ಕೆ.ಜೆ.ಎ. ನಾಮನಿರ್ದೇಶನ ಸದಸ್ಯರಾಗಿ ವಿನೋದ ದೊಡ್ಡಣ್ಣವರ ನೇಮಕ

K.J.A. Appointment of Vinod Doddannavar as a Nominated Member

ಲೋಕದರ್ಶನ ವರದಿ 

ಕೆ.ಜೆ.ಎ. ನಾಮನಿರ್ದೇಶನ ಸದಸ್ಯರಾಗಿ ವಿನೋದ ದೊಡ್ಡಣ್ಣವರ ನೇಮಕ  

ಬೆಳಗಾವಿ 12: ಭರತೇಶ ಶೀಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಅವರನ್ನು ಬೆಂಗಳೂರಿನ ಕರ್ನಾಟಕ ಜೈನ ಅಸೋಶೀಯೇಶನ ಕೆ.ಜೆ.ಎ. ಸಂಸ್ಥೆಗೆ ನಾಮನಿರ್ದೇಶನ ಸದಸ್ಯರಾಗಿ ನೇಮಕ ಮಾಡಲಾಗಿದೆ. 

ಕರ್ನಾಟಕ ಜೈನ ಅಸೋಶೀಯೇಶನ ಸಂಸ್ಥೆಯು 1919ರಲ್ಲಿ ಜೈನ ಸಮುದಾಯದ ಹಿರಿಯರು ಈ ಸಂಸ್ಥೆಯನ್ನು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೆ ಕರ್ನಾಟಕದ ಜೈನ ಸಮಾಜದ ಪ್ರಾತಿನಿಧಿತ್ವ ಹೊಂದಿದ ಸಂಸ್ಥೆಯಾಗಿ ಬೆಳೆಯುತ್ತ ಬಂದಿದೆ. ಈ ಸಂಸ್ಥೆಯು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗೂ ಜೈನ ಸಮಾಜದ ಮಧ್ಯೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತ ಬಂದಿದೆ.  

ಬೆಂಗಳೂರಿನಲ್ಲಿ ತನ್ನದೇ ಆದ ವಸತಿ ನಿಲಯಗಳನ್ನು ಹೊಂದುವ ಮೂಲಕ ಉತ್ತರ ಕರ್ನಾಟದಕ ಜೈನ ವಿದ್ಯಾರ್ಥಿಗಳಿಗೆ ಅನಕೂಲ ಮಾಡಿಕೊಟ್ಟಿದೆ. ಇದೀಗ ಇದೇ ಸಂಸ್ಥೆಯ ಎಂಬತ್ತರ ದಶಕದಲ್ಲಿ ವಿನೋದ ದೊಡ್ಡಣ್ಣವರ ಅವರು ವಿದ್ಯಾಭ್ಯಾಸಕ್ಕಾಗಿ ಪ್ರವೇಶ ಪಡೆದಿದ್ದರು. ಇಂದು ಈ ಸಂಸ್ಥೆಯ ನಾಮನಿರ್ದೇಶನ  ಸದಸ್ಯರಾಗಿ ನೇಮಕರಾಗುವ ಮೂಲಕ  ದಾಖಲೆ ನಿರ್ಮಿಸಿದ್ದಾರೆ. ಅವರ ಈ ನೇಮಕಕ್ಕೆ ಬೆಳಗಾವಿ ಸಮಸ್ತ ಜೈನ ಸಮಾಜದ ಅಭಿನಂದಿಸಿದೆ.