ಟಿ-20 ವಿಶ್ವಕಪ್ ಗೆಲ್ಲುವ ಅವಕಾಶ ಭಾರತಕ್ಕಿದೆ: ಅಖ್ತರ್

ಲಾಹೋರ್, ನ 12 :     ಬಾಂಗ್ಲಾದೇಶ ವಿರುದ್ಧ ಟಿ-20 ಸರಣಿ ಜಯದ ಬಳಿಕ ಪ್ರತಿಕ್ರಿಯಿಸಿರುವ ಪಾಕಿಸ್ತಾನ ತಂಡದ ಮಾಜಿ ವೇಗಿ ಶೊಯೆಬ್ ಅಖ್ತರ್, ಮುಂದಿನ ವರ್ಷದ ಟಿ-20 ವಿಶ್ವಕಪ್ ಗೆಲ್ಲಲು ಭಾರತಕ್ಕೆ ಅತ್ಯುತ್ತಮ ಅವಕಾಶವಿದೆ ಎಂದು ಭವಿಷ್ಯ ನುಡಿದಿದ್ದಾರೆ.  ನವದೆಹಲಿಯಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. ಇದರೊಂದಿಗೆ 1-0 ಅಂತರದಲ್ಲಿ ಸರಣಿಯನ್ನು ಆರಂಭಿಸಿತ್ತು. ಬಳಿಕ, ಎಚ್ಚೆತ್ತುಕೊಂಡ ಭಾರತ ಎರಡು ಹಾಗೂ ಮೂರನೇ ಪಂದ್ಯಗಳಲ್ಲಿ ಗೆದ್ದು ಚುಟುಕು ಸರಣಿಯನ್ನು 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು. ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋದಲ್ಲಿ ಮಾತನಾಡಿರುವ ಅವರು, "ಮೊದಲನೇ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದರೂ ನಂತರದ ಪಂದ್ಯಗಳಲ್ಲಿ ಗೆದ್ದು ಸರಣಿಯನ್ನು ತನ್ನದಾಗಿಸಿಕೊಂಡಿತು. ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ನಾಯಕ ರೋಹಿತ್ ಶಮರ್ಾ ಅವರಿಗೂ ಸಲ್ಲುತ್ತದೆ." ಎಂದು ಹೇಳಿದರು. "ರೋಹಿತ್ ಶಮರ್ಾ ಪ್ರತಿಭಾವಂತ ಬ್ಯಾಟ್ಸ್ಮನ್. ತಂಡಕ್ಕೆ ಅಗತ್ಯವೆನಿಸಿದಾಗ ರನ್ ಹೊಳೆ ಹರಿಸುತ್ತಾರೆ. ಮೂರನೇ ಪಂದ್ಯದಲ್ಲಂತೂ ಪ್ರಬಲ ತಂಡವಾಗಿ ಹೊರಹೊಮ್ಮಿತು. ಕೆ.ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅವರ ಸ್ಫೋಟಕ ಅರ್ಧ ಶತಕಗಳು ಭಾರತ ಸರಣಿ ಗೆಲ್ಲುವಲ್ಲಿ ನಿಣರ್ಾಯಕ ಪಾತ್ರವಹಿಸಿತು." ಎಂದು ಹೇಳಿದರು. ಮೂರನೇ ಪಂದ್ಯದಲ್ಲಿ ಭಾರತ ನೀಡಿದ್ದ 175 ರನ್ ಗುರಿ ಹಿಂಬಾಲಿಸಿದ ಬಾಂಗ್ಲಾದೇಶಕ್ಕೆ ಮೊಹಮ್ಮದ್ ನೈಮ್ ಹಾಗೂ ಮೊಹಮ್ಮದ್ ಮಿಥುನ್ ಜೋಡಿ 98 ರನ್ ಜತೆಯಾಟವಾಡಿತ್ತು. ಈ ಜತೆಯಾಟ ಮುರಿದ ನಂತರ, ಬಾಂಗ್ಲಾ 144 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. "ಬಾಂಗ್ಲಾದೇಶ ತಂಡ ಸಾಮಾನ್ಯವಲ್ಲ. ಯಾವುದೇ ತಂಡದ ಎದುರು ಯಾವಾಗ ಬೇಕಾದರೂ ಸಿಡಿದೇಳುವ ಸಾಮಥ್ರ್ಯ ಬಾಂಗ್ಲಾದೇಶಕ್ಕಿದೆ." ಎಂದರು. "ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ದೀಪಕ್ ಚಾಹರ್ ಅವರನ್ನ ಶ್ಲಾಘಿಸಿದ ಮಾಜಿ ವೇಗಿ, " ಸೀಮ್ ಜತೆಗೆ ಮಧ್ಯಮ ವೇಗದಲ್ಲಿ ಬೌಲಿಂಗ್ ಮಾಡಿದ ದೀಪಕ್ ಚಾಹರ್, ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು." ಎಂದು ಗುಣಗಾನ ಮಾಡಿದರು.