ನಾಳೆ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ತಳಿ ಉದ್ಘಾಟನೆ
ರಾಣೇಬೆನ್ನೂರು 20: ವಾಣಿಜ್ಯ ನಗರದ ರಾಷ್ಟ್ರೀಯ ಹೆದ್ದಾರಿ 4. ಹಲಗೇರಿ ರಸ್ತೆ ಬೈ ಪಾಸ್ ಬ್ರಿಜ್ ಬಳಿ ನಾಳೇ ಡಿಸೆಂಬರ್ 22ರಂದು, ರವಿವಾರ ಮುಂಜಾನೆ 11,ಗಂಟೆಗೆ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ತಳಿ ಉದ್ಘಾಟನಾ ಸಮಾರಂಭವು ಜರುಗಲಿದೆ ಎಂದು ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗದ ಅಧ್ಯಕ್ಷ ಕುಬೇರ್ಪ ಕೊಂಡಜ್ಜಿ ಹೇಳಿದರು. ಅವರು ಶುಕ್ರವಾರ ಹಲಗೇರಿ ರಸ್ತೆ ಹೂರಬಿರ ಲಿಂಗೇಶ್ವರ, ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಕಂಚಿನ ಪುತ್ತಳಿ ಅನಾವರಣಕ್ಕಾಗಿ ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಬಹು ವರ್ಷಗಳ ಕನಸು ಇಂದು ನನಸಾಗಿದೆ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣ ಕ್ಕೀಟ್ಟ ವೀರಯೋಧ ಸಂಗೊಳ್ಳಿ ರಾಯಣ್ಣ, ಪುತ್ತಳಿ ನಗರಕ್ಕೆ ಕಳಸಪ್ರಾಯವಾಗಲಿದೆ ಎಂದರು. ಕಾಗಿನೆಲೆ ಕನಕ ಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು.
ದೇವಸ್ಥಾನದ ಪಟ್ಟದ ಅರ್ಚಕರಾದ ಶ್ರೀ ಭರಮಪ್ಪ ಮರಿಯಪ್ಪ ಪೂಜಾರ ನೇತೃತ್ವದಲ್ಲಿರುವರು. ಅಧ್ಯಕ್ಷ ಕುಬೇರ್ಪ ನಾಗಪ್ಪ ಕೊಂಡಜ್ಜಿ ಅಧ್ಯಕ್ಷತೆ ವಹಿಸುವರು. ಶಾಸಕ ಪ್ರಕಾಶ ಕೋಳಿವಾಡ ಸಮಾರಂಭ ಉದ್ಘಾಟಿಸಿದರು. ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರು, ಕಂಚಿನ ಪುತ್ತಳಿ ಅನಾವರಣಗೊಳಿಸುವರು. ಮಾಜಿ ಸಚಿವ ಆರ್. ಶಂಕರ್ ನಾಮಫಲಕ ಉದ್ಘಾಟಿಸುವರು. ರಾಜಕೀಯ ನಾಯಕರಾದ, ಬಸವರಾಜ ಬೊಮ್ಮಾಯಿ, ರುದ್ರ್ಪ ಲಮಾಣಿ, ಬಸವರಾಜ ಶಿವಣ್ಣನವರ, ಮತ್ತಿತರರು ಪಾಲ್ಗೊಳ್ಳುವರು. ರಾಜ್ಯ ಕಾಂಗ್ರೆಸ್ ವಕ್ತಾರ ನಿಖಿತ್ ರಾಜ್ ಮೌರ್ಯ ಅವರು ಉಪನ್ಯಾಸ ನೀಡುವರು. ಮಾಧ್ಯಮಗೋಷ್ಠಿಯಲ್ಲಿ ಷಣ್ಮುಖಪ್ಪ ಕಂಬಳಿ, ನಿಂಗಪ್ಪ ಗೌಡ್ರ, ಮಾರುತಿ ಹರಿಹರ, ಮಾಳಪ್ಪ ಪೂಜಾರ, ಮೃತ್ಯುಂಜಯ ಗುದಿಗೇರ, ಹುಚ್ಚಪ್ಪ ಮೇಡ್ಲೆರಿ, ಹನುಮಂತಪ್ಪ ದೇವರಗುಡ್ಡ ಮತ್ತಿತರರು ಇದ್ದರು.