ಸಂಕೇಶ್ವರ 02: ಸುಮಾರು 35 ಲಕ್ಷ ವೆಚ್ಚದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ದೇವಿ ತುಳಜಾ ಭವಾನಿ ದೇವಸ್ಥಾನದ ವಾಸ್ತುಶಾಂತಿ ಮೂರ್ತಿ ಪ್ರತಿಷ್ಠಾಪನಾ ಹಾಗೂ ಕಳಸಾರೋಹಣ ಕಾರ್ಯಕ್ರಮ ಸುಭಾಷ ರಸ್ತೆಯಲ್ಲಿರುವ ಗೋಂಧಳಿ ಗಲ್ಲಿಯಲ್ಲಿ ದಿ. 2ರಿಂದ ಆರಂಭವಾಗಿದ್ದು 6ರ ವರೆಗೆ ಜರುಗಲಿದೆ.
ದಿವ್ಯ ಸಾನಿಧ್ಯವನ್ನು ಶಂಕರಾಚಾರ್ಯ ಮಠದ ಶ್ರೀಗಳಾದ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಮಹಾಸ್ವಾಮಿಗಳು ಇವರ ದಿವ್ಯ ಸಾನಿಧ್ಯದಲ್ಲಿ ಜರುಗುವುದು, ಇಂದು ಮಧ್ಯಾಹ್ನ 3ಗಂಟೆಯಿಂದ ಶಂಕರಲಿಂಗ ಮಠದಿಂದ ದೇವಿ ತುಳಜಾ ಭವಾನಿ ಮೂರ್ತಿಯ ಭವ್ಯ ಮೆರವಣಿಗೆ ಮತ್ತು ಶೋಭಾ ಯಾತ್ರೆ ಜರುಗುವುದು, ಸೋಮವಾರ ದಿ. 3ರಿಂದ ಪುಣ್ಯಾ ಹವಾಚನ, ಗಣಪತಿ ಪೂಜೆ, ನಾಂದಿ ಶ್ರಾದ್ಧ, ಆಚಾರ್ಯವರಣ, ಪ್ರಧಾನ ಸಂಕಲ್ಪ, ಋತ್ವಿಜ ವರಣ, ಎಲ್ಲ ಮೂರ್ತಿಗಳಿಗೆ ಪಂಚಗವ್ಯ ಇತ್ಯಾದಿ ಸ್ನಾನ ಅಷ್ಟಕಲಶ ಸ್ನಾನ, ಅಗ್ನ್ಯುತಾರಣ, ಜಲಾವಿಧಿವಾಸ, ಧಾನ್ಯಾದಿವಾಸ, ಸಾಯಂಕಾಲ ಪ್ರಧಾನ ದೇವತೆಯ ಸ್ಥಾಪನೆ ಆರತಿ ರಾತ್ರಿ 9 ಗಂಟೆಗೆ ನಿಶಾಂತ ರಾಜೇಂದ್ರ ಕುಮಾರ ಗೋಂಧಳಿ, ಕೊಲ್ಹಾಪೂರ ಇವರ ಭಕ್ತಿ ಗೀತೆಯ ಕಾರ್ಯಕ್ರಮ, ಮಂಗಳವಾರ ದಿ. 4ರಂದು ಅಗ್ನಿಮಂಥನ, ಅಗ್ನಿಸ್ಥಾಪನೆ, ವಾಸ್ತು-ಶಾಂತಿ, ನವಗ್ರಹ ಹೋಮ, ಪ್ರಧಾನ ದೇವತೆಯ ಹೋಮ, ದೇವರುಗಳ ನಿದ್ರಾ, ಸಾಯಂಕಾಲ ಪ್ರಧಾನ ದೇವತೆಯ ಸ್ಥಾಪನೆ ಆರತಿ ರಾತ್ರಿ 9 ಗಂಟೆಗೆ ಸಾಗರ ಮಾನೆ ಇಂಡಿ ಇವರ ಕನ್ನಡ ಗೋಂಧಳ ಕಾರ್ಯಕ್ರಮ ಜರುಗಲಿದೆ.
ಬುಧವಾರ ದಿ. 5ರಂದು ಸಾಯಂಕಾಲ ಪರ್ಯಾಯ ಹೋಮ ಪೂಜೆ ರಾತ್ರಿ 9 ಗಂಟೆಗೆ ರವಿ ರೇಣಕೆ, ಇಂಚಲಕರಂಜಿ ಇವರ ಗೋಂಧಳಿ ಕಾರ್ಯಕ್ರಮ, ಗುರುವಾರ ದಿ. 6ರಂದು 10 ಗಂಟೆಗೆ ಪೂಜಾಂಗ ಹೋಮ ಉತ್ತರಾಂಗ ಹೋಮ ಕುಷ್ಮಾಂಡ ಬಲಿ, ಕ್ಷೇತ್ರಪಾಲ ಬಲಿ, ಕಳಸಾರೋಹಣ ತುಳಜಾ ಭವಾನಿ ಮಂದಿರ, ವಿಠ್ಠಲ ರುಕ್ಮಿಣಿ ಮಂದಿರ, ಮರಗುಬಾಯಿ ಮಂದಿರ, ಹನುಮಾನ ಮಂದಿರ, ಮತ್ತು ತುಳಜಾ ಭವಾನಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಪುರ್ಣಾಹುತಿ ಕಾರ್ಯಕ್ರಮ ಈ ಕಾರ್ಯಕ್ರಮಗಳ ದಿವ್ಯ ಸಾನಿಧ್ಯವನ್ನು ಶಂಕರಾಚಾರ್ಯ ಮಠದ ಶ್ರೀಗಳಾದ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಮಹಾಸ್ವಾಮಿಗಳು ಹಾಗೂ ನಿಡಸೋಶಿ ಮಠದ ಶಿವಲಿಗೇಶ್ವರ ಮಹಾಸ್ವಾಮಿಗಳು, ರಾಮನಾಥಗಿರಿ ಮಠ ನೂಲದ ಶ್ರೀಗಳಾದ ಭಗವಾನ ಗಿರಿ ಮಹಾರಾಜ, ಹಾಗೂ ಕೊಗನೊಳಿಯ ಪುರ್ಣಾನಂದ ಪಾಂಡುರಂಗ ಕಾಜವೆ ಮಹಾರಾಜರು, ಹುಕ್ಕೇರಿಯ ಸುಕ್ಷೇತ್ರ ಕ್ಯಾರೆಗುಡ್ಡ ಮಠದ ಮಂಜುನಾಥ ಮಹಾಸ್ವಾಮಿಗಳು ಇವರ ಸಾನಿಧ್ಯದಲ್ಲಿ ಕಾರ್ಯಕ್ರಮವು ಜರುಗುವುದು.
ಸಚಿವ ಸತೀಶ ಲಕ್ಷ್ಮಣ ಜಾರಕಿಹೊಳಿ ಕಾರ್ಯಕ್ರಮವನ್ನು ಉದ್ಘಾಟಿಸುವರು, ಅಧ್ಯಕ್ಷತೆಯನ್ನು ಹುಕ್ಕೇರಿ ಮತಕ್ಷೇತ್ರದ ಶಾಸಕ ನೀಖೀಲ ಉಮೇಶ ಕತ್ತಿ ವಹಿಸುವರು, ಚಿಕ್ಕೋಡಿ ಲೋಕಸಭಾ ಸದಸ್ಯೆ ಪ್ರಿಯಾಂಕಾ ಸತೀಶ ಜಾರಕಿಹೊಳಿ, ಮಾಜಿ ಸಚಿವ ಎ.ಬಿ. ಪಾಟೀಲ, ಪುರಸಭೆ ಅಧ್ಯಕ್ಷೆ ಸೀಮಾ ಬಂಡು ಹತನೂರೆ, ಹಾಗೂ ಗಣ್ಯಾತ ಗಣ್ಯ ವ್ಯಕ್ತಿಗಳು ಈ ಸಮಾರಂಭದಲ್ಲಿ ಭಾಗವಹಿಸುವರು. ದೇವಿ ಭವಾನಿ ಶಂಕರ ಗೊಂಧಳಿ ಸಮಾಜ ಕಮೀಟಿ ಸಂಕೇಶ್ವರ ಇವರು ಸಮಾರಂಭವನ್ನು ಆಯೋಜಿಸಿದ್ದಾರೆ ಎಂದು ಗೋಂಧಳಿ ಸಮಾಜ ಕಮೀಟಿಯ ಅಧ್ಯಕ್ಷ ಶಂಕರ ಕಾಳೆ ಉಪಾಧ್ಯಕ್ಷ ತಾನಾಜಿ ಕಳ್ಳಿವಾಲೆ ಇವರು ಲೋಕದರ್ಶನ ಪ್ರತಿನಿಧಿಗೆ ತಿಳಿಸಿದ್ದಾರೆ. ಇನ್ನುಳಿದ ಸಂಚಾಲಕ ಮಂಡಳಿಯ ಪದಾಧಿಕಾರಿಗಳು ಪತ್ರಿಕಾ ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.