ದೇಶದಲ್ಲಿ ಹೆಚ್ಚಿದ ಸಿರಿವಂತರು

ನವದೆಹಲಿ, ಅ 12:   2018-19 ಹಣಕಾಸು ವರ್ಷದ ಮೌಲ್ಯ ಮಾಪನದ ನಂತರ ದೇಶದಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ಶೇಕಡ 20 ರಷ್ಟು ಅಂದರೆ 97,689ಕ್ಕೆ ಏರಿಕೆಯಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ- ಸಿಬಿಡಿಟಿ ತಿಳಿಸಿದೆ.    2017-18 ನೇ ಹಣಕಾಸು ವರ್ಷದಲ್ಲಿ 81,344 ತೆರಿಗೆ ಪಾವತಿದಾರರು 1 ಕೋಟಿಗೂ ಅಧಿಕ ತೆರಿಗೆ ಬಾಧ್ಯತೆಯ ಆದಾಯ ಹೊಂದಿದ್ದರು. ಕಾರ್ಪೊರೇಟ್ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು, ಹಿಂದೂ ಅವಿಭಜಿತ ಕುಟುಂಬಗಳು ಮತ್ತು ವೈಯಕ್ತಿಕ ವ್ಯಕ್ತಿ ಸೇರಿದಂತೆ 2018-19 ನೇ ಸಾಲಿನಲ್ಲಿ  ಒಂದು ಕೋಟಿಗೂ ಅಧಿಕ ತೆರಿಗೆ ಬಾಧ್ಯತೆಯ ಆದಾಯ ಹೊಂದಿರುವವ ಸಂಖ್ಯೆ ಶೇ 20 ರಷ್ಟು ಹೆಚ್ಚಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. 2019ರ ಆಗಸ್ಟ್ 15 ರವರೆಗೆ 5.87 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಾಗಿವೆ.