ಬೈರಟ್, ಜೂನ್ 7,ಇರಾಕ್ ನಲ್ಲಿ ಕೊರೊನಾ ವೈರಾಣು ಸೋಂಕಿನಿಂದ ಮತ್ತೆ 33 ಜನರು ಮೃತಪಟ್ಟ ಕಾರಣ ಕರ್ಫ್ಯೂ ಅವಧಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಪ್ರಧಾನಮಂತ್ರಿ ಮುಸ್ತಫಾ ಅಲ್ ಕಧೀಮಿ ಹೇಳಿದ್ದಾರೆ. ಶುಕ್ರವಾರದ ವೇಳೆಗೆ ಸೋಂಕಿತರ ಸಂಖ್ಯೆ 11098 ರಷ್ಟಿದ್ದು ಮೃತರ ಸಂಖ್ಯೆ 318 ರಷ್ಟಿತ್ತು. 4904 ಜನರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.ಕರ್ಫ್ಯೂ ಅವಧಿಯನ್ನು ಜೂನ್ 7 ರ ಭಾನುವಾರದಿಂದ ಜೂನ್ 13 ರ ಶನಿವಾರದವರೆಗೆ ವಿಸ್ತರಿಸಲಾಗಿದೆ. ಜೂನ್ 14 ರಿಂದ ಸಂಜೆ 6 ರಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಇರಲಿದ್ದು ಗುರುವಾರ, ಶುಕ್ರವಾರ ಮತ್ತು ಶನಿವಾರಗಳಂದು ಸಂಪೂರ್ಣ ಅವಧಿಗೆ ಕರ್ಫ್ಯೂ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ. ಬಹುತೇಕ ಮಸೀದಿ, ಚರ್ಚುಗಳು ಮುಚ್ಚಿವೆ. ಅಲ್ಲದೇ ಮನೋರಂಜನಾ ತಾಣಗಳು ಸೇರಿದಂತೆ ಇತರೆಡೆ ಜನರು ಸಾಮೂಹಿಕವಾಗಿ ಸೇರುವುದನ್ನು ನಿರ್ಬಂಧಿಸಲಾಗಿದೆ. ರೆಸ್ಟೊರೆಂಟ್ ಗಳು ಮನೆಗೆ ಡೆಲಿವರಿ ನೀಡಲು ಮಾತ್ರ ಅವಕಾಶವಿದೆ.