ಭಾರತದ ಶಶಿಕುಮಾರ್ ಮುಕುಂದ್, ವಿಜಯ್ ಸುಂದರ್ ಜೋಡಿಗೆ ಜಯ

  ನವದೆಹಲಿ, ನ.21:  ಪೋರ್ಚಗಲ್ ನಲ್ಲಿ ನಡೆಯುತ್ತಿರುವ ಮಾಯಾ ಓಪನ್ ಚಾಲೆಂಜಸರ್್ ಟೆನಿಸ್ ಟೂನರ್ಿಯಲ್ಲಿ ಭಾರತದ ಶಶಿಕುಮಾರ್ ಮುಕುಂದ್ ಹಾಗೂ ಎನ್ ವಿಜಯ್ ಸುಂದರ್ ಪ್ರಶಾಂತ್ ಅವರು ಜಯ ಸಾಧಿಸಿದ್ದಾರೆ.     ಪುರುಷರ ಡಬಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಪಂದ್ಯದಲ್ಲಿ ಭಾರತದ ಜೋಡಿ ಸ್ವಿಟ್ಜಲರ್ೆಂಡ್ನ ಲುಕಾ ಮಾರ್ಗರೋಲಿ ಮತ್ತು ಇಟಲಿಯ ಅಮ್ಡ್ರಿಯಾ ವವಾಸೊರಿ ಜೋಡಿಯನ್ನು ಮಣಿಸಿದರು.     ಮೊದಲ ಗೇಮ್ ನಲ್ಲಿ ಎದುರಾಳಿ ತಂಡದ ನಡೆಯನ್ನು ಅರಿತು ಆಡುವಲ್ಲಿ ವಿಫಲವಾದ ಜೋಡಿ ಅಂಕಗಳನ್ನು ಬಿಟ್ಟುಕೊಟ್ಟು ಕೈ ಸುಟ್ಟುಕೊಂಡಿತು. ಮೊದಲ ಸೆಟ್ ನಲ್ಲಿ ಅನುಭವಿಸಿದ್ದ ನಿರಾಸೆಯನ್ನು ಮರೆತು ಎರಡನೇ ಸೆಟ್ ನಲ್ಲಿ ಪುಟಿದೇಳುವ ಸೂಚನೆ ನೀಡಿತು. ಅಲ್ಲದೆ ಎರಡನೇ ಸೆಟ್ ನಲ್ಲಿ ಉತ್ತಮ ಪ್ರತಿ ತಂತ್ರವನ್ನು ಹೆಣೆದು ಸೆಟ್ ನ್ನು 6-4 ರಿಂದ ಗೆದ್ದು ಬೀಗಿತು.     ಟೈ ಬ್ರೇಕ್ ನಲ್ಲೂ ಅಮೋಘ ಪ್ರದರ್ಶನ ನೀಡಿದ ಭಾರತದ ಜೋಡಿ 11-9 ರಿಂದ ಗೆದ್ದು ಮುನ್ನಡೆ ಸಾಧಿಸಿತು.