ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಎಂ.ಉಸ್ಮಾನ್ ಪದಗ್ರಹಣ
ಕಂಪ್ಲಿ 21: ಪಟ್ಟಣದ ಪುರಸಭೆಯಲ್ಲಿ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷ ಎಂ.ಉಸ್ಮಾನ್ ಇವರು ಶುಭ ಶುಕ್ರವಾರದಂದು ಅಧಿಕಾರ ಸ್ವೀಕರಿಸಿದರು. ಇಲ್ಲಿನ ಸ್ಥಾಯಿ ಸಮಿತಿ ಕೊಠಡಿಯಲ್ಲಿ ಪದಗ್ರಹಣ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಸೇರಿದಂತೆ ಸದಸ್ಯರು, ಮುಖಂಡರು, ಎಲ್ಲಾ ಸಮಾಜದ ಬಾಂಧವರು ಹಾಗೂ ಸಿಬ್ಬಂದಿಗಳು ಭಾಗವಹಿಸಿ, ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿದರು. ನೂತನ ಅಧ್ಯಕ್ಷ ಎಂ.ಉಸ್ಮಾನ್ ಮಾತನಾಡಿ, ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡುತ್ತೇವೆ. ವಾರ್ಡಿನಲ್ಲಿರುವ ಸಮಸ್ಯೆಗಳ ಕುರಿತು ಗಮನಕ್ಕೆ ತಂದಲ್ಲಿ ಪುರಸಭೆ ಅಧ್ಯಕ್ಷರೊಂದಿಗೆ ಚರ್ಚಿಸಿ, ಸೂಕ್ತಕ್ರಮ ಕೈಗೊಳ್ಳಲಾಗುವುದು. ಪಕ್ಷಬೇಧ ಮರೆತು ಎಲ್ಲರ ಸಹಕಾರದೊಂದಿಗೆ ಅಭಿವೃದ್ಧಿಗೆ ಶ್ರಮಿಸೋಣ ಎಂದರು. ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಮುಖಂಡರಾದ ಕೆ.ಶ್ರೀನಿವಾಸರಾವ್, ಬಿ.ನಾರಾಯಣಪ್ಪ, ಎಂ.ಉಸ್ಮಾನ್, ಜಾಫರ್, ರುದ್ರ್ಪ, ಎಂ.ಗೌಸ್, ಬೂದಗುಂಪಿ ಹುಸೇನ್‌ಸಾಬ್, ಅಕ್ಕಿ ಜಿಲಾನ್, ಸಮೀರ್ ರೆಹಮಾನ್, ಎಂ.ಜಾವೀದ್, ಎಂ.ಖಲಂದರ್ ಸಮೀರ್, ಎಸ್.ಯುಸೂಫ್, ಎ.ಸಿರಾಜ್, ಎಸ್.ರಾಜಶೇಖರ, ಚೌಗರಾಮ್ ಪಾಟೀಲ್, ವಿ.ಯುಸೂಫ್, ಜೀಲೂ, ಮಾಜೀದ್, ಟಿ.ಮಹ್ಮದಗೌಸ್, ಅತ್ತಾವುಲ್ಲಾ ರೆಹಮಾನ್, ಸುಧಾಕರ, ಶ್ರೀನಿವಾಸ ಸೇರಿದಂತೆ ಅನೇಕರಿದ್ದರು.