ಐದನೇ ಕಿರಿಯರ ವಿಶ್ವಕಪ್ ಮೇಲೆ ಭಾರತ ಗುರಿ

ನವದೆಹಲಿ, ಫೆ 8 :    ಸೋಲಿಲ್ಲದೆ ಮುನ್ನುಗ್ಗುತ್ತಿರುವ ಭಾರತ ಕಿರಿಯರ ತಂಡ 19 ವಯೋಮಿತಿ ವಿಶ್ವಕಪ್ ಐದನೇ ಬಾರಿ ಮುಡಿಗೇರಿಸಿಕೊಳ್ಳುವ ಗುರಿ ಹೊಂದಿದ್ದು, ನಾಳೆ ನಡೆಯುವ ಫೈನಲ್ ಹಣಾಹಣಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಸೆಣಸಲಿದೆ.

ಟೂರ್ನಿಯಲ್ಲಿ ಆಡಿರುವ ಎಲ್ಲ ಪಂದ್ಯಗಳಲ್ಲಿ ಪ್ರಿಯಮ್ ಗರ್ಗ್ ನಾಯಕತ್ವದ ಭಾರತ ತಂಡ ಗೆದ್ದು ಪಾರಮ್ಯ ಸಾಧಿಸಿದೆ. ಶ್ರೀಲಂಕಾ, ಜಪಾನ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ವಿರುದ್ಧ ಗೆಲುವಿನ ನಗೆ ಬೀರಿತ್ತು. 

2016ರ ಆವೃತ್ತಿಯ ಫೈನಲ್ ಹಣಾಹಣಿಯಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ ಸೋಲು ಅನುಭವಿಸಿದ್ದ ಬಳಿಕ ಭಾರತ ಇಲ್ಲಿಯವರೆಗೂ ಸತತ 11 ಪಂದ್ಯಗಳಲ್ಲಿ ಜಯ ಸಾಧಿಸಿದೆ. 

ಭಾರತ ತಂಡದ ಎಲ್ಲ ವಿಭಾಗಗಳಿಂದ ಅತ್ಯುತ್ತಮ ಪ್ರದರ್ಶನ ಮೂಡಿಬರುತ್ತಿದೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಆರಂಭಿಕ ಬ್ಯಾಟ್ಸ್‌‌ಮನ್ ಯಶಸ್ವಿ ಜೈಸ್ವಾಲ್ ಅಗ್ರ ಸ್ಥಾನದಲ್ಲಿದ್ದಾರೆ. ಸ್ಫೂರ್ತಿಯ ಚಿಲುಮೆ ಯಶಸ್ವಿಿ ಜೈಸ್ವಾಲ್ ಅವರು ಒಂದು ಶತಕ ಸೇರಿದಂತೆ ಒಟ್ಟು 312 ರನ್ ಗಳಿಸಿದ್ದಾರೆ. ಇವರು ಐದು ಇನಿಂಗ್ಸ್‌‌ಗಳಲ್ಲಿ  ಕೇವಲ ಎರಡರಲ್ಲಿ ಮಾತ್ರ ಔಟ್ ಆಗಿದ್ದಾರೆ.

ಪಾಕಿಸ್ತಾನದ ವಿರುದ್ಧ ಸೆಮಿಫೈನಲ್ ಹಣಾಹಣಿಯಲ್ಲಿ ಇವರ ಶತಕದ ನೆರವಿನಿಂದ ಭಾರತ ಗೆದ್ದು ಏಳನೇ ಬಾರಿ ಫೈನಲ್‌ಗೆ ಲಗ್ಗೆೆ ಇಟ್ಟಿತ್ತು. ಕಾರ್ತಿಕ್ ತ್ಯಾಾಗಿ, ಸುಶಾಂತ್ ಮಿಶ್ರಾ, ರವಿ ಬಿಷ್ನೋಯಿ, ಅಥರ್ವ ಅಂಕೋಲೇಕರ್ ಹಾಗೂ ಆಕಾಶ್ ಸಿಂಗ್ ಅವರು ತಂಡಕ್ಕೆೆ ಎಲ್ಲ ಸನ್ನವೇಶಗಳಲ್ಲಿ ನೆರವಾಗಿದ್ದಾಾರೆ . ಇದು ತಂಡಕ್ಕೆ ಲಾಭದಾಯಕವಾಗಿದೆ.

ಚೊಚ್ಚಲ ವಿಶ್ವಕಪ್ ಗೆಲ್ಲುವ ತುಡಿತದಲ್ಲಿರುವ ಬಾಂಗ್ಲಾದೇಶವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. 

ಟೂರ್ನಿಯು ಆರಂಭವಾಗುವ ಮುನ್ನ ಬಾಂಗ್ಲಾಾದೇಶ ತಂಡದ ನಾಯಕ ಅಕ್ಬರ್ ಅಲಿ ನಾವು ಚೊಚ್ಚಲ ವಿಶ್ವಕಪ್ ಗೆಲ್ಲುತ್ತೇವೆ. ಈ ಸಾಧನೆ ಮಾಡಲು ನಮಗೆ ಕೆಲವೇ-ಕೆಲವು ಹೆಜ್ಜೆೆಗಳು ಬಾಕಿ ಇವೆ ಎಂದಿದ್ದರು. ಭಾರತದ ವಿರುದ್ಧ ಎ ಮಟ್ಟದ ಆಟವನ್ನು ನಾವೆಲ್ಲರೂ ಹೊರ ತರಬೇಕು. ಆಗಿದ್ದಾಗ ಮಾತ್ರ ಪ್ರಶಸ್ತಿ ಎತ್ತಿ ಹಿಡಿಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದರು.

ಕಳೆದ ಆವೃತ್ತಿಯಲ್ಲಿ ಬಾಂಗ್ಲಾದೇಶ ಸೆಮಿಫೈನಲ್ ಹಣಾಹಣಿಯಲ್ಲಿ ಸೋಲುಂಡಿತ್ತು. ನ್ಯೂಜಿಲೆಂಡ್ ವಿರುದ್ಧ ಶತಕ ಬಾರಿಸಿದ್ದ ಮಹ್ಮುದುಲ್ಲಾ ಹಸನ್ ಜಾಯ್ ಅವರು ನಮ್ಮ ಕನಸು ಈಡೇರಿಸಲು ಇನ್ನು ಒಂದೇ-ಒಂದು ಹೆಜ್ಜೆ ಬಾಕಿ ಇದೆ ಎಂದಿದ್ದರು.

ತಂಡಗಳು

ಭಾರತ: 

ಪ್ರಿಯಮ್ ಗರ್ಗ್(ನಾಯಕ), ಕಾರ್ತಿಕ್ ತ್ಯಾಗಿ, ಯಶಸ್ವಿ ಜೈಸ್ವಾಲ್, ವಿದ್ಯಾದರ್ ಪಾಟೀಲ್, ತಿಲಕ್ ವರ್ಮಾ, ಶುಭಾಂಗ್ ಹೆಗ್ಡೆೆ, ದಿವ್ಯಾಂಶ್  ಸಕ್ಸೇನಾ, ರವಿ ಬಿಷ್ನೋಯಿ, ಶಾಶ್ವತ್ ರಾವತ್, ಧೃವ್ ಜುರೆಲ್, ಸಿದ್ದೇಶ್ ವೀರ್, ಆಕಾಶ್ ಸಿಂಗ್, ಅಥರ್ವ ಅಂಕೋಲೇಕರ್, ಸುಶಾಂತ್ ಮಿಶ್ರಾ, ಕುಮಾರ್ ಕುಶಾಗ್ರ.

ಬಾಂಗ್ಲಾದೇಶ: 

ತೌಹಿದ್ ಹ್ರೀದಾಯ್, ಶೋರಿಫುಲ್ ಇಸ್ಲಾಂ , ತಾಂಜಿದ್ ಹಸನ್, ಮೃತ್ಯುಂಜಯ್ ಚೌಧರಿ, ರಕಿಬುಲ್ ಹಸನ್, ಶಹದತ್ ಹುಸೇನ್, ಶಮೀಮ್ ಹುಸೇನ್, ಅಕ್ಬರ್ ಅಲಿ (ನಾಯಕ), ಅವಿಶೇಕ್ ದಾಸ್, ಮಹ್ಮುದುಲ್ ಹಸನ್ ಜಾಯ್, ಪ್ರಾಂತಿಕ್  ನವ್ರೋಸ್ ನಬಿಲ್, ಪರ್ವೇಜ್ ಹುಸೇನ್ ಹಮಾನ್, ಹಸನ್ ಮುರಾದ್

ಸಮಯ: ನಾಳೆ 01:30ಕ್ಕೆೆ 

ಸ್ಥಳ: ಸೆನ್ವೆಸ್ ಪಾರ್ಕ್, ಪಚೆಫ್‌ಸ್ಟ್ರೋಮ್