ಕೋಲ್ಕತಾ, ಸೆ 22 ಪಶ್ಚಿಮ ಬಂಗಾಳದ ಗೋರುಮಾರ ಮತ್ತು ಜಲ್ದಾಪಾರ ರಾಷ್ಟ್ರೀಯ ಉದ್ಯಾನಗಳಲ್ಲಿ ರೈನೋಸರಸ್ ಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ವಿಶ್ವ ರೈನೋ ದಿನದ ಅಂಗವಾಗಿ ಟ್ವೀಟ್ ಮಾಡಿರುವ ಅವರು, 'ಇತ್ತೀಚಿನ ಗಣತಿಯ ರಾಜ್ಯದ ಎರಡು ಉದ್ಯಾನವನಗಳಲ್ಲಿ ರೈನೋಸರಸ್ ಗಳ ಸಂಖ್ಯೆ ಹೆಚ್ಚಳವಾಗಿದೆ' ಎಂದಿದ್ದಾರೆ.
ಸೆ. 22ರಂದು ವಿಶ್ವ ರೈನೋಸರಸ್ ದಿನಾಚರಣೆಯಾಗಿದ್ದು, ಅದು ರೈನೋದ ಐದು ತಳಿಗಳಾದ ಕಪ್ಪು, ಬಿಳಿ, ದೊಡ್ಡ ಕೊಂಬಿ, ಸುಮತ್ರನ್ ಮತ್ತು ಜಾವನ್ ರೈನೋಗಳನ್ನು ನೆನೆಯಲಾಗುತ್ತದೆ.
2010ರಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಈ ದಿನಾಚರಣೆಯನ್ನುಆಚರಿಸಲಾಯಿತು. ನಂತರ ವಿಶ್ವಾದ್ಯಂತ ಇದನ್ನು ಆಚರಿಸಲಾಗುತ್ತಿದೆ.