ಯರಗಟ್ಟಿ: 14 : ಸಮೀಪದ ಕೊರಕೊಪ್ಪ ಗ್ರಾಮದ ರೇವಣಸಿದ್ಧೇಶ್ವರ ಗುರುಕುಲದ ಆವರಣದಲ್ಲಿ ನಿರ್ಮಿಸಲಾದ ರೇವಣಸಿದ್ಧೇಶ್ವರ ಸಭಾ ಭವನವನ್ನು ಗುರುವಾರ ಉದ್ಘಾಟಿಸಲಾಯಿತು.ಈ ವೇಳೆ ಕಟಕೋಳ-ಎಂ.ಚಂದರಗಿ ಪೂಜ್ಯ ಷ. ಬ್ರ. ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಸತ್ತಿಗೇರಿ ಷ. ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ತ್ರಿವಿಧ ದಾಸೋಹದ ಮೂರ್ತಿ ಅಭಿನವ ಸಿದ್ರಾಯಜ್ಜನವರು, ಕೊರಕೊಪ್ಪ ರೇವಣಸಿದ್ಧೇಶ್ವರ ಸ್ವಾಮೀಜಿ, ಉಳವಯ್ಯಾ ಹಿರೇಮಠ, ಸೋಮನಗೌಡ ಪಾಟೀಲ,ಬಸನಗೌಡ ಪಾಟೀಲ, ಎನ್. ಎಸ್. ಹರಳಿ, ಸೇರಿದಂತೆ ಗ್ರಾಮದ ಗಣ್ಯ ಮಾನ್ಯರು ಮತ್ತು ಸಕಾಲ ಸದ್ಭಕ್ತರು ಇದ್ದರು.