ಉಚಿತ ಹೃದಯರೋಗ ತಪಾಸಣಾ ಶಿಬಿರದ ಉದ್ಘಾಟನೆ

Inauguration of free heart disease check-up camp

ಧಾರವಾಡ 14: ಎಸ್‌ಡಿಎಮ್ ನಾರಾಯಣ ಹಾರ್ಟ್‌ ಸೆಂಟರ್, ಧಾರವಾಡ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹುಬ್ಬಳ್ಳಿ-ಧಾರವಾಡ ನಾಗರಿಕರ ಪರಿಸರ ಸಮಿತಿ, ಧಾರವಾಡ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಪರಿಸರ ಭವನ, ಧಾರವಾಡದಲ್ಲಿ ದಿ.12 ರಂದು “ಉಚಿತ ಹೃದಯರೋಗ ತಪಾಸಣಾ ಶಿಬಿರ” ಹಮ್ಮಿಕೊಂಡಿದ್ದು ಈ ಶಿಬಿರದಲ್ಲಿ ಬಿ.ಪಿ, ಶುಗರ, ಇಸಿಜಿ, ಎಕೊ ಮತ್ತು ವೈದ್ಯರೊಂದಿಗೆ ಸಮಾಲೋಚನೆ ಉಚಿತವಾಗಿ ಮಾಡಲಾಗಿದ್ದು ಸುಮಾರು 150 ಕ್ಕೂ ಹೆಚ್ಚು ಜನ ಇದರ ಸದುಪಯೋಗ ಪಡೆದುಕೊಂಡರು.  

ಈ ಶಿಬಿರದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಪ್ರದೀಪ ಶೆಟ್ಟಿ, ನಿರ್ದೇಶಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರು ಮಾತನಾಡಿ ಮಹಿಳಾ ದಿನಾಚರಣೆ ನಿಮಿತ್ತ ಮುಖ್ಯವಾಗಿ ಮಹಿಳೆಯರಿಗೆ ತಪಾಸಣೆ ಮಾಡಿರುವ ಕಾರ್ಯವನ್ನು ಮೆಚ್ಚಿ ನಾರಾಯಣ ಹಾರ್ಟ್‌ ಸೆಂಟರ್‌ನ ಕಾರ್ಯವೈಖರಿಯನ್ನು ಶ್ಲಾಘಿಸಿದರು.  

ಅದೇ ರೀತಿ ಎಸ್‌ಡಿಎಮ್ ನಾರಾಯಣ ಹಾರ್ಟ್‌ ಸೆಂಟರ್‌ನ ಮಾರುಕಟ್ಟೆ ವಿಭಾಗದ ಹಿರಿಯ ಮೇಲ್ವಿಚಾರಕರಾದ ಅಜಯ ಹುಲಮನಿ ರವರು ಮಾತನಾಡಿ ಇಂದಿನ ದಿನದಲ್ಲಿ ಹೃದಯರೋಗದ ಹೆಚ್ಚಳ, ಕಾರಣ ಮತ್ತು ಶಿಬಿರದ ಮಹತ್ವದ ಬಗ್ಗೆ ವಿವರವಾಗಿ ತಿಳಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿಯ ಅಧ್ಯಕ್ಷರಾದ ಶಂಕರ ಕುಂಬಿಯವರು ವಹಿಸಿದ್ದರು. ಅವರು ಮಾತನಾಡಿ ಹೃದಯ ರೋಗದ ಹೆಚ್ಚಳಕ್ಕೆ ಕಳವಳ ವ್ಯಕ್ತಪಡಿಸಿದರು. ಇಂದಿನ ಸಮಾಜಕ್ಕೆ ಇಂತಹ ಶಿಬಿರಗಳ ಅವಶ್ಯಕತೆ ಇದೆ. ಕಾರಣ ಸಂಘ ಸಂಸ್ಥೆಗಳು ಶಿಬಿರಗಳಿಗೆ  ಹೆಚ್ಚು ಮಹತ್ವ ನೀಡಬೇಕಾಗಿದೆ. ಮತ್ತು ಜನರ ಉತ್ತಮ ಆರೋಗ್ಯಕ್ಕಾಗಿ ಒಳ್ಳೆಯ ಹವ್ಯಾಸಗಳನ್ನು, ಒಳ್ಳೆಯ ಜೀವನಶೈಲಿಗಳನ್ನು ಅನುಸರಿಸಬೇಕೆಂದರು.  

ಈ ಕಾರ್ಯಕ್ರಮದ ನಿರೂಪಣೆಯನ್ನು ದುಂಡೇಶ ತಡಕೋಡ ರವರು ಮಾಡಿ ಸ್ವಾಗತಿಸಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಎಸ್‌ಡಿಎಮ್ ನಾರಾಯಣ ಹಾರ್ಟ್‌ ಸೆಂಟರ್‌ನ ವೈದ್ಯರಾದ ಡಾ. ಮಹಾಂತೇಶ ಉಳ್ಳಾಗಡ್ಡಿ ಮತ್ತು ಸಿಬ್ಬಂದಿಗಳಾದ ನಾಗರಾಜ ಬಡಿಗೇರ ಹಾಗೂ ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮಿತಿಯ ಕಾರ್ಯದರ್ಶಿಗಳಾದ ಡಾ. ಉಲ್ಲಾಸ ಕುಲಕರ್ಣಿ, ಸಹಕಾರ್ಯದರ್ಶಿಗಳಾದ ಐ.ಎಲ್‌. ಪಾಟೀಲ ಮತ್ತು ಎಸ್‌.ಜಿ. ಬೆಟಗೇರಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದ ಅಧಿಕಾರಿಗಳಾದಂತಹ ಅಶೋಕ ಕೆ. ಮತ್ತು ಮಯೂರ ಜೋರಸ್ಕರ್ ರವರು ಉಪಸ್ಥಿತರಿದ್ದರು.