ಕರ್ತಾರ್ ಪುರ್ ಕಾರಿಡಾರ್ ಉದ್ಘಾಟನೆ : ಪಾಕ್ ಪ್ರಧಾನಿಗೆ ಮೋದಿ ಧನ್ಯವಾದ

ಅಮೃತಸರ / ಪಂಜಾಬ್, ನ 9 :     ಪಂಜಾಬ್ ನ ಗುರುದಾಸಪುರ ಜಿಲ್ಲೆಯ ದೇರಾ ಬಾಬಾ ನಾನಕ್ ಗುರುದ್ವಾರದಿಂದ ಗೆ ಸಂಪರ್ಕ ಕಲ್ಪಿಸುವ ನಾಲ್ಕು ಕಿಲೋಮೀಟರ್ ಉದ್ದದ ಕಾರಿಡಾರ್ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಲೋಕಾರ್ಪಣೆ ಮಾಡಿದರು.     ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಭಾರತೀಯರ ಭಾವನೆಗಳನ್ನು ಗೌರವಿಸಿ ಸಹಕರಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಧನ್ಯವಾದ ಹೇಳಿದ್ದಾರೆ.    ಗುರುದಾಸಪುರದಲ್ಲಿರುವ ದೇರಾ ಬಾಬಾ ನಾನಕ್ ಗುರುದ್ವಾರ ಮತ್ತು ಪಾಕಿಸ್ತಾನದ ಕತರ್ಾರ್ ಪುರ್ ಲ್ಲಿರುವ ದಬರ್ಾರ್ ಸಾಹಿಬ್ ಗುರುದ್ವಾರಗಳು ಸಿಖ್ ಧರ್ಮಸಂಸ್ಥಾಪಕರ ಪ್ರಮುಖ ನೆಲೆಯಾಗಿದೆ ಎಂದು ಅವರು ಹೇಳಿದ್ದಾರೆ.    ಸಿಖ್ ಸಮುದಾಯದ ಬೇಡಿಕೆ 72 ವರ್ಷಗಳ ನಂತರ ಈಡೇರಿದೆ ಎಂದು ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಸಂತಸ ವ್ಯಕ್ತಪಡಿಸಿದ್ದಾರೆ.    ಪಾಕಿಸ್ತಾನದಲ್ಲಿರುವ ಕತರ್ಾರ್ ಪುರ್ ಸಾಹಿಬ್ ಕಾರಿಡಾರ್ ಗೆ ಸಂಪರ್ಕ ಕಲ್ಪಿಸುವ ರಸ್ತೆ ನಿಮರ್ಾಣ ಮಾಡಲು ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮಕ್ಕೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.    ಸಿಖ್ಖರ ಪಾಲಿಗೆ ಇದೊಂದು ಮರೆಯಲಾಗದ ಮತ್ತು ಐತಿಹಾಸಿಕ ದಿನ ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಒತ್ತಿ ಹೇಳಿದ್ದಾರೆ.    ಪಾಕಿಸ್ತಾನದ ಕಡೆಯಿಂದ ಮಾರ್ಗದ ಕೊನೆಯಲ್ಲಿ ಅತ್ತ ಕಡೆಯಿಂದ ಯಾತ್ರಾಥರ್ಿಗಳು ಬರಲು ಅನುಕೂಲವಾಗಲು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇಂದು ಕಾರಿಡಾರ್ ಉದ್ಘಾಟನೆ ಮಾಡಿದ್ದಾರೆ.