ಯುಎಇ ಮತ್ತು ಸೌದಿಯಲ್ಲಿ ಸೋಂಕು ಪ್ರಕರಣಗಳ ಹೆಚ್ಚಳ

ಅಬುಧಾಬಿ, ಜೂನ್ 13, ಸಂಯುಕ್ತ ಅರಬ್ ಒಕ್ಕುಟ ಯುಎಇ ಯಲ್ಲಿ ಮತ್ತೆ 513 ಹೊಸ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.  ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.ಶುಕ್ರವಾರ 712 ಜನರು ಚೇತರಿಸಿಕೊಂಡಿದ್ದು ಒಟ್ಟು 25,946 ಜನರು ಗುಣಮುಖರಾಗಿದ್ದಾರೆ. ಸದ್ಯ 41,499 ಜನರಿಗೆ ಸೋಂಕು ತಗುಲಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 287 ಕ್ಕೆ ಏರಿಕೆಯಾಗಿದೆ ಎಂದು ಅಂಕಿಅಂಶ ನೀಡಿದೆ.ಸೌದಿ ಅರೇಬಿಯಾದಲ್ಲಿ 3,921 ಹೊಸ ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 1,19,943 ಕ್ಕೆ ಏರಿಕೆಯಾಗಿದೆ. ಮತ್ತೆ 36 ಜನರು ಸೋಂಕಿನಿಂದ ಮೃತಪಟ್ಟಿದ್ದು ಒಟ್ಟು ಸಾವನ್ನಪ್ಪಿದವರ ಸಂಖ್ಯೆ 893 ಕ್ಕೆ ಏರಿಕೆಯಾಗಿದೆ. ರಿಯಾದ್, ಜೆಡ್ಡಾ ಮತ್ತು ಮೆಕ್ಕಾಗಳಲ್ಲಿ ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ.