ಹ್ಯಾಮಿಲ್ಟನ್, ಫೆ.13 : ವಿಶ್ವದ ನಂಬರ್ ಒನ್ ಟೆಸ್ಟ್ ತಂಡವಾದ ಭಾರತ ತನ್ನ ಕೊನೆಯ ಏಳು ಟೆಸ್ಟ್ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದಿದೆ. ಆದರೆ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವ ಉದ್ದೇಶದಿಂದ ಶುಕ್ರವಾರದಿಂದ ನ್ಯೂಜಿಲೆಂಡ್ ಇಲೆವೆನ್ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದೆ.
ಈ ಪ್ರವಾಸದಲ್ಲಿ ಭಾರತ ಟಿ-20 ಸರಣಿಯನ್ನು 5–0ರಿಂದ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿತ್ತು. ಆದರೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 0-3 ಅಂತರದ ಕ್ಲೀನ್ ಸ್ವೀಪ್ ಸೋಲು ಕಂಡಿತು.
ಭಾರತ ತನ್ನ ಕೊನೆಯ ಏಳು ಟೆಸ್ಟ್ ಪಂದ್ಯಗಳನ್ನು 200 ಕ್ಕೂ ಹೆಚ್ಚು ರನ್ ಗಳ ಅಂತರದಿಂದ ಗೆದ್ದಿದೆ. ಫೆಬ್ರವರಿ 21 ರಿಂದ ಪ್ರಾರಂಭವಾಗುವ ಎರಡು ಟೆಸ್ಟ್ ಸರಣಿಯಲ್ಲಿ, ಟೀಮ್ ಇಂಡಿಯಾ ಗೆಲುವಿಗೆ ರೂಪುರೇಷೆಗಳನ್ನು ಹೆಣೆದುಕೊಂಡಿದೆ. ಏಕದಿನ ಸರಣಿಯಲ್ಲಿ ಕಂಡಿದ್ದ ಸೋಲನ್ನು ಮರೆಯಲು ಭಾರತ ತಂಡಕ್ಕೆ ಟೆಸ್ಟ್ ಸರಣಿಯಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ.
ಆರಂಭಿಕ ರೋಹಿತ್ ಶರ್ಮಾ ಗಾಯದ ಸಮಸ್ಯೆಯಿಂದ ಪ್ರವಾಸದಿಂದ ಹೊರಗುಳಿದಿದ್ದಾರೆ. ಇವರು ತಂಡದಿಂದ ಹೊರ ನಡೆದಿದ್ದು, ಭಾರತಕ್ಕೆ ಮತ್ತೊಮ್ಮೆ ಆರಂಭಿಕ ಸಮಸ್ಯೆ ತಲೆದೂರುವಂತೆ ಮಾಡಿದೆ. ಮಯಾಂಕ್ ಅಗರ್ ವಾಲ್ ಮತ್ತು ರೋಹಿತ್ ಜೋಡಿ ಇನ್ನಿಂಗ್ಸ್ ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡ ಮೇಲೆ ಹಿಂತಿರುಗಿ ನೋಡಲೇ ಇಲ್ಲ. ಈ ಇಬ್ಬರೂ 90ರ ಸರಾಸರಿಯಲ್ಲಿ ರನ್ ಕಲೆ ಹಾಕಿದೆ. ಇದರಿಂದ ತಂಡ ನೆಮ್ಮದಿ ಇಂದ ಇರಲು ಸಾಧ್ಯವಾಯಿತು. ದೇಶೀಯ ಮಟ್ಟದಲ್ಲಿ ಅದ್ಭುತ ಪ್ರದರ್ಶನ ನೀಡಿದ ಮಯಾಂಕ್ ಏಕದಿನ ಸರಣಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ.
ಕ್ರೈಸ್ಟ್‌ಚರ್ಚ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಅನಧಿಕೃತ ಟೆಸ್ಟ್‌ನಲ್ಲಿ ಮಯಾಂಕ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಶೂನ್ಯ ಗಳಿಸಿದರು. ಮತ್ತು ಏಕದಿನ ಸರಣಿಯಲ್ಲಿ 32, 3 ಮತ್ತು 1 ರ ಸಾಧಾರಣ ರನ್ ಕಲೆ ಹಾಕಿ ನಿರಾಸೆ ಕಂಡರು. ಈ ಪಂದ್ಯದಲ್ಲಿ ಮಯಾಂಕ್ ಇನ್ನಿಂಗ್ಸ್ ಆರಂಭಿಸಲಿದ್ದು, ಇವರ ಮೇಲೆ ಭರವಸೆ ಹೆಚ್ಚಿದೆ.