ಲೋಕದರ್ಶನ ವರದಿ
ಅಂಕೋಲಾ 4: ತಾಲೂಕಿನ ಸುತ್ತಮುತ್ತಲ ಎಲ್ಲಾ ಹಳ್ಳಿಗಳ ಹಿರಿಯ ಸ್ವಾತಂತ್ರ ಯೋಧರ ತ್ಯಾಗದ ಫಲವನ್ನು ನಾವು ಉಣ್ಣುತ್ತಿದ್ದು ಸ್ವಾತಂತ್ರ್ಯ ಸಂಗ್ರಾಮದಲ್ಲಿ 'ಬಾಡರ್ೋಲಿ' ಎನ್ನುವ ಕೀತರ್ಿ ಪಡೆದ ಅಂಕೋಲಾ ತಾಲೂಕಿನ ಚೌಕದ ಹಳ್ಳಿಯ ಪ್ರಮುಖ ಕೇಂದ್ರ ಸ್ಥಾನವಾಗಿ ಬಾಸಗೋಡ ಗುರುತಿಸಿಕೊಂಡಿದ್ದನ್ನು ನಾವು ಚರಿತ್ರೆಯ ಪುಟಗಳಲ್ಲಿ ತಿಳಿದುಕೊಂಡಿದ್ದೇವೆ. ಅಂತೇಯೇ ಶತಮನಾದ ಅಂಚಿನಲ್ಲಿರುವ ಸುಭೋಧ ಯಕ್ಷಗಾನ ಮಂಡಳಿ ಸಹ ಬಾಸಗೋಡದ ಮಣ್ಣಿನ ಗುಣವನ್ನು ಹೆಚ್ಚಿಸಿದ್ದು, ನಾವು ಈ ಗಂಡು ಮೆಟ್ಟಿನ ಸ್ಥಳವನ್ನು ಹೆಮ್ಮೆಯಿಂದ ಸ್ಮರಿಸಬೇಕಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ಇತ್ತೀಚಿಗೆ ಬಾಸಗೋಡದ ನಡುಬೇಣದ ಭವ್ಯವಾದ ವೇದಿಕೆಯಲ್ಲಿ ದಿ.ಶೀಳ್ಯ ಅನಂತ ನಾಯಕ ಸ್ಮಾರಕ, ಜನತಾ ಕ್ರಿಕೆಟ್ ಕ್ಲಬ್ಲ್ ಬಾಸಗೋಡ ಇವರ ಆಯೋಜಿಸಿದ್ದ 39ನೇ ವರ್ಷ ದ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿಯು ಸಮಾರೋಪ ಮತ್ತು ಸನ್ಮಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು ಕಲೆ, ಕ್ರೀಡೆ, ಸಾಧಕರ ಸನ್ಮಾನದ ಮೂಲಕ ಉತ್ತಮ ಸಂಘಟನೆಯಾಗಿ ಗುರುತಿಸಿಕೊಂಡಿರುವ ಜನತಾ ಕ್ರಿಕೆಟ್ ಕ್ಲಬ್ ಇನ್ನಷ್ಟು ಯಶಸ್ವಿಯಾಗಿ ಮುನ್ನಡೆಯಲಿ ಮತ್ತು ಸ್ಥಳೀಯ ಪ್ರತಿಭೆಗಳು ಬೆಳಕಿಗೆ ಬರಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕ್ಲಬ್ನ ಹಿರಿಯ ಸದಸ್ಯ ಮತ್ತು ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣಮೂತರ್ಿ ವೆಂಕಟ್ರಮಣ ನಾಯಕ ಮಾತನಾಡಿ ತನ್ನೂರಿನ ಹಿರಿಮೆ ಮತ್ತು ಜನರ ಸಹ ಕಾರದಿಂದ ಕ್ಲಬ್ ಇಷ್ಟು ಎತ್ತರಕ್ಕೆ ಬೆಳೆದು ಬಂದಿದೆ ಎಂದರು. ನಿವೃತ್ತ ಡಿವೈಎಸ್ಪಿ ಮದನ ಗಾಂವಕರ ಬೊಳೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ ಸನ್ಮಾನಿತರಾಗಿರುವ ಯಶ್ ವಿಕಾಶ ಹಿಚ್ಕಡರಂತ ಪ್ರತಿಭೆಗಳನ್ನು ಬೆಳೆಸಬೇಕಿದೆ ಎಂದರು.
ಕುಂದಾಪುರದ ಸ.ಪ.ಪೂ ಕಾಲೇಜಿನ ಉಪನ್ಯಾಸಕಿ ಪೂಣರ್ಿಮಾ ಪಿ. ನಾಯಕ, ಗೊನೆಹಳ್ಳಿಯ ಪ್ರಥಮ ದಜರ್ೆ ಗುತ್ತಿಗೆದಾರ ದಿಲೀಪ ಉಮಾಮಹೇಶ್ವರ ನಾಯಕ, ಅತಿಥಿ ಗಳಾಗಿ ಪಾಲ್ಗೊಂಡು ಕ್ಲಬ್ನ ಕಾರ್ಯ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ
ಸ್ಥಳೀಯ ಪುಟಾಣಿಗಳಿಂದ ಆಕರ್ಷಕ ಛದ್ಮವೇಶ, ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಅಂತರಾಷ್ಟ್ರೀಯ ಖ್ಯಾತಿಯ ಅಶೋಕ ಪೊಳಲಿ ಮಂಗಳೂರು ಮತ್ತು ಡ್ಯಾನ್ಸಿಂಗ್ ಸ್ಟಾರ್ ಮಂಗಳೂರು ಇವರು ಪ್ರಸ್ತುತ ಪಡಿಸಿದ ಅಜ್ಜ-ಅಜ್ಜಿ ನೃತ್ಯ ನೆರೆದ ಸಭೀಕರನ್ನು ನಗೆಗಡಲಲ್ಲಿ ತೇಲಿಸಿತು. ದೇಶ ಭಕ್ತಿ, ಪೌರಾಣಿಕ, ಹಿಪ್ಪೊಪ್ ಮುಂತಾದ ನೃತ್ಯ ವೈಭವ, ಬೃಹತ್ ಗ್ರಾತದ ಕೋಳಿ, ಆಸ್ಟ್ರೀಚ್, ಲಗೇಜ್ ಮ್ಯಾನ್, ದ್ವಿಪಾತ್ರ ಅಭಿನಯ ಕಣ್ಣೀಗೆ ಕಟ್ಟುವಂತಿತು. ಜನತಾ ಕ್ರಿಕೇಟ್ ಕ್ಲಬ್ನ ಅಧ್ಯಕ್ಷ ವೈಭವ ಲಕ್ಷ್ಮೀಧರ ನಾಯಕ ಸ್ವಾಗತಿಸಿದರು. ಅಕ್ಷಯ ಗಾಂವಕರ ವರದಿ ವಾಚಿಸಿದರು. ವೈಡೂರ್ಯ ನಾಯಕ, ಅನನ್ಯ ನಾಯಕ, ಅದಿತಿ ನಾಯಕ, ರಾಹುಲ್, ಶ್ರಾವ್ಯ, ವರ್ಷಣಿ ಪರಿಚಯಿಸಿದರು. ಸುದೀಪ ಮತ್ತು ವಿನಾಯಕ ಮಾನ ಪತ್ರ ವಾಚಿಸಿದರು. ರಮ್ಯಾ ಮಧುಕರ ನಾಯಕ ನಿರೂಪಿಸಿದರು. ಪ್ರಥ್ವಿ ದೇವಾನಂದ ಗಾಂವಕರ ವಂದಿಸಿದರು. ಕ್ಲಬ್ನ ಹಿರಿ-ಕಿರಿಯ ಸದಸ್ಯರು, ಊರ ನಾಗರಿಕರು ಸಹಕರಿ ಸಿದರು.