ಭಾರತ ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ಸಂಸ್ಕೃತಿ ಹೊಂದಿದ ದೇಶ : ಪೈಲಾರು

ಲೋಕದರ್ಶನ ವರದಿ 

ಇಂಡಿ, 6: ಭಾರತ ದೇಶ ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ ದೇಶವಾಗಿದ್ದು ಅನೇಕ ದೇವರ ಆರಾಧನೆಯನ್ನು ಮಾಡುವ ಮೂಲಕ ಪೂಜಿಸುವ ವಿಶಿಷ್ಠ ಪರಂಪರೆ ನಮ್ಮದಾಗಿದೆ ಎಂದು ಹೆಸ್ಕಾಂ ಇಲಾಖೆ ಅಭಿಯಂತರ ಮಾಲಾಧಾರಿ  ಗುರುವ ಪೈಲಾರು ಹೇಳಿದರು.

ಪಟ್ಟಣದ ಅಗರಖೇಡ ರಸ್ತೆಯಲ್ಲಿರುವ ಸ್ವಾಮಿ ಶರಣಂ ಅಯ್ಯಪ್ಪ ಭಕ್ತಿ ಮಂಟಪದಲ್ಲಿ ಮುಂಬಯಿ ಗ್ರಾಮದಿಂದ ಆಗಮಿಸಿದ ಸ್ವಾಮಿ ಶರಣಂ ಅಯ್ಯಪ್ಪ ದರ್ಶನಕ್ಕೆ ಸುಮಾರು 19 ವರ್ಷಗಳಿಂದ ಪಾದಯಾತ್ರೆ ಮಾಡುತ್ತಿರುವ ಉಪೇಂದ್ರ ಪೂಜಾರಿ ಇವರಿಗೆ ಬರಮಾಡಿಕೊಂಡ ನಂತರ ನೂತನವಾಗಿ ನಿಮರ್ಿಸಿದ ಭಕ್ತಿ ಮಂಟಪದ  ಅಯ್ಯಪ್ಪಸ್ವಾಮಿ ಗುಡಿಯ ಹಾಗೂ 14 ಪುಣ್ಯ ಮೆಟ್ಟಿಲುಗಳ  ವಿಶೇಷ ಪೂಜೆ  ನೆರೇವೆರಿಸಿ ಅವರು ಮಾತನಾಡಿದರು.

ದೇವರು ಸರ್ವ ಅಂತರಯಾಮಿಯಾಗಿದ್ದು ಪ್ರತಿಯೊಂದು ಚರಾಚರ ವಸ್ತುಗಳಲ್ಲಿ ಕಾಣಬಹುದು. ಭಾರತ ದೇಶದಲ್ಲಿ ಅನೇಕ ನಂಬಿಕೆಯುಳ್ಳ ಭಕ್ತರಿದ್ದಾರೆ. ನಮ್ಮ ದೇಶದಲ್ಲಿ ಇರುವಷ್ಠು ಪುಣ್ಯ ಕ್ಷೇತ್ರಗಳು ಜಗತ್ತಿನ ಯಾವುದೇ ದೇಶದಲ್ಲಿ ಕಾಣಲು ಅಸಾಧ್ಯ ಅದರಲ್ಲಿ ಕೆರಳ ರಾಜ್ಯದ ಶಬರಿಮಲೆಯಲ್ಲಿರುವ ಸ್ವಾಮಿ ಶರಣಂ ಅಯ್ಯಪ್ಪ ಅತ್ಯಂತ ಪವಿತ್ರ ಸ್ಥಳವಾಗಿದ್ದು ಬೇಡಿದರವರಿಗೆ ಎನ್ನೇಲ್ಲಾ ಕರುಣಿಸುವ ಕರುಣಾಮಯಿಯಾಗಿದ್ದಾರೆ. ಸದರಿ ಕ್ಷೇತ್ರಕ್ಕೆ ಭಕ್ತರು ಅಯ್ಯಪ್ಪಸ್ವಾಮಿಯ ಮಾಲಾಧಾರಣೆ ಮಾಡಿ 41 ದಿನಗಳಕಾಲ ಕಠೀಣ ವೃತ್ತ ಮಾಡಿ ಇರುಮುಡಿ ಹೊತ್ತು 18 ಮೆಟ್ಟಿಲುಗಳನ್ನು ಏರಿ ಯಾತ್ರೆಯನ್ನು ಪೂರ್ಣಗೊಳಿಸಿ ಕೃತಾರ್ಥರಾಗುತ್ತಾರೆ.

   ಯಾರಲ್ಲಿ ದೇವರ ಬಗ್ಗೆ ಭಯ ಭಕ್ತಿ ಇರುತ್ತದೆಯೂ ನೀಜ ಜೀವನದಲ್ಲಿ ಎಲ್ಲಾ ಜೀವರಾಶಿಗಳಿಗೂ ಒಳ್ಳೆದನ್ನು ಬಯಸುತ್ತಾರೆ . ಆದ್ದರಿಂದ್ದ ಪ್ರತಿಯೊಂದು ಜೀವರಾಶಿಗಳಿಗೆ ಒಳಿತನ್ನು ಬಯಸುವದೆ ನೀಜವಾದ ಮಾನವೀಯ ಮೌಲ್ಯ ಎಂದರು.

ಅಯ್ಯಪ್ಪ ಭಕ್ತರಾದ ಶ್ರೀ ಉಪೇಂದ್ರ ಇವರು ಮುಂಬಯಿ ಇಂದ ಸುಮಾರು 19 ವರ್ಷಗಳಿಂದ ಇರಮುಡಿ ಹೊತ್ತು ಕೇರಳದ ಶಬರಿ ಮಲೆಗೆ ಬರಿಗಾಲಿನಿಂದ 3ಸಾವಿರ ಕಿಮೀ ಸಂಚರಿಸಿ ಯಾವುದೇ ಮಳೆಗಾಳಿ, ಕಾಡುಮೇಡುಗಳಲ್ಲಿ ಕಾಡುಪ್ರಾಣಿಗಳ ಭಯ ಸಹಿತ ಇಲ್ಲದೆ ತಮ್ಮ ಭಕ್ತಿಯನ್ನು ಮುಟ್ಟಿಸುವ ಕಾರ್ಯ ಶ್ಲ್ಯಾಘನೀಯವಾಗಿದೆ ಎಂದರು. 

ಸ್ವಾಮಿ ಶರಣಂ ಅಯ್ಯಪ್ಪ ಮಾಲಾಧಾರಿಗಳಾದ ಮಂಜು ಕಂಬಾರ, ಸಿದ್ದು ನಾವಿ ಶಾಂತು ಕಟ್ಟಿಮನಿ, ಈರಪ್ಪ ಲಾಳಸಂಗಿ,ನಾಗು ಕಾಪಸೆ,ರಾಯಲ್ ಗುರು ಸ್ವಾಮಿ ಉಪಸ್ಥಿತರಿದ್ದರು.