ಲೋಕದರ್ಶನ ವರದಿ
ಇಂಡಿ 21: ಮೇ 29 ರಂದು ಜರುಗಲಿರುವ ಸ್ಥಳಿಯ ಪುರಸಭೆಯ 23 ವಾರ್ಡಗಳ ಚುನಾವಣೆಗೆ ನಾಮ ಪತ್ರ ವಾಪಸ ಪಡೆಯಲು ಸೊಮವಾರದಂದು ಕಡೆಯ ದಿನವಾಗಿತ್ತು ವಿವಿಧ ವಾರ್ಡಗಳಿಂದ ಒಟ್ಟು 14 ನಾಮ ಪತ್ರಗಳು ವಾಪಸಪಡೆದುಕೊಂಡಿದ್ದು ಅಂತಿಮ ಸ್ಪರ್ಧಾ ಕಣದಲ್ಲಿ 93 ಜನ ಅಭ್ಯರ್ಥಿಗಳು ಉಳಿದಿದ್ದಾರೆ.
ಒಟ್ಟು 23 ವಾರ್ಡಗಳಲ್ಲಿ 107ಅಭ್ಯರ್ಥಿಗಳಿಂದ 112 ನಾಮಪತ್ರ ಸಲ್ಲಿಕೆಯಾಗಿತ್ತು. ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ 5 ನಾಮಪತ್ರಗಳು ತಿರಸ್ಕೃತಗೊಂಡಿದ್ದು 107 ಅಭ್ಯರ್ಥಿಗಳಿಲ್ಲಿ 14 ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದಿದ್ದರಿಂದ ಪ್ರಸ್ತೂತ 93 ಜನ ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ.
ನಾಮ ಪತ್ರ ವಾಪಸ ಪಡೆದು ಚುನಾವಣಾ ಕಣದಿಂದ ಹಿಂದೆ ಸರಿದುಕೊಡಂವರು ವಾರ್ಡ ನಂ-01 ರ ಧನ್ಯಕುಮಾರ ಬಾಪುರಾಯ ಧನಪಾಲ, ವಾರ್ಡ ನಂ-02 ರ ಹಳ್ಳದಮನಿ ಶಿವಮ್ಮ ಶಿವಪುತ್ರ, ವಾರ್ಡ ನಂ-06 ರ ಕುಲಸುಂಬಿ ಮೈಬೂಬ ಹವಾಲದಾರ, ವಾರ್ಡ ನಂ-08 ರ ಪ್ರೇಮಾಬಾಯಿ ಅಶೋಕ ಕುಲಕರ್ಣಿ , ವಾರ್ಡ ನಂ-08 ರ ಬನಶಂಕರಿ ಸಂಜಯ ರಾಠೋಡ, ವಾರ್ಡ ನಂ-09 ರ ಅಬುಬಕರ ಹಾರೂನರಶೀದ ಮುಲ್ಲಾ, ವಾರ್ಡ ನಂ-09 ರ ಹುಸೇನ ಮಹ್ಮದಸಾಹೇಬ ಜಮಾದರ, ವಾರ್ಡ ನಂ-10 ರ ಹಿರೇಮಠ ಮಹಾದೇವಿ ದಾನಯ್ಯ, ವಾರ್ಡ ನಂ-11 ರ ಸಮೀರಿನಾ ಸದ್ದಾಂ ಅರಬ, ವಾರ್ಡ ನಂ-13 ರ ಲಕ್ಷ್ಮಣ ತೇಜಪ್ಪ ಲಾಳಸಂಗಿ, ವಾರ್ಡ ನಂ-13 ರ ಆನಂದ ವೇಂಕಟೇಶ ಕುಲಕರ್ಣಿ ವಾರ್ಡ ನಂ-17 ರ ಫಾರುಕ ಮಹ್ಮದ ಬಾಗವಾನ, ವಾರ್ಡ ನಂ-17 ರ ಮಹಿಬೂಬ ಅಬ್ದುಲಗನಿ ಅರಬ, ವಾರ್ಡ ನಂ-23 ರ ಲಾಲಬಿ ನಬಿಲಾಲ ಸೈಯದ ಸೇರಿದಂತೆ ಒಟ್ಟು 14 ಜನರು ತಮ್ಮ ನಾಮಪತ್ರ ವಾಪಸ ಪಡೆದುಕೊಂಡಿದ್ದಾರೆ.
ಕಳೆದ ಹಲವಾರು ದಿನಗಳಿಂದ ಆಯಾ ಪಕ್ಷಗಳ ಟಿಕೆಟಗಾಗಿ ಆಕಾಂಕ್ಷಿಗಳು ಪೈಪೊಟಿ ನಡೆಸಿ ಹೈರಾಣಾಗಿದ್ದರು. ಸುಡು ಬಿಸಿಲಿನಲ್ಲಿ ಮತದಾರರ ಮನ ಮನೆಗಳಿಗೆ ಅಲೆಯುವುದು ಸುಲಭದ ಮಾತಲ್ಲಾ. ಆದರೂ ಗೆಲ್ಲಬೇಕಾದರೆ ಅಲೆಯಲೆ ಬೇಕು, ಮತದಾರ ಕೈ ಕಾಲಿಗೆ ಎರಗಲೆಬೇಕು ಅಂದಾಗ ಮಾತ್ರ ಮತದಾರ ಪ್ರಭುಗಳು ಮನಸ್ಸು ಪರಿವರ್ತನೆಯಾಗಲು ಒಟ್ಟಿನಲ್ಲಿ ಕೆಲವು ವಾರ್ಡಗಳಲ್ಲಿ ತಿವೃ ಪೈಪೊಟಿ ಏರ್ಪಡು ಲಕ್ಷಣಗಳು ಗೊಚರಿಸುತ್ತಿರುವದು ಮೇಲ್ನೊಟಕ್ಕೆ ಕಂಡು ಬರುತ್ತಿದೆ ಕಾದು ನೊಡಬೇಕು.