16 ರಿಂದ ಭಾರತ- ಜಪಾನ್ ಜಂಟಿ ಸಮರ ತಾಲೀಮು

ಚೆನ್ನೈ, ಜ 13 :               ಭಾರತ- ಜಪಾನ್  ಜಂಟಿ  ತಾಲಿಮು ನಡೆಸಲು ಜಪಾನ್ ಕೋಸ್ಟ್ ಗಾರ್ಡ್ ಹಡಗು 'ಎಚಿಗೊ' ಚನ್ನೈಗೆ ಕರಾವಳಿಗೆ ಆಗಮಿಸಿದೆ .

ವಾರ್ಷಿಕ ಜಂಟಿ ಸಮರಾಬ್ಯಾಸ 'ಸಹ್ಯೋಗ್-ಕಾಜಿರಿ' ಚೆನ್ನೈ ಕರಾವಳಿಯಲ್ಲಿ ಇದೆ 16 ರಂದು ನಡೆಯಲಿದೆ.

2000 ರಲ್ಲಿ ಸ್ಥಾಪನೆಯಾದಾಗಿನಿಂದ  ಇದು ಎರಡು ಕರಾವಳಿ ಪಡೆಗಳ ನಡುವೆ ನಡೆಯಲಿರುವ  19 ನೇ ಸಮರ ಅಭ್ಯಾಸವಾಗಿದೆ. 

ಕೋಸ್ಟ್ ಗಾರ್ಡ್ ಕಮಾಂಡೆಂಟ್ ಅಡ್ಮಿರಲ್ ತಕಾಹಿರೊ ಒಕುಶಿಮಾ ಮತ್ತು ಭಾರತೀಯ

ಕೋಸ್ಟ್ ಗಾರ್ಡ್ (ಐಸಿಜಿ) ಮಹಾನಿರ್ದೇಶಕ ಕೃಷ್ಣಸ್ವಾಮಿ ನಟರಾಜನ್, ಜೆಸಿಜಿ ಹಡಗು ಎಚಿಗೊ ಜೊತೆಗೆ. ನಾಲ್ಕು ಐಸಿಜಿ ಹಡಗುಗಳು, ಮೂರು ವಿಮಾನಗಳು ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (ಎನ್ಐಒಟಿ) ಯ ಹಡಗು ಜಂಟಿ ತಾಲೀಮಿನಲ್ಲಿ  ಭಾಗವಹಿಸಲಿವೆ.

ಎರಡು  ದೇಶಗಳ ನಡುವೆ ಪರಸ್ಪರ  ಸಂಬಂಧ ಬಲಪಡಿಸುವುದು ಮತ್ತು ಪರಸ್ಪರ ತಿಳುವಳಿಕೆ ಹೆಚ್ಚಿಸುವುದು  ಇದರ  ಉದ್ದೇಶವಾಗಿದೆ .

ಕೋಸ್ಟ್ ಗಾರ್ಡ್ಸ್, ಸಂವಹನದಲ್ಲಿ ಅಂತರ-ಕಾರ್ಯಾಚರಣೆ  ಹೆಚ್ಚಿಸಲಿದೆ ಹಾಗೆಯೇ ಹುಡುಕಾಟ ಮತ್ತು ಕಡಲುಗಳ್ಳರ ಚಲನವಲನ ಪತ್ತೆಮಾಡಲು ಈ ತಾಲೀಮು  ಪ್ರಯೋಜನಕಾರಿಯಾಗಲಿದ್ದು,  ದ್ವಿಪಕ್ಷೀಯ ಸಂಬಂಧವನ್ನು ಶಕ್ತಗೊಳಿಸಲಿದೆ. 

ಈ ಅವಧಿಯಲ್ಲಿ  ಅಧಿಕಾರಿಗಳ ಭೇಟಿ,ಸಂವಾದ  ಸಾಂಸ್ಕೃತಿಕ  ಚಟುವಟಿಕೆಗಳನ್ನು ಯೋಜಿಸಲಾಗಿದೆ

1518