ಲೋಕದರ್ಶನ ವರದಿ
ವಿಶೇಷ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ
ಗದಗ 27: ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಹಾಗೂ ಧಾರವಾಡ ಹಾಲು ಒಕ್ಕೂಟ, ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ರೋಣ ಹಾಗೂ ಗಜೇಂದ್ರಗಡ ತಾಲೂಕುಗಳ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ವಿಶೇಷ ತರಬೇತಿ ಶಿಬಿರವನ್ನು ಗುರುವಾರ ಗಜೇಂದ್ರಗಡದ ಜಗದಂಬಾ ದೇವಸ್ಥಾನ ಹತ್ತಿರ ಜಗದಂಬಾ ಸಮುದಾಯಭವನದಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಧಾರವಾಡ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷರು ಹಾಗೂ ನಿರ್ದೇಶಕರಾದ ನೀಲಕಂಠ ಅಸೂಟಿ ರವರು ಮಾತನಾಡುತ್ತಾ ಇತ್ತೀಚಿಗೆ ಸದಸ್ಯರು ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಮಡುವುದು ಹಾಗೂ ಒಕ್ಕೂಟದಿಂದ ಒದಗಿಸುತ್ತೀರುವ ಪಶು ಆಹಾರವನ್ನು ಹೆಚ್ಚು ಹೆಚ್ಚು ಬಳಸುವುದು ಸೂಕ್ತ ಎಂದು ಹೇಳಿದರು ಇದರಿಂದ ಸಂಘದ ಪ್ರಗತಿ ಹಾಗೂ ಒಕ್ಕೂಟದ ಪ್ರಗತಿ ಅಭಿವೃದ್ಧಿಯತ್ತ ಸಾಗಲು ಸಾಧ್ಯವಿದ್ದು ಇದಕ್ಕೆ ಸದಸ್ಯರುಗಳು ಸಹಕರಿಸಬೇಕೆಂದು ಕರೆಯಿತ್ತರು. ಈ ಮೂಲಕ ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೆಂದು ವರ್ಗಿಸ್ ಕುರಿಯನ್ ಅವರ ದೂರದೃಷ್ಠಿಯ ಫಲವಾಗಿ ಭಾರತದಲ್ಲಿ ಹೈನುಗಾರಿಕೆ ಹಾಗೂ ಡೈರಿ ಉದ್ಯಮವು ಒಂದು ಸ್ವಾವಲಂಬಿ ಉದ್ಯಮವಾಗಿ ಬೆಳೆಯಿತು. ಡೈರಿ ಉದ್ಯಮವು ಗ್ರಾಮಿಣ ಭಾರತಿಯ ರೈತರಿಗೆ ಅದರಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಹಣ ಸಂಪಾದನೆಯ ಒಂದು ಸ್ಥಿರ ಮೂಲವಾಯಿತು ಮತ್ತು ರಾಷ್ಟ್ರದ ಆರ್ಥಿಕತೆ ರೂಪಿಸುವ ಗ್ರಾಮೀಣ ಉದ್ಯಮವಾಯಿತು. ರೈತರಿಗೆ ನಿಗದಿತ ಆದಾಯವು ದೊರೆಯುತ್ತಿದ್ದ ಕಾರಣ ಅನೇಕರು ಸಾಲದ ವಿಷವರ್ತುಲದಿಂದ ಮಕ್ತರಾಗಲು ಒಂದು ದಾರಿಯಾಯಿತು ಭಾರತದಲ್ಲಿ ಗುಜರಾತಿನ ಅಮುಲ್ (ಆನಂದ ಮಿಲ್ಕ್ ಯೂನಿಯನ್ ಲಿ.,) ಬಿಟ್ಟರೆ ಕರ್ನಾಟಕದ ಕೆ.ಎಂ.ಎಫ್- ನಂದಿನಿ ಅತ್ಯಂತ ದೊಡ್ಡ ಹಾಲು ಉತ್ಪಾದಕರ ಸಂಘಟನೆ, ಅದಕ್ಕೆ ಕರ್ನಾಟಕದಲ್ಲಿ ಹಾಲು ಎಂದರೆ ನೆನೆಪಾಗುವುದು ನಂದಿನಿ. ಇದು ಕನ್ನಡಿಗರ ಅತ್ಯಂತ ಭಾವನಾತ್ಮಕ ಹೆಮ್ಮೆಯ ಸಂಸ್ಥೆಯಾಗಿದೆ ಎಂದರು.
ಧಾರವಾಡ ಹಾಲು ಒಕ್ಕೂಟದ ನಿವೃತ್ತ ಸಹಾಯಕ ವ್ಯವಸ್ಥಾಪಕರಾದ ಡಿ. ಎಸ್. ಆಶಿ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಒಕ್ಕೂಟವು ಚೆನ್ನಾಗಿದ್ದರೆ ಸಹಕಾರ ಸಂಘಗಳು ಚೆನ್ನಾಗಿರುತ್ತವೆ. ಹಾಲು ಮಹಾಮಂಡಳದ ವ್ಯಾಪ್ತಿಯಲ್ಲಿ ಇರುವ 8 ಪಶು ಆಹಾರ ಘಟಕಗಳು ಕಾರ್ಯಚರಣೆಯಲ್ಲಿದ್ದು, ಇವುಗಳಲ್ಲಿ ಪ್ರತಿ ತಿಂಗಳು 75000 ಮೆಟ್ರಿಕ್ ಟನ್ ಪಶು ಆಹಾರ ಉತ್ಪಾದಿಸಿ ಬೇಡಿಕೆ ಅನುಸಾರ ಮಾರಾಟ ಮಾಡಲಾಗುತ್ತಿದೆ. ಕೆ.ಎಂ.ಎಫ್ ಮತ್ತು ಜಿಲ್ಲಾ ಹಾಲು ಒಕ್ಕೂಟಗಳ ಮೂಲಕ ಹಾಲು ಉತ್ಪಾದಕರಿಗೆ ಪಶು ವೈದ್ಯಕೀಯ ಸೌಲಭ್ಯ ವಿವಿಧ ರೀತಿಯ ಮೇವಿನ ಬೀಜಗಳು, ರಾಸುಗಳ ಗುಂಪು ವಿಮೆ, ಲಸಿಕೆ ಕಾರ್ಯಕ್ರಮಗಳನ್ನು ಶೇ 50 ರಷ್ಟು ಅನುದಾನದಲ್ಲಿ ನೀಡಲಾಗುತ್ತಿದೆ ಇವೆಲ್ಲವುಗಳ ಸದುಪಯೂಗ ಪಡೆದುಕೊಂಡು ಸಹಕಾರ ಸಂಘಗಳು ಚೆನ್ನಾಗಿದ್ದರೆ ಹಾಲು ಉತ್ಪಾದಕರು ಚೆನ್ನಾಗಿರುತ್ತಾರೆ ಇಡೀ ಭಾರತದಲ್ಲಿ ನಂದಿನಿ ಎರಡನೇ ಸ್ಥಾನದಲ್ಲಿದೆ. ಇದಕ್ಕೆ ರೈತರು ಹಾಗೂ ಅಧಿಕಾರಿಗಳು ಕಾರಣವಾಗಿದ್ದಾರೆ ಎಂದು ಹೇಳಿದರು.
ಧಾರವಾಡ ಹಾಲು ಒಕ್ಕೂಟದ ಗದಗ ಜಿಲ್ಲೆಯ ಮುಖ್ಯಸ್ಥರಾದ ಡಾ. ಪ್ರಸನ್ ಎಸ್. ಪಟ್ಟೇದ ರವರು ಮಾತನಾಡುತ್ತಾ ಹಸಿರೇ ಉಸಿರು ಎಂಬಂತೆ ಭೂಮಿಯಲ್ಲಿ ಅನೇಕ ನೈಸರ್ಗಿಕ ಸಂಪನ್ಮೂಲಗಳಿವೆ ಸಾವಯವ ಕೃಷಿಯಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಲು ಅನೂಕೂಲವಾಗುತ್ತದೆ. ಧನಕರುಗಳ ಗೋಮೂತ್ರ ಮತ್ತು ಸಗಣಿಯಿಂದ ಗೊಬ್ಬರವನ್ನು ತಯಾರಿಸಿ ಹೊಲಕ್ಕೆ ಹಾಕುವುದರಿಂದ ಉತ್ತಮವಾದ ಫಲವತ್ತತೆ ಬರುತ್ತದೆ ಇದರಿಂದ ರೈತರಿಗೆ ಬಹಳ ಅನುಕೂಲವಿದೆ ಮತ್ತು ಪಶುಗಳಿಗೆ ಉತ್ತಮವಾದ ಆಹಾರವನ್ನು ನೀಡುವುದರಿಂದ ಹಾಲಿನ ಉತ್ಪಾದನೆ ಇನ್ನೂ ಹೆಚ್ಚುತ್ತದೆ ಎಂದು ಹೇಳಿದರು.
ರೋಣ ಹಾಗೂ ಗಜೇಂದ್ರಗಡ ಹಾಲು ಒಕ್ಕೂಟದ ವಿಸ್ತರಣಾಧಿಕಾರಿಗಳಾದ ಜಿ. ಸಿ. ಸಾಲೋಟಗಿಮಠ ಹಾಗೂ ಮಲ್ಲಿಕಾರ್ಜುನ ಉನಚಗೇರಿ ಜಗದಂಬಾ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕರಾದ ಭಾಸ್ಕರಸಾ ಅರ್ಜುನಸಾ ಶಿಂಗರಿ ರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಯ್ದ ಉತ್ತಮ ಹಾಲು ಸಹಕಾರ ಸಂಘಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶುದ್ದ ಹಾಲು ಉತ್ಪಾದನೆ ಹಾಗೂ ಅಘೋಚರ ಕೆಚ್ಚಲುಬಾವು ಕುರಿತು ಡಾ. ಎಂ. ಬಿ. ಮಡಿವಾಳರ ನಿವೃತ್ತ ಜಂಟಿ ನಿರ್ದೇಶಕರು ಕ.ಹಾ.ಮ ತರಬೇತಿ ಕೇಂದ್ರ ರಾಯಾಪೂರ, ಧಾರವಾಡ, ಸಹಕಾರ ಸಂಘಗಳಲ್ಲಿ ಲೆಕ್ಕಪತ್ರಗಳ ನಿರ್ವಹಣೆ ಕುರಿತು ಬಿ. ಪಿ. ಹಿರೇಮಠ, ನಿವೃತ್ತ ಸಹಾಯಕ ವ್ಯವಸ್ಥಾಪಕರು ಧಾರವಾಡ ಒಕ್ಕೂಟ, ಧಾರವಾಡ, ಸಹಕಾರ ಕಾಯಿದೆಯ ಮುಖ್ಯಾಂಶಗಳು ಹಾಗೂ ಇತ್ತೀಚಿನ ತಿದ್ದುಪಡಿಗಳ ಕುರಿತು ಪ್ರಶಾಂತ ಮುಧೋಳ ಸಹಕಾರ ಅಭಿವೃಧ್ಧಿ ಅಧಿಕಾರಿಗಳು ರೋಣ ಇವರು ಉಪನ್ಯಾಸ ನೀಡಿದರು.
ಶಾಂತಗಿರಿ ಹಾಗೂ ಬೊಮ್ಮಸಾಗರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿಗಳಾದ ಗೀತಾ ಎಸ್. ಪೂಜಾರ ಮತ್ತು ಶಂಕ್ರಮ್ಮ ಎಹ್. ಮಾದರ ಪ್ರಾರ್ಥಿಸಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಇವರು ಸ್ವಾಗತಿಸಿ, ನಿರೂಪಿಸಿದರು ಯೂನಿಯನ್‌ದ ಮಹಿಳಾ ಸಹಕಾರ ಶಿಕ್ಷಕಿ ರಶೀದಾಬಾನು ಸಿ. ಯಲಿಗಾರ ವಂದಿಸಿದರು.