ನವದೆಹಲಿ, ಮೇ ೨೦,ಭಾರತದಲ್ಲಿ ಒಂದೇ ದಿನ ೧ ಲಕ್ಷದ ೮ ಸಾವಿರದ ೧೨೧ ಮಂದಿಗೆ ಕೊರೊನಾ ಸೋಂಕು ಪರೀಕ್ಷೆ ನಡೆಸಲಾಗಿದೆ. ದೇಶದಲ್ಲಿ ಈವರೆಗೆ ೨೫,೧೨,೩೮೮ ಮಂದಿಗೆ ಕೋವಿಡ್ -೧೯ ಪರೀಕ್ಷೆಗಳನ್ನು ನಡೆಸಿದ್ದೇವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ತಿಳಿಸಿದೆ೧೩೦ ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕೊರೊನಾ ಪರೀಕ್ಷೆಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ನಡೆಸಲಾಗುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿರುವ ನಡುವೆಯೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಪ್ರತಿನಿತ್ಯ ಪರೀಕ್ಷಾ ಸಂಖ್ಯೆಗಳನ್ನು ಹೆಚ್ಚಿಸಿದೆ. ನಿತ್ಯ ಕನಿಷ್ಟ ಲಕ್ಷ ಮಂದಿಗೆ ಕೊರೊನಾ ವೈರಸ್ ಟೆಸ್ಟ್ ಪರೀಕ್ಷೆಗಳನ್ನು ನಡೆಸಲು ಕ್ರಮ ಕೈಗೊಂಡಿದೆ.
ಈ ಎಲ್ಲ ಪರೀಕ್ಷೆಗಳನ್ನು ದೇಶಿಯವಾಗಿ ತಯಾರಿಸಿರುವ ಟೆಸ್ಟ್ ಕಿಟ್ ಗಳ ಮೂಲಕವೇ ನಡೆಸಲಾಗಿದೆ. ಚೈನಾ, ಕೊರಿಯಾ ಮತ್ತಿತರ ದೇಶಗಳಿಂದ ಆಮದುಮಾಡಿಕೊಂಡ ಕಿಟ್ ಗಳು ಕಳೆಪೆ ಎಂದು ಕಂಡು ಬಂದ ನಂತರ ಕಿಟ್ ಗಳನ್ನು ದೇಶಿಯ ತಂತ್ರಜ್ಞಾನದಿಂದ ತಯಾರಿಸಲಾಗುತ್ತಿದೆ.ಇನ್ನು ಭಾರತದಲ್ಲಿ ಈವರೆಗೆ ೧ ಲಕ್ಷದ ೭ ಸಾವಿರ ಮಂದಿಗೆ ಕೊರೊನಾ ಸೋಂಕು ತಗುಲಿದೆ. ೪೨,೨೯೮ ಮಂದಿ ಚೇತರಿಸಿಕೊಂಡಿದ್ದಾರೆ. ೩,೩೦೩ ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಗುಣಮುಖಹೊಂದುತ್ತಿರುವವರ ಪ್ರಮಾಣ ಶೇ ೩೯ರಷ್ಟು ದಾಟಿದೆ. ಮರಣ ಪ್ರಮಾಣ ಇಡೀ ಪ್ರಪಂಚದಲ್ಲಿಯೇ ಅತ್ಯಂತ ಕಡಿಮೆ ಶೇ. ೩ ರಷ್ಟು ಮಾತ್ರವೇ ಇದೆ. ದೇಶದಲ್ಲಿ ಪ್ರಸ್ತುತ ಲಾಕ್ ಡೌನ್ ನಾಲ್ಕನೇ ಹಂತ ಜಾರಿಯಲ್ಲಿದೆ. ಭಾರಿ ಪ್ರಮಾಣದ ಸಡಿಲಿಕೆಯ ನಂತರ ಕೊರೊನಾ ಪ್ರಕರಣಗಳ ಸಂಖ್ಯೆ ಕೂಡಾ ಹೆಚ್ಚಳಗೊಳ್ಳುತ್ತಿವೆ.