ಇಂಡಿ; ಶಿಕ್ಷಕರ ಆರೋಪ ಸತ್ಯಕ್ಕೆ ದೂರ: ಅಧ್ಯಕ್ಷ ಬಸವರಾಜ

ಲೋಕದರ್ಶನ ವರದಿ

ಇಂಡಿ 26: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆಯ ಹಿನ್ನಲೆಯಲ್ಲಿ ಸೀಟುಗಳ ಹಂಚಿಕೆಯಲ್ಲಿ ತಮಗೆ ಅನುಕೂಲ ಬಂದಂತೆ ಅನುಬಂಧ-3 ರನ್ನು ತಯಾರಿಸಿ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದ್ದು ಖಂಡನೀಯ ಸಂಘದ ಬೈಲಾ ಪ್ರ್ರಕಾರವೇ ಸೀಟುಗಳನ್ನು ಇಡಲಾಗಿದೆ. ವಿರೋಧಿಗಳು ತಮಗೆ ಸೋಲಾಗುತ್ತದೆ ಎಂದು ಹತಾಶೆಗೊಳಗಾಗಿ ಈ ಹೇಳಿಕೆ ನೀಡಿದ್ದಾರೆ ಎಂದು ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾವೂರ ಹೇಳಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಅಂಬಣ್ಣ ಸುಣಗಾರ ಹಾಗೂ ಎಸ್.ಆರ್. ಪಾಟೀಲ ಶಿಕ್ಷಣ ಇಲಾಖೆಗೆ ಹೆಚ್ಚಿನ ಸೀಟುಗಳನ್ನು ಮೀಸಲಿಟ್ಟು ತಾವೇ ಅಧ್ಯಕ್ಷರಾಗಬೇಕೆಂಬ ದುರಾಸೆಯಿಂದ ಉಳಿದ ಶಿಕ್ಷಕರನ್ನು ಎತ್ತಿ ಕಟ್ಟಿ ನಮ್ಮ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ನಾವೇನು ಶಿಕ್ಷಕರ ವಿರೋಧಿಗಳಲ್ಲ. ನಮ್ಮ ಕೆಡೆಗೆ ಏನಾದರೂ ಸಣ್ಣ ತಪ್ಪುಗಳಾಗಿದ್ದರೆ ಹಿರಿಯರಾದ ಸುಣಗಾರ ಅವರು ಸಂಘದಲ್ಲಿ ಸರಿಪಡಿಸುವುದನ್ನು ಬಿಟ್ಟು ಬಹಿರಂಗವಾಗಿ ಹೇಳಿಕೆ ನೀಡಿ ಸಂಘದ ವ್ಯವಸ್ಥೆಗೆ ಧಕ್ಕೆ ತರುವ ಕಾರ್ಯ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವಂತಹದ್ದಲ್ಲ ಎಂದ ಅವರು ನಾವು ಸಂಘದ ಬೈಲಾದ ಪ್ರಕಾರ ಕಾನೂನಿನ ಪ್ರಕಾರವೇ ಸೀಟುಗಳನ್ನು ಇಲಾಖಾವಾರು ನೀಡಿದ್ದೇವೆ ಎಂದರು.

ವಿಜಯಪುರ ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎ.ಎಮ್. ವಾಲೀಕಾರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಕೇವಲ 3., ಮುದ್ದೇಬಿಹಾಳ 3, ಸಿಂದಗಿ 3. ವಿಜಯಪುರದಲ್ಲಿ 4 ಸಿಟುಗಳು ಮಾತ್ರ ಇದ್ದು ನಮ್ಮ ಇಂಡಿಯಲ್ಲಿ ಶಿಕ್ಷಕರಿಗೆ 5 ಸೀಟುಗಳನ್ನು ಮೀಸಲಿಟ್ಟಿದ್ದರೂ ಸಹ ತಮಗೆ ಅನ್ಯಾಯವಾಗುತ್ತಿದೆ ಎಂಂದು ಆರೋಪಿಸುತ್ತಿರುವುದು ಯಾವ ನ್ಯಾಯ? ಉಳಿದ ತಾಲೂಕಿಗಿಂತ ನಮ್ಮಲ್ಲೆ ಹೆಚ್ಚು ಸ್ಥಾನ ಇಟ್ಟರೂ ಈ ರೀತಿ ಮಾಡುತ್ತಿರುವ ವಾಲೀಕಾರ ಅವರ ಹಿಂದಿನ ಮರ್ಮವೇನು? ತಿಳಿಯದಂತಾಗಿದೆ ಎಂದರು.

ಅಧಿಕಾರ ವಹಿಸಿಕೊಂಡ ನಂತರ ಕನಿಷ್ಠ 50 ಲಕ್ಷ ರೂ ವೆಚ್ಚದಲ್ಲಿ ಕಟ್ಟಡಗಳ ನಿಮರ್ಾಣ ಮಾಡಿದ್ದೇವೆ. ಸಂಘದ ಮೂರನೆ ಅಂತಸ್ಥಿನ ಕಟ್ಟಡಕ್ಕೆ ಈಗಾಗಲೆ 10 ಲಕ್ಷ ಬಿಡುಗಡೆಯಾಗಿದ್ದು ಶೀಘ್ರದಲ್ಲೆ ಕಟ್ಟಡ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಮೇ 27 ರಿಂದ ನಾಮಪತ್ರ ಸಲ್ಲಿಸಲು ಪ್ರಾರಂಭವಾಗಲಿದ್ದು ಪ್ರಾಮಾಣಿಕವಾಗಿ ಚುನಾವಣೆ ಎದುರಿಸಲಿದ್ದೇವೆ. ಶಿಕ್ಷಕರ ಸಂಘದವರೂ ಸಹ ಪ್ರಾಮಾಣಿಕವಾಗಿ ಚುನಾವಣೆೆ ಎದುರಿಸಿ ಆಯ್ಕೆಯಾಗಿ ಎಂದು ಅದನ್ನು ಬಿಟ್ಟು ಬೇರೆಯವರ ಮೇಲೆ ಸುಖಾ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಿಜಣ್ಣ ಕಾಳೆ, ಶಿವಶರಣ ಹಂಜಗಿ, ವಿಜಯಕುಮಾರ ನಾಯಿಕ್, ಆರ್.ಕೆ. ದುದಗಿ, ಹೆಚ್.ಹೆಚ್. ಗುನ್ನಾಪೂರ, ಎಮ್.ಜೆ. ಅಥಣಿ, ಪ್ರಕಾಶ ವಚಡಿಹಾಳ, ಶ್ರೀನಿವಾಸ ಹುನಗುಂದ, ಆರ್.ಜಿ. ಬಂಡಿ, ಎಸ್.ಎಸ್. ಪೂಜಾರಿ, ಜಿ.ಎಸ್.ಅವಜಿ,  ಮತ್ತಿತರರು ಇದ್ದರು.