ಕಾಗವಾಡ 10: ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ತಾಲೂಕಾ ದಂಡಾಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ದಿ.10 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ.
ಗ್ರಾಮ ಆಡಳಿತಾಧಿಕಾರಿಗಳ ಜಿಲ್ಲಾ ಸಂಘದ ಪದಾಧಿಕಾರಿ ಕೆ.ಕೆ. ಕುಲಕರ್ಣಿ ಮಾತನಾಡಿ, ನಾವು ನಮ್ಮ ಬೇಡಿಕೆಗಳಿಗೆ ಆಗ್ರಹಿಸಿ, ಕಳೆದ ಬಾರಿ ಮುಷ್ಕರ ನಡೆಸಿದಾಗ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದಾಗ ಮುಷ್ಕರ ಹಿಂಪಡೆದಿದ್ದೇವು. ಈಗ ಎರಡು ತಿಂಗಳು ಕಳೆದರೂ ಕೂಡಾ ನಮ್ಮ ಬೇಡಿಕೆಗಳು ಈಡೇರಲಿಲ್ಲವಾದ್ದರಿಂದ ಈಗ ಮತ್ತೆ ಕಚೇರಿಯ ಕಾರ್ಯಗಳನ್ನು ಸ್ಥಗಿತಗೊಳಿಸಿ, ನಮ್ಮ ಬೇಡಿಕೆಗಳಾದ ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ, ಮುಷ್ಕರ ಪ್ರಾರಂಭಿಸಿದ್ದೇವೆ ಎಂದು ಹೇಳಿದರು.
ತಾಲೂಕಾ ಸಂಘದ ಅಧ್ಯಕ್ಷ ಪ್ರಕಾಶ ಪುಠಾಣಿ, ಗೌರವಾಧ್ಯಕ್ಷ ಸುಭಾಷ ಬಶೆಟ್ಟಿ, ಉಪಾಧ್ಯಕ್ಷ ಶೌಕತಅಲಿ ನಾಲತವಾಡ, ಪ್ರಧಾನ ಕಾರ್ಯದರ್ಶಿ ಪರಾಗ ಕಾಂಬಳೆ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳ ಗ್ರಾಮ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.