ವೆಲ್ಲಿಂಗ್ಟನ್, ಫೆ 24, ಟಿಮ್ ಸೌಥಿ(61 ಕ್ಕೆ 5) ಹಾಗೂ ಟ್ರೆಂಟ್ ಬೌಲ್ಟ್(39 ಕ್ಕೆ 4) ಅವರ ಮಾರಕ ದಾಳಿಯ ನೆರವಿನಿಂದ ನ್ಯೂಜಿಲೆಂಡ್ ತಂಡ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯರು 1-0 ಮುನ್ನಡೆ ಗಳಿಸಿದರು.ಇಲ್ಲಿನ ಬೇಸಿನ್ ರಿವರ್ ಅಂಗಳದಲ್ಲಿ ನಾಲ್ಕನೇ ದಿನವಾದ ಇಂದು, ಭಾರತ ತಂಡವನ್ನು ದ್ವಿತೀಯ ಇನಿಂಗ್ಸ್ನಲ್ಲಿ 191 ರನ್ಗಳಿಗೆ ಆತಿಥೇಯರು ಆಲೌಟ್ ಮಾಡಿದರು. ಆ ಮೂಲಕ ಕೊಹ್ಲಿ ಪಡೆ ನೀಡಿದ್ದ ಕೇವಲ ಒಂಬತ್ತು ರನ್ ಗುರಿ ಮುಟ್ಟಿದ ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ 100ನೇ ಪಂದ್ಯ ಗೆದ್ದು ಬೀಗಿತು. 100 ಟೆಸ್ಟ್ ಪಂದ್ಯಗಳು ಗೆದ್ದ ವಿಶ್ವದ ಏಳನೇ ತಂಡ ಎಂಬ ಸಾಧನೆಗೆ ಕೇನ್ ವಿಲಿಯಮ್ಸನ್ ಪಡೆ ಭಾಜನವಾಯಿತು.ಆರಂಭಿಕರಾದ ಟಾಮ್ ಬ್ಲಂಡೆಲ್ ಮತ್ತು ಟಾಮ್ ಲಥಾಮ್ ಜೋಡಿಯು 1.4 ಓವರ್ಗಳಲ್ಲಿಯೇ ತಂಡವನ್ನು ಗೆಲುವಿನ ದಡ ಸೇರಿಸಿತು.ಇದಕ್ಕೂ ಮುನ್ನ ಇಂದು ಬೆಳಗ್ಗೆ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಭಾರತ ತಂಡವನ್ನು ಪ್ರಥಮ ಇನಿಂಗ್ಸ್ ರೀತಿಯಲ್ಲಿಯೇ ಟ್ರೆಂಟ್ ಬೌಲ್ಟ್ ಹಾಗೂ ಟಿಮ್ ಸೌಥಿ ಅವರು ಕಟ್ಟಿ ಹಾಕಿದರು.
ನಾಲ್ಕ ವಿಕೆಟ್ ಕಳೆದುಕೊಂಡು 144 ರನ್ ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಭಾರತ 39 ರನ್ ಹಿನ್ನಡೆಯಲ್ಲಿತ್ತು. ಆದರೆ, ಟಿಮ್ ಸೌಥಿ ಅವರ ಮಾರಕ ದಾಳಿಗೆ ನಲುಗಿ ಕೇವಲ ಓವರ್ಗಳಿಗೆ 47 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.ಮೂರನೇ ದಿನ ಕಿವೀಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದ ಅಜಿಂಕ್ಯಾ ರಹಾನೆ (29) ಮತ್ತು ಹನುಮ ವಿಹಾರಿ ಇಂದು ಬಹುಬೇಗ ಡ್ರೆಸ್ಸಿಂಗ್ ಕೊಠಡಿಗೆ ಮುಖ ಮಾಡಿದರು. ರಿಷಭ್ ಪಂತ್ 25 ರನ್ ಗಳಿಸಿ ಕೊಂಚ ಪ್ರತಿರೋಧ ತೋರಿದರು. ಆದರೆ, ಅವರನ್ನು ಕ್ರೀಸ್ನಲ್ಲಿ ದೊಡ್ಡ ಇನಿಂಗ್ಸ್ ಕಟ್ಟಲು ಟಿಮ್ ಸೌಥಿ ಬಿಡಲಿಲ್ಲ.ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಜಸ್ಪ್ರಿತ್ ಬುಮ್ರಾ, ಹಾಗೂ ಮೊಹಮ್ಮದ್ ಶಮಿ ಅವರು ನ್ಯೂಜಿಲೆಂಡ್ ಕೆಳ ಕ್ರಮಾಂಕದ ಆಟಗಾರರಿಂದ ಸ್ಪೂರ್ತಿ ಪಡೆಯಲೇ ಇಲ್ಲ. ಕಿವೀಸ್ ದಾಳಿಗೆ ಪೆವಿಲಿಯನ್ಗೆ ಪೇರೆಡ್ ನಡೆಸಿದರು. ಒಟ್ಟಾರೆ, ಭಾರತ 81 ಓವರ್ಗಳಿಗೆ 191 ರನ್ಗಳಿಗೆ ದ್ವಿತೀಯ ಇನಿಂಗ್ಸ್ನಲ್ಲಿ ಆಲೌಟ್ ಆಯಿತು.ಟಿಮ್ ಸೌಥಿ 61 ರನ್ ನೀಡಿ ಐದು ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್ ಕೇವಲ 39 ರನ್ ನೀಡಿ ನಾಲ್ಕು ವಿಕೆಟ್ ಕಿತ್ತರು. ಇನ್ನುಳಿದ ಒಂದು ವಿಕೆಟ್ ಅನ್ನು ಕಾಲಿನ್ ಡಿ ಗ್ರಾಂಡ್ಹೋಮ್ ಪಡೆದರು.ಬಳಿಕ ಒಂಬತ್ತು ರನ್ ಗುರಿ ಹಿಂಬಾಲಿಸಿದ ನ್ಯೂಜಿಲೆಂಡ್ ತಂಡವನ್ನು ಲಥಾಮ್ (7) ಹಾಗೂ ಬ್ಲಂಡೆಲ್(2) ವಿಕೆಟ್ ನಷ್ಟವಿಲ್ಲದೆ ಗೆಲುವಿನ ದಡ ಸೇರಿಸಿದರು.
ನ್ಯೂಜಿಲೆಂಡ್ ತಂಡದ ಮೂರು ವೇಗಿಗಳು ಅದ್ಭುತ ಬೌಲಿಂಗ್ ಮಾಡಿದರು. ಇವರ ಮಾರಕ ದಾಳಿಗೆ ಭಾರತದ ವಿಶ್ವ ಶ್ರೇಷ್ಠ ಬ್ಯಾಟಿಂಗ್ ವಿಭಾಗ ಮಕಾಡೆ ಮಲಗಿತು. ವಿಶೇಷವಾಗಿ ಶಾರ್ಟ್ ಪಿಚ್ ಎಸೆತಗಳು ಮೊದಲನೇ ಪಂದ್ಯದಲ್ಲಿ ಕೊಹ್ಲಿ ಪಡೆಯ ಬ್ಯಾಟ್ಸ್ಮನ್ಗಳಿಗೆ ಮುಳುವಾಯಿತು.ಯುವ ವೇಗಿ ಕೈಲ್ ಜಾಮಿಸನ್ ಚೊಚ್ಚಲ ಪಂದ್ಯದಲ್ಲಿಯೇ ನಾಲ್ಕು ವಿಕೆಟ್ ಪಡೆದರು ಹಾಗೂ 44 ರನ್ ಗಳಿಸಿದ್ದರು. ಆ ಮೂಲಕ ನ್ಯೂಜಿಲೆಂಡ್ ಪ್ರಥಮ ಇನಿಂಗ್ಸ್ನಲ್ಲಿ 183 ರನ್ ಮುನ್ನಡೆಗೆ ನೆರವಾಗಿದ್ದರು.ಒಟ್ಟಾರೆ ಪಂದ್ಯದಲ್ಲಿ ಟಿಮ್ ಸೌಥಿ ಎರಡೂ ಇನಿಂಗ್ಸ್ಗಳಲ್ಲಿ 110 ರನ್ ನೀಡಿ ಒಂಬತ್ತು ವಿಕೆಟ್ ಕಬಳಿಸಿದರೆ, ಬೌಲ್ಟ್ 96 ರನ್ ನೀಡಿ ಐದು ವಿಕೆಟ್ ಪಡೆದರು. ನ್ಯೂಜಿಲೆಂಡ್ ಪಾಲಿಗೆ 100ನೇ ಟೆಸ್ಟ್ ಜಯ ಒಂದು ಕಡೆಯಾದರೆ, ಹಿರಿಯ ಬ್ಯಾಟ್ಸ್ಮನ್ ರಾಸ್ ಟೇಲರ್ ಅವರ ಐತಹಾಸಿಕ 100ನೇ ಟೆಸ್ಟ್ ಪಂದ್ಯಕ್ಕೆ ಗೆಲುವಿನ ಸಂಭ್ರಮ ಸಾಕ್ಷಿಯಾಯಿತು. ಅದಲ್ಲದೇ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಟೀಮ್ ಇಂಡಿಯಾಗೆ ಮೊದಲ ಸೋಲು ಇದಾಯಿತು. ಮುಂದಿನ ಶನಿವಾರ ಕ್ರೈಸ್ಟ್ಚರ್ಚ್ ಅಂಗಳದಲ್ಲಿ ಉಭಯ ತಂಡಗಳು ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.ಸಂಕ್ಷಿಪ್ತ ಸ್ಕೋರ್: ಭಾರತ 165 ಹಾಗೂ 191 (ಮಯಾಂಕ್ ಅಗರ್ವಾಲ್ 58, ಟಿಮ್ ಸೌಥಿ 61/5) ನ್ಯೂಜಿಲೆಂಡ್ 348/10 ಹಾಗೂ 9/0(ಟಾಮ್ ಲಥಾಮ್ ಔಟಾಗದೆ 7, ಟಾಮ್ ಬ್ಲಂಡೆಲ್ ಔಟಾಗದೆ