು. 

  ನಗರ ನಿವಾಸಿಗಳಾದ ಭಗವಂತ, ಮಲ್ಲಮ್ಮ, ಹಾಗೂ ಎಸ್.ಜಿ.ಟಿ ಕಾಲೇಜಿನ ವಿದ್ಯಾಥರ್ಿಗಳಿಗೆ ಕ್ಯೂ ಆರ್ ಕಾಡರ್್ ನೀಡಿ ನೂತನ ಬ್ಯಾಂಕಿಗೆ ಚಾಲನೆ ನೀಡಿದರು. ಅಂಚೆ ಇಲಾಖೆಯ ಅಧೀಕ್ಷಕ ಬಸವರಾಜ, ಬಸವರಾಜೇಶ್ವರಿ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ವೆಂಕಟ ಮಹಿಪಾಲ್ ಜಿ.ಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ, ಪಾಲಿಕೆಯ ಸದಸ್ಯ ಮಲ್ಲನಗೌಡ, ಕಾಲೇಜಿನ ಪ್ರಾಚಾರ್ಯ ಹರಿಕುಮಾರ ಸೇರಿದಂತೆ ನೂರಾರು ಮುಖಂಡರು ಅಂಚೆಕಛೇರಿಯ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.