ನವದೆಹಲಿ, ಆ 21 ಭಾರತ ಮತ್ತು ಜಾಂಬಿಯಾ ನಡುವಿನ ವ್ಯಾಪಾರ ವಹಿವಾಟು, ಹೂಡಿಕೆ, ಅಭಿವೃದ್ಧಿಯಲ್ಲಿನ ಸಹಕಾರ ಮತ್ತು ಸಾಮಥ್ರ್ಯ ವೃದ್ಧಿಗಾಗಿ ದೆಹಲಿಯಲ್ಲಿ ಬುಧವಾರ ದ್ವಿಪಕ್ಷೀಯ ಮಾತುಕತೆ ನಡೆಸಲಾಗಿದೆ
ಪ್ರಧಾನಿ ನರೇಂದ್ರ ಮೋದಿಯವರು ಜಾಂಬಿಯಾ ಅಧ್ಯಕ್ಷ ಎಡ್ಗರ್ ಚಾಗ್ವಾ ಲುಂಗು ರಕ್ಷಣಾ ಮತ್ತು ನವೀಕರಿಸಬಹುದಾದ ಇಂಧನಗಳ ಕುರಿತು ಪರಸ್ಪರ ಸಹಕಾರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಮತ್ತು ಜಾಂಬಿಯಾದ ಅಧ್ಯಕ್ಷ ಎಡ್ಗರ್ ಚಾಗ್ವಾ ಲುಂಗು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಕುರಿತು ವ್ಯಾಪಕ ಚರ್ಚೆ ನಡೆಸಿದರು, ವಿಶೇಷವಾಗಿ ವ್ಯಾಪಾರ ಮತ್ತು ಹೂಡಿಕೆ, ಅಭಿವೃದ್ಧಿ ಸಹಕಾರ, ಸಾಮಥ್ರ್ಯ ವೃದ್ಧಿ, ರಕ್ಷಣೆ ನವೀಕರಿಸಬಹುದಾದ ಇಂಧನದ ಕುರಿತು ಮಾತುಕತೆ ನಡೆದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಟ್ವೀಟ್ ಮಾಡಿದ್ದಾರೆ
ಭಾರತ ಪ್ರವಾಸದಲ್ಲಿರುವ ಜಾಂಬಿಯಾ ಅಧ್ಯಕ್ಷ ಲುಂಗು,ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಿದ್ದರು. ರಾಮನಾಥ್ ಕೋವಿಂದ್ ಕಳೆದ ವರ್ಷ 2018ರ ಏಪ್ರಿಲ್ ನಲ್ಲಿ ಜಾಂಬಿಯಾ ದೇಶಕ್ಕೆ ಭೇಟಿ ನೀಡಿದ್ದರು.
ಅಧ್ಯಕ್ಷ ಎಡ್ಗರ್ ಲುಂಗು ಅವರೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಜೋಸೆಫ್ ಮಲಂಜಿ ಸೇರಿದಂತೆ ಉನ್ನತ ಮಟ್ಟದ ನಿಯೋಗ ಆಗಮಿಸಿದೆ. ವಾಣಿಜ್ಯ ಸಚಿವ ಕ್ರಿಸ್ಟೋಫರ್ ಯಲುಮಾ, ಗಣಿ ಮತ್ತು ಖನಿಜ ಅಭಿವೃದ್ಧಿ ಸಚಿವ ರಿಚರ್ಡ್ ಮುಸುಕ್ವಾ ಮತ್ತು ಅಧ್ಯಕ್ಷೀಯ ವ್ಯವಹಾರಗಳ ಸಚಿವ ಫ್ರೀಡಮ್ ಸಿಕಾಜ್ವೆ ಜೊತೆಗೆ ಹಿರಿಯ ಸರ್ಕಾರಿ ಅಧಿಕಾರಿಗಳು ಈ ನಿಯೋಗದಲ್ಲಿದ್ದಾರೆ.