ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ

ವಿಶಾಖಪಟ್ಟಣಂ, ಅ 2 :   ಇಲ್ಲಿನ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.  ಬಳಿಕ, ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ ಇಲ್ಲಿನ ಪಿಚ್ ಬ್ಯಾಟಿಂಗ್ ಮಾಡಲು ಅತ್ಯುತ್ತಮವಾಗಿದೆ. ಮೊದಲೆರಡು ದಿನಗಳು ಬ್ಯಾಟಿಂಗ್ಗೆ ಅನುಕೂಲವಾಗಲಿದೆ. ನಂತರ, ವಿಕೆಟ್ ನಿಧಾನಗತಿಯಿಂದ ಕೂಡಿರಲಿದೆ. ಇದು ಇಲ್ಲಿನ ಪಿಚ್ ಸ್ವಭಾವ ಎಂದು ಹೇಳಿದರು. 

        ಮೊಟ್ಟ ಮೊದಲ ಬಾರಿ ಟೆಸ್ಟ್ ಕ್ರಿಕೆಟ್ನಲ್ಲಿ ಆರಂಭಿಕನಾಗಿ ಬ್ಯಾಟಿಂಗ್ ಮಾಡುತ್ತಿರುವ ರೋಹಿತ್ ಶಮರ್ಾ ಅವರ ಬಗ್ಗೆ ಮಾತನಾಡಿ, ರೋಹಿತ್ ಪಾಲಿಗೆ ಇದು ಅದ್ಭುತ ಅವಕಾಶ. ಇದನ್ನು ಅವರು ಸದುಪಯೋಗಪಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.  ವೃದ್ದಿಮಾನ್ ಸಹಾ ವಿಶ್ವದ ಶ್ರೇಷ್ಠ ವಿಕೆಟ್ ಕೀಪರ್ಗಳಲ್ಲಿ ಒಬ್ಬರು. ಅವರನ್ನು ಮೆತ್ತೆ ತಂಡೆಕ್ಕೆ ಕರೆತರಲು ಸೂಕ್ತ ಸಮಯೆಕ್ಕೆ ಕಾಯೆುತ್ತಿದ್ದೆವು. ಆದರೆ, ಇದೀಗ ಅದು ಸಕಾರವಾಗಿದೆ ಎಂದು ಕೊಹ್ಲಿ ತಿಳಿಸಿದರು. ತಂಡಗಳು(ಅಂತಿಮ 11) ಭಾರತ: ಮಯಾಂಕ್ ಅಗವರ್ಾಲ್, ರೋಹಿತ್ ಶಮರ್ಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಹನುಮ ವಿಹಾರಿ, ವೃದ್ದಿಮಾನ್ ಸಾಹ (ವಿ.ಕೀ), ರವೀಂದ್ರ ಜಡೇಜಾ, ಇಶಾಂತ್ ಶಮರ್ಾ, ಮೊಹಮ್ಮದ್ ಶಮಿ. ದಕ್ಷಿಣ ಆಫ್ರಿಕಾ: ಏಡೆನ್ ಮರ್ಕರಮ್, ಡೀನ್ ಎಲ್ಗರ್, ಡಿ ಬ್ರುಯ್ನ್, ಫಾಫ್ ಡೆುಪ್ಲೆಸಿಸ್(ನಾಯಕ) , ತಂಬಾ ಬವುಮಾ (ಉಪ ನಾಯಕ),  ಡಿ ಕಾಕ್(ವಿ.ಕೀ), ವೆನರ್ಾನ್ ಫಿಲೆಂಡರ್, ಕೇಶವ್ ಮಹರಾಜ್, ಡೇನ್ ಪಿಡ್ತ್, ಕಗಿಸೋ ರಬಡಾ, ಲುಂಗಿ ಎನ್ಗಿಡಿ