ತಾಂತ್ರಿಕ ಮಹಾವಿದ್ಯಾಲಯದಲ್ಲಿ ಖೋ-ಖೋ ಪಂದ್ಯಾವಳಿಗಳ ಉದ್ಘಾಟನೆಯ ಸಮಾರಂಭ

ಕಲಬುರ್ಗಿ 04:  ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರ​‍್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ 04 ರಂದು ನಡೆಯುವ ಪುರುಷರ ಖೋ-ಖೋ ಪಂದ್ಯಾವಳಿಗಳು  “ವಿಶ್ವೇಶ್ವರಾಯ  ತಾಂತ್ರಿಕ ವಿಶ್ವವಿದ್ಯಾಲಯದ  ಕಲಬುರ್ಗಿವಲಯದ ಪಂದ್ಯಾವಳಿಗಳು ಜರುಗಿದವು. ಈ ಪಂದ್ಯಾವಳಿಗಳಲ್ಲಿ ವಿಶ್ವೇಶ್ವರಾಯ  ತಾಂತ್ರಿಕ ವಿಶ್ವ ವಿದ್ಯಾಲಯ ವಿಟಿಯು ಕಲಬುರ್ಗಿವಲಯದ ಪರಿಮಿತಿಯಲ್ಲಿರುವ ಎಲ್ಲಾ ತಾಂತ್ರಿಕ ಮಹಾವಿದ್ಯಾಲಯಗಳ ತಂಡಗಳು ಪಾಲ್ಗೊಳ್ಳಿದವು. ಈ ಪಂದ್ಯಾವಳಿಗಳ ಕಾರ್ಯಕ್ರಮಕ್ಕೆ ಮಹಾವಿದ್ಯಾಲಯದ ಜಾನೆಕುಂಟೆ ಬಸವರಾಜ- ಅಧ್ಯಕ್ಷರು, ಆರ್‌ವೈಎಂಇಸಿ, ಪ್ರಾಂಶುಪಾಲರಾದ ಡಾಽಽ ಟಿ.ಹನುಮಂತರೆಡ್ಡಿ, ಡಾಽಽ ಎಸ್‌.ಕೊಟ್ರೇಶ ವಿದ್ಯುತ್ ಇಂಜೀನೀರಿಂಗ್ ವಿಭಾಗ, ಚಂದ್ರಶೇಖರ್‌- ಕ್ರೀಡಾ ಸಂಯೋಜಕರು ಇಸಿಇ ವಿಭಾಗ ಆರ್‌ವೈಎಂಇಸಿ  ಈ ಪಂದ್ಯಾವಳಿಗೆ ಚಾಲನೆ ನೀಡಿದರು. ದೈಹಿಕ ಶಿಕ್ಷಕರು - ವಿಜಯ ಮಹಾಂತೇಶ್, ಅಶೋಕ್‌-ಬಿಐಟಿಎಂ, ಸುನಿತಾ - ವೈದ್ಯಕೀಯ ವಿಭಾಗ, ಅಧಿಕಾರಿಗಳು (ರೆಫರಿಗಳು)-ಬಾಲಕೃಷ್ಣ-ಪ್ಯೂಪಿಲ್ ಟ್ರೀ, ಟೈಗರ್ ಬಾಬು- ಸರ್ಕಾರಿ ಶಾಲೆ, ನಾಗೇಶ್‌- ನಂದಾ ಪಿ.ಯು ಕಾಲೇಜ್, ಬಬ್ಬಲು- ನಂದಾ ಪಿ.ಯು ಕಾಲೇಜ್,  ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದರು. 

ಅಧ್ಯಕ್ಷರು, ಆರ್‌ವೈಎಂಇಸಿ, ಜಾನೆಕುಂಟೆ ಬಸವರಾಜ- ಎಂಜಿನಿಯರ್‌ಗಳಂತಹ ವೃತ್ತಿಪರ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ದೈಹಿಕ ಸಾಮರ್ಥ್ಯವು ಮುಖ್ಯವಾಗಿದೆ ಈ ತರಹದ ಪಂದ್ಯಾವಳಿಗಳು ಜರುಗುವುದರಿಂದ ನಮ್ಮ ದೇಹ ಚುರುಕಾಗಿ, ಸ್ತಿಮಿತದಲ್ಲಿರುತ್ತದೆ, ಈ ಆಟಗಳು ಗ್ರಾಮೀಣ ಪ್ರದೇಶಗಳಲ್ಲಿ ಅತಿ ಹೆಚ್ಚು ಪ್ರಚಲಿತಗೊಂಡಿರುತ್ತವೆ. ಈ ಆಟಕ್ಕೆ ಯಾವುದೇ ಸಲಕರಣೆಗಳು ಬೇಕಾಗಿರುವುದಿಲ್ಲ. ಕೇವಲ ಸ್ವಲ್ಪ ಬಯಲು ಸ್ಥಳವಿದ್ದರೆ ಸಾಕು. ಗ್ರಾಮೀಣ ಯುವಕರಿಗೆ ಈ ಆಟವು ಅಚ್ಚುಮೆಚ್ಚು.   ಎಂದು ಹೇಳಿ ಎಲ್ಲಾ ಪಟುಗಳಿಗೆ ಶುಭಹಾರೈಸಿದರು.