ಭಾರತ - ಸೌದಿ ಅರೇಬಿಯಾ ಜಂಟಿ ಸೇನಾ ತಾಲೀಮು

ನವದೆಹಲಿ , ಅ 27:   ಪರ್ಶಿಯನ್ ಕೊಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉದ್ವಿಗ್ನತೆಯ ಹೊರತಾಗಿಯೂ, ಸೌದಿ ಅರೇಬಿಯಾದೊಂದಿಗೆ ಶೀಘ್ರದಲ್ಲೇ ಜಂಟಿ ನೌಕಾ ಸಮರಾಬ್ಯಾಸ ನಡೆಸಲು ಭಾರತ ಮುಂದಾಗಿದೆ. 

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲಿದ್ದಾರೆ. ಕಿಂಗ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಮತ್ತು ಸೌದಿ ಅರೇಬಿಯಾದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ದ್ವಿಪಕ್ಷೀಯ ರಕ್ಷಣಾ ಸಹಕಾರ ಹೆಚ್ಚಳ ಕುರಿತು  ಚರ್ಚಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. 

ಭಾರತ ಮತ್ತು ಸೌದಿ ಅರೇಬಿಯಾದ ನೌಕಾಪಡೆಗಳು ಮೊದಲ ಜಂಟಿ ತಾಲೀಮನ್ನು 2019 ರ ಡಿಸೆಂಬರ್ ಅಂತ್ಯದ ವೇಳೆಗೆ ಅಥವಾ 2020 ರ ಜನವರಿ ಆರಂಭದಲ್ಲಿ ನಡೆಸಲಿವೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ತಿಳಿಸಿದ್ದು ಇದು ಬಹಳ ಮಹತ್ವದ್ದಾಗಿದೆ  ಎಂದು ಮುಂಬರುವ ಸೌದಿ ಅರೇಬಿಯಾ ಭೇಟಿಯ ಬಗ್ಗೆ ಪತ್ರಕರ್ತರಿಗೆ ಮಾಹಿತಿ ನೀಡಿದರು.   

2018 ರಲ್ಲಿ  ಅಮೆರಿಕ ಇರಾನ್ ಮೇಲೆ ಮತ್ತೆ ನಿರ್ಬಂಧ ಹೇರಿದ ಪರಿಣಾಮವಾಗಿ ಪರ್ಷಿಯನ್ ಕೊಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿರುವಾಗಲೇ  ಭಾರತವು ಸೌದಿ ಅರೇಬಿಯಾದೊಂದಿಗೆ ಜಂಟಿ  ನೌಕಾ ತಾಲೀಮು ನಡೆಸಲು ಮುಂದಾಗಿದೆ.