ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ಭಾರತ ತಿರುಗೇಟು

ನವದೆಹಲಿ,  ಅ 5:   ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಅಂತಾರಾಷ್ಟ್ರೀಯ ಸಂಬಂಧಗಳನ್ನು ಯಾವ ರೀತಿ ಕಾಪಾಡಬೇಕು ಮತ್ತು ಯಾವ ರೀತಿ ಉಳಿಸಿಕೊಳ್ಳಬೇಕು ಎಂಬುದು ಗೊತ್ತೇ ಇಲ್ಲ ಎಂದು ಭಾರತದ ತಿರುಗೇಟು ನೀಡಿದೆ. 

 ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ್ದು, ಇಮ್ರಾನ್ ಖಾನ್ ಅವರ ಅವಿವೇಕತನಕ್ಕೆ ಸಾಕ್ಷಿಯಾಗಿದೆ. ಭಾರತದ ವಿರುದ್ಧ ಅವರು ಜಿಹಾದ್ಗೆ ಕರೆ ನೀಡಿರುವುದು ಸರಿಯಲ್ಲ, ಅದು ವಿವೇಕತನದ ನಿರ್ಧಾರವೂ ಅಲ್ಲ  ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ. 

ಇದೇ ಸಭೆಯಲ್ಲಿ ಕಾಶ್ಮೀರದ ವಿಚಾರ ಪ್ರಸ್ತಾಪ ಮಾಡಿದ ಮಲೇಷ್ಯಾ ಹಾಗೂ ಟರ್ಕ್ ದೇಶಗಳ ನೀತಿಯನ್ನು ಅವರು ತರಾಟೆಗೆ  ತೆಗೆದುಕೊಂಡರು. ಭಾರತದ ಜತೆಗಿನ ಸ್ನೇಹ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ಮಲೇಷ್ಯಾ ಹಾಗೂ ಟರ್ಕ್ ಮಾತನಾಡಬೇಕಿತ್ತು. ಕಾಶ್ಮೀರ ವಿವಾದ ಸಂಪೂರ್ಣ ಭಾರತದ ಆಂತರಿಕ ವಿಚಾರ ಎಂಬುದನ್ನು ಆ ದೇಶಗಳು ಅರಿಯಬೇಕಿತ್ತು ಎಂದರು. 

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370 ವಿಧಿ ರದ್ದು ಮಾಡಿದ್ದನ್ನು ಕೂಡಲೇ ವಾಸಪ್ ಪಡೆಯಬೇಕೆಂದು ಪಾಕಿಸ್ತಾನ ವಿಶ್ವಸಂಸ್ಥೆಯ ಸಭೆಯಲ್ಲಿ ಒತ್ತಾಯ ಮಾಡಿತ್ತು .