ಲೋಕದರ್ಶನ ವರದಿ
ಕೂಡ್ಲಿಗಿ28: ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಶನಿವಾರ ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕರೆದಿದ್ದ ಸ್ವಾತಂತ್ರೋತ್ಸವ ಆಚರಣೆಯ ಪೂರ್ವ ಭಾವಿ ಸಭೆಗ ತಾಲ್ಲೂಕು ಮಟ್ಟದ ಬಹುತೇಕ ಅಧಿಕಾರಿಗಳು ಗೈರಾದ ಕಾರಣ ಸಭೆಯನ್ನು ಅಗಸ್ಟ್ 1ಕ್ಕೆ ಮುಂದೂಡಲಾಯಿತು.
ಬೆಳಿಗ್ಗೆ 11 ಗಂಟೆಗೆ ಕರೆದಿದ್ದ ಸಭೆಗೆ 12 ಗಂಟೆಯಾದರೂ ಕೆಲವೇ ಕೆಲವು ಅಧಿಕಾರಿಗಳು ಮಾತ್ರ ಸಭೆಗೆ ಬಂದಿದ್ದರು. ಇದರಿಂದ ಸಭೆಯಲ್ಲಿದ್ದ ಪಟ್ಟಾಣದ ಅನೇಕ ಮುಖಂಡರು ತೀವ್ರ ಅಕ್ಷೇಪ ವ್ಯಕ್ತಪಡಿಸಿ ಸಭೆಯನ್ನು ಮುಂದೂಡುವಂತೆ ಒತ್ತಾಯಿಸಿದರು.
ಇದರಿಂದ ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಎಲ್. ಕೃಷ್ಣಮೂತರ್ಿ ಸಭೆ ದಿನಾಂಕವನ್ನು ತಿಳಿಸಿ ನಾಲ್ಕು ದಿನಗಳ ಮೊದಲೇ ಎಲ್ಲಾ ಅಧಿಕಾರಿಗಳಿಗೂ ನೋಟೀಸ್ ನೀಡಲಾಗಿದೆ. ಆದರೆ ಅಧಿಕಾರಿಗಳು ಗೈರಾಗಿದ್ದಾರೆ. ಗೈರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ನೀಡಲಾಗುವುದು ಎಂದು ಹೇಳಿ ಅಗಸ್ಟ್ 1ರಂದು ಮತ್ತೆ ಸಭೆ ಸೇರಲಿದ್ದು ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಸಭೆಗೆ ಬರುವಂತೆ ಸೂಚಿಸಿ ಸಭೆಯನ್ನು ಮುಂದೂಡಿದರು.
ಪಟ್ಟಣ ಪಂಚಾಯ್ತಿ ಸದಸ್ಯ ಎಸ್. ದುರುಗೇಶ್, ನಿವೃತ್ತ ಸಕರ್ಾರಿ ನೌಕರರ ಸಂಘದ ಎ.ಎಂ. ವೀರಯ್ಯ, ಸೇವದಳದ ಬ್ಯಾಳಿ ವಿಜಯಕುಮಾರ್, ವಿಭೂತಿ ವೀರಣ್ಣ, ಮಾದೇಹಳ್ಳಿ ನಜೀರ್ ಸಾಬ್, ಪರುಶುರಾಮ, ಮಹೇಶ್ ಮುಂತಾದವರು ಇದ್ದರು.