ಉತ್ತುಂಗದಲ್ಲಿ ಭಾರತ - ಅಮೆರಿಕ ಬಾಂಧವ್ಯ : ಪಿಯೂಷ್ ಗೋಯಲ್

ನವದೆಹಲಿ, ಅ 4:   ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಹಿಂದೆಂದಿಗಿಂತಲೂ ಈಗ ಉನ್ನತ ಮಟ್ಟದಲ್ಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ನವದೆಹಲಿಯಲ್ಲಿ ವಿಶ್ವ ಆರ್ಥಿಕ ವೇದಿಯ ಭಾರತ ಶೃಂಗದಲ್ಲಿ ಮಾತನಾಡಿದ ಅವರು, ಉಭಯ ದೇಶಗಳ ನಡುವಣ ಪರಸ್ಪರ ಅರ್ಥಿಸುವಿಕೆ ಇನ್ನಷ್ಟು ಉತ್ತಮವಾಗಿದೆ. ವ್ಯಾಪಾರ ಸಂಬಂಧ ಆರೋಗ್ಯಕರವಾಗಿ ಸುಧಾರಿಸಲು ಭಾರತ - ಅಮೆರಿಕ ಪಣತೊಟ್ಟಿವೆ ಎಂದರು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ಸಾಲಿಗೆ ಸೇರಿರುವ ಭಾರತದಲ್ಲಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು ಭಾರತ ವ್ಯಾಪಾರ ವಲಯದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಸಚಿವರು ಹೇಳಿದರು. ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರೋಸ್ ಸಹ ಶೃಂಗದಲ್ಲಿ ಪಾಲ್ಗೊಂಡಿದ್ದು, ಉಭಯ ಆರ್ಥಿಕತೆಗಳ ನಡುವೆ ವ್ಯಾಪಾರ ಸಾಧ್ಯವಿದೆ ಎಂಬುದನ್ನು ಸೂಚ್ಯವಾಗಿ ಹೇಳಿದರು. ಕೃತಕ ವ್ಯಾಪಾರ ಅಡೆತಡೆಗಳ ನಿವಾರಣೆಗೆ ಎರಡೂ ದೇಶಗಳು ದ್ವಿಪಕ್ಷೀಯವಾಗಿ ಆದ್ಯ ಗಮನ ನೀಡಬೇಕು ಎಂದರು. ವ್ಯಾಪಾರ ಕೊರತೆಯನ್ನು ನೀಗಿಸುವುದು ಮಾತ್ರವಲ್ಲ ಭಾರತದೊಂದಿಗಿನ ಒಟ್ಟಾರೆ ವ್ಯಾಪಾರ ವಹಿವಾಟು ಹೆಚ್ಚಳಕ್ಕೂ ಅಮೆರಿಕ ಆದ್ಯತೆ ನೀಡಿದೆ ಎಂದು ಅವರು ಹೇಳಿದರು.