ಭಯೋತ್ಪಾದನೆ ನಿಗ್ರಹಕ್ಕೆ ಒಟ್ಟಾಗಿ ಹೋರಾಡಲು ಭಾರತ-ಫಿಲಿಪೈನ್ಸ್ ಸಮ್ಮತಿ

ನವದೆಹಲಿ, ಅ 19:   ಭಯೋತ್ಪಾದನೆಯನ್ನು ಎಲ್ಲಾ ರೀತಿಯಲ್ಲೂ ಸೋಲಿಸಿ, ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ನಿಕಟವಾಗಿ ಕೆಲಸ ಮಾಡಲು ಭಾರತ ಮತ್ತು ಫಿಲಿಪೈನ್ಸ್ ಬದ್ಧವಾಗಿವೆ. ಫಿಲಿಪೈನ್ಸ್ ರಾಜಧಾನಿ ಮನಿಲಾದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಅಲ್ಲಿನ ಅಧ್ಯಕ್ಷ ರೊಡ್ರಿಗೋ ಡುಟಟರ್ೆ ಅವರೊಂದಿಗೆ ನಡೆಸಿದ ನಿಯೋಗ ಮಟ್ಟದ ಮಾತುಕತೆಯ ನಂತರ ಹೊರಡಿಸಲಾದ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಲಾಗಿದೆ.  ಎರಡೂ ದೇಶಗಳು ಭಯೋತ್ಪಾದನೆಗೆ ತುತ್ತಾಗಿವೆ. ಈ ನಿಟ್ಟಿನಲ್ಲಿ ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಿ ಇದನ್ನು ನಿರ್ಮೂಲನೆಗೊಳಿಸಲು ಉಭಯ ದೇಶಗಳು ಒಪ್ಪಿವೆ. ರಕ್ಷಣಾ ಮತ್ತು ಕಡಲ ಭದ್ರತಾ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಮತ್ತು  ಇದು ದ್ವಿಪಕ್ಷೀಯ ಸಹಕಾರದ ಪ್ರಮುಖ ಆಧಾರ ಸ್ತಂಭವಾಗಿಸಲು ಫಿಲಿಪೈನ್ಸ್ ಮತ್ತು ಭಾರತ ಒಪ್ಪಿವೆ ಎಂದು ರಾಮನಾಥ್ ಕೋವಿಂದ್ ಹೇಳಿದ್ದಾರೆ. ಫಿಲಿಪೈನ್ಸ್ ನಲ್ಲಿ ಬಾಹ್ಯಾಕಾಶ ಕಾರ್ಯಕ್ರಮ ಬಲಪಡಿಸಲು ಸಹಕಾರ ನೀಡುವುದಕ್ಕೆ ಭಾರತ ಬದ್ಧವಾಗಿದೆ.  ಎರಡೂ ದೇಶಗಳ ನಡುವೆ ನೇರ ವಿಮಾನಗಳ ಸೇವೆ ಆರಂಭಿಸುವ ಬಗ್ಗೆ ಉಭಯ ದೇಶಗಳು ಆಲೋಚಿಸುತ್ತಿವೆ. ಇದು ಸಂಪರ್ಕಕ್ಕೆ ಉತ್ತೇಜನ ನೀಡಲಿವೆ. ಉಭಯ ದೇಶಗಳು ತಮ್ಮ ಪ್ರಾಚೀನ ಸಂಬಂಧಗಳನ್ನು ಸಂಶೋಧಿಸಲು ಮತ್ತು ದಾಖಲಿಸಲು ತಜ್ಞರ ಸಮಿತಿಯನ್ನು ರಚಿಸಲಿವೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ. ಮಾತುಕತೆ ನಂತರ, ಭಾರತ ಮತ್ತು ಫಿಲಿಪೈನ್ಸ್ ಕಡಲ ಕ್ಷೇತ್ರ, ಭದ್ರತೆ, ಪ್ರವಾಸೋದ್ಯಮ, ವಿಜ್ಞಾನ-ತಂತ್ರಜ್ಞಾನ ಮತ್ತು ಸಂಸ್ಕೃತಿಯನ್ನು ಒಳಗೊಂಡ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದವು.  ರಾಮ್ ನಾಥ್ ಕೋವಿಂದ್ ಅವರು ಫಿಲಿಪೈನ್ಸ್ ಮತ್ತು ಜಪಾನ್ನ ಎರಡು ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ.