ಆಕ್ಸ್ ಫರ್ಡ್ ವಿವಿಗೆ ೭೭೦ ಕೋಟಿ ದೇಣಿಗೆ ನೀಡಿದ ಭಾರತ ಮೂಲದ ಸಹೋದರರು..!

ಲಂಡನ್,ಜೂನ್ ೧೨, ಮುಂಬೈ ಸೇರಿದ  ಭಾರತೀಯ ಮೂಲದ  ರೂಬೆನ್  ಸಹೋದರರು  ಪ್ರಸಿದ್ದ  ಆಕ್ಸ್‌ಫರ್ಡ್  ವಿಶ್ವವಿದ್ಯಾಲಯಕ್ಕೆ  ಸೇರಿದ   ಪಾರ್ಕ್  ಕಾಲೇಜಿಗೆ ಭಾರಿ ದೇಣಿಗೆ ನೀಡಿದ್ದಾರೆ. ಒಟ್ಟು ೮ ಕೋಟಿ ಪೌಂಡ್ (ಸುಮಾರು ೭೭೦ ಕೋಟಿ ರೂ.) ದೇಣಿಗೆ ನೀಡಿದ್ದಾರೆ,  ಡೇವಿಡ್ ರೂಬೆನ್ (೮೧)  ಸಿಮೊನ್  ರೂಬೆನ್ (೭೮) ಬಾರಿ  ದೇಣಿಗೆ  ನೀಡಿ  ಉದಾರತೆ  ಮೆರೆದಿದ್ದಾರೆ. ಈ  ದೇಣಿಗೆಯನ್ನು   ವಿದ್ಯಾರ್ಥಿ ವೇತನ ಕಾರ್ಯಕ್ರಮಕ್ಕೆ  ಬಳಸಲಿದ್ದಾರೆ.  ಬಾಗ್ದಾದಿ ಯಹೂದಿ ಸಮುದಾಯಕ್ಕೆ ಸೇರಿದ  ರೂಬೆನ್ ಸಹೋದರರು ಮುಂಬೈನಲ್ಲಿ ಜನಿಸಿದ್ದರು. ೧೯೫೦ ರಲ್ಲಿ,  ತಾಯಿ ನ್ಯಾನ್ಸಿಯೊಂದಿಗೆ ಬ್ರಿಟನ್ ಗೆ ತೆರಳಿದ್ದರು. ೧೯೯೦ ರಲ್ಲಿ ಅವರು ಗಣಿಗಾರಿಕೆ ಮತ್ತು ಸರಕುಗಳ ವ್ಯವಹಾರದೊಂದಿಗೆ ವೃತ್ತಿ ಜೀವನ ಪ್ರಾರಂಭಿಸಿದರು. ನಂತರ, ಸಿಮೋನ್  ಕಾರ್ಪೆಟ್ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು.  ಡೇವಿಡ್ .. ಸ್ಕ್ರ್ಯಾಪ್ ಮೆಟಲ್ ವ್ಯವಹಾರದಲ್ಲಿ   ಭಾರಿ  ಹಣ ಸಂಪಾದಿಸಿದರು.  ಪ್ರಸ್ತುತ ರೂಬೆನ್ ಸಹೋದರರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರೆ.  ’ದಿ ಸಂಡೇ ಟೈಮ್ಸ್’ ಪ್ರಕಾರ, ಈ ಜೋಡಿ ೧೬ ಬಿಲಿಯನ್ ಸಂಪತ್ತು ಹೊಂದಿರುವ  ಬ್ರಿಟಿಷ್ ಪ್ರಸಿದ್ಧ ವ್ಯಕ್ತಿಗಳ  ಪಟ್ಟಿಯಲ್ಲಿ   ಎರಡನೇ ಸ್ಥಾನದಲ್ಲಿದ್ದಾರೆ. ರುಬೆನ್ ಫೌಂಡೇಶನ್ ನೀಡಿದ ಬೃಹತ್ ದೇಣಿಗೆ ಐತಿಹಾಸಿಕ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ತಿಳಿಸಿದೆ.