ಜೆಸಿವಾಣಿ ಅರಮನೆ ಉದ್ಘಾಟನೆ

Inauguration of Jesivani Palace

ಜೆಸಿವಾಣಿ ಅರಮನೆ ಉದ್ಘಾಟನೆ  

ರಾಣೇಬೆನ್ನೂರು  08: ನಗರದ ಹುಣಿಸಿಕಟ್ಟಿ ರಸ್ತೆಯಲ್ಲಿ ನಿರ್ಮಿಸಿರುವ ಜೆಸಿವಾಣಿ ಅರಮನೆ ಉದ್ಘಾಟನೆ ಹಾಗೂ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭ ಡಿ.23 ಮತ್ತು ಡಿ.22ರಂದು ಜರುಗಲಿದೆ. 

   ಡಿ.22ರಂದು ಬೆಳಿಗ್ಗೆ 09ಕ್ಕೆ ವಾಸ್ತು ಶಾಂತಿ ಹಾಗೂ ಸತ್ಯ ನಾರಾಯಣ ಪೂಜೆ, 

ಸಂಜೆ 06ಕ್ಕೆ ನಗರದ ಎರೇಕುಪ್ಪಿ ರಸ್ತೆಯ ನೀಲಕಂಠೇಶ್ವರ ದೇವಸ್ಥಾನದಿಂದ ಆರಂಭವಾಗಿ ಹುಣಿಸಿಕಟ್ಟಿ ಜೆಸಿ ಅರಮನೆ ವರೆಗೂ ವಧು ವರರ ಅದ್ದೂರಿ ಮೆರವಣಿಗೆ ಇರುತ್ತದೆ. 

    ಡಿ.23ರಂದು ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭ ಹಾಗೂ ಕಾಕಿ ಜನಸೇವಾ ಸಂಸ್ಥೆಯ ಇಬ್ಬರು ಸದಸ್ಯರು ಗಳಿಗೆ ಉಚಿತ ನಿವೇಶನ ಕಾರ್ಯಕ್ರಮ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ 9242204056 ಸಂಪರ್ಕಿಸಬಹುದು ಎಂದು ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ತಿಳಿಸಿದ್ದಾರೆ.