ಪ್ರವಾಸೋದ್ಯಮ ವಲಯ ಸ್ಥಾಪನೆ ಒಪ್ಪಂದಕ್ಕೆ ಭಾರತ – ಮಾಲ್ಡವೀಸ್ ಸಹಿ

ನವದೆಹಲಿ, ಫೆ 3, ಅಡ್ಡುವಿನ ಐದು ದ್ವೀಪ ಪ್ರದೇಶಗಳಲ್ಲಿ ಅಡ್ಡು ಪ್ರವಾಸೋದ್ಯಮ ವಲಯ ನಿರ್ಮಾಣ ಸಂಬಂಧ ಭಾರತ ಮತ್ತು ಮಾಲ್ಡೀವ್ಸ್ ಒಪ್ಪಂದಕ್ಕೆ ಸಹಿ ಹಾಕಿವೆ.ಪ್ರವಾಸೋದ್ಯಮ ಚಟುವಟಿಕೆಗೆ ಉತ್ತೇಜನ ನೀಡಲು ಅಡ್ಡು ದ್ವೀಪಗಳಲ್ಲಿ 2.49 ದಶಲಕ್ಷ ಡಾಲರ್ ವೆಚ್ಚದಲ್ಲಿ ದ್ವೀಪ ಅಭಿವೃದ್ಧಿ ಸಂಬಂಧ ಐದು ಒಪ್ಪಂದಗಳಿಗೆ ಉಭಯ ದೇಶಗಳು ಭಾನುವಾರ ಸಹಿ ಹಾಕಿವೆ.ಅಲ್ಲಿನ ವಿದೇಶಾಂಗ ವ್ಯವಹಾರಗಳ ಸಚಿವ ಅಬ್ದುಲ್ಲಾ ಶಾಹಿದ್ ಮತ್ತು ಅಡ್ಡು ನಗರಾಡಳಿತ ಹಾಗೂ ಭಾರತದ ಹೈಕಮಿಷಿನರ್ ಸುಂಜಯ್ ಸುಧೀರ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಹೌರಾಫುಶಿಯಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆ ಸಂಬಂಧ ಕೂಡ ಆರನೇ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಎಲ್ಲಾ ಆರು ಯೋಜನೆಗಳಿಗೆ ಭಾರತದ ಸಮುದಾಯ ಅಭಿವೃದ್ಧಿ ಯೋಜನೆಯಡಿ ಅನುದಾನ ದೊರೆಯಲಿದೆ. ಈ ಯೋಜನೆಗಳು ದ್ವೀಪ ಪ್ರದೇಶದ ಅಗತ್ಯಗಳಿಗೆ ಪೂರಕವಾಗಿದೆ ಎಂದು ಹೇಳಲಾಗಿದೆ.