ಜಿಶಾನ್ ಸಿರಸಂಗಿ ಅವರು ಸ್ಥಾಪಿಸಿದ ಜೆಎಸ್ ಗ್ಲೋಬಲ್ ಇನ್‌ಸ್ಟಿಟ್ಯೂಟ್‌ದ ಉಧ್ಘಾಟನಾ ಸಮಾರಂಭ

Inaugural ceremony of JS Global Institute founded by Zishan Sirsangi

ಜಿಶಾನ್ ಸಿರಸಂಗಿ ಅವರು ಸ್ಥಾಪಿಸಿದ ಜೆಎಸ್ ಗ್ಲೋಬಲ್ ಇನ್‌ಸ್ಟಿಟ್ಯೂಟ್‌ದ ಉಧ್ಘಾಟನಾ ಸಮಾರಂಭ

ಹುಬ್ಬಳ್ಳಿ 15 :ಇಂಗ್ಲೀಷನಲ್ಲಿ ಎಚ್‌ಒಪಿಇ, ಹೋಪ್ ಎಂಬ ಕೃತಿಯನ್ನು ರಚಿಸಿರುವ ಲೇಖಕ, ಇಂಜಿನಿಯರ್ ಜಿಶಾನ್ ಸಿರಸಂಗಿ ಅವರು ಹೊಸದಾಗಿ ಸ್ಥಾಪಿಸಿದ ಜೆಎಸ್ ಗ್ಲೋಬಲ್ ಇನ್‌ಸ್ಟಿಟ್ಯೂಟ್‌ದ ಉಧ್ಘಾಟನಾ ಸಮಾರಂಭ ಹೊಸುರಿನ  ಜಿಕೆ ಕಟ್ಟಡದ ಮೂರನೇ ಪ್ಲೋರ್‌ನಲ್ಲಿ ಅದ್ಧೂರಿಯಾಗಿ ಜರುಗಿತು. 

 ಬಸವೇಶ್ವರ ರೂರಲ್ ಎಜುಕೇಶನ್ ಆಂಡ್ ಡೆವಲೆಫ್‌ಮೆಂಟ್ ಟ್ರಸ್ಟನ                                                                                                                                ಅಧ್ಯಕ್ಷ ಡಾ. ಶರಣಪ್ಪ ಎಂ.ಕೊಟಗಿ ಅವರು ಉಧ್ಘಾಟಿಸಿ. ಮಾತನಾಡಿದ ಅವರು ಜಿಶಾನ್‌ಅವರು ಸಣ್ಣ ವಯಸ್ಸಿನಲ್ಲಿ ಇಂತಹ ಜೆಎಸ್‌ಗ್ಲೋಬಲ್ ಇನ್‌ಸ್ಟಿಟ್ಯೂಟ್‌ನ್ನು ಪ್ರಾರಂಭಿಸಿರುವುದು ತುಂಭಾ ಸಂತೋಷದ ವಿಷಯ. ಹೊಸ ಸಂಸ್ಥೆ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ನೀಡಲಿ ಎಂದು ಶುಭಕೋರಿದರು.  

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ಧ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಮಾತನಾಡಿ ಇಂದಿನ ಸ್ಪರ್ಧಾತ್ಮಕಯುಗದಲ್ಲಿ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಅವಶ್ಯ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಬೇಕು. ಯುಪಿಎಸ್‌ಸಿ, ಸಿಇಟಿ, ಪಿಜಿಸಿಇಟಿ, ಮುಂತಾದ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಉನ್ನತವಾದ ಉದ್ಧೇಶವನ್ನು ಗ್ಲೋಬಲ್ ಇನ್‌ಸ್ಟಿಟ್ಯೂಟ್ ಹೊಂದಿದೆ. ಜಿಶಾನ್ ಅವರು ಅತ್ಯಂತ ಆಸಕ್ತಿಯಿಂದ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಘನ ಉದ್ಧೇಶವನ್ನು ಇಟ್ಟುಕೊಂಡು ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಜಿಶಾನ್  ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ, ಮಕ್ಕಳು ಉತ್ತಮ ಶಿಕ್ಷಣ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವಂತಾಗಲಿ, ಕಲಿಯುವ ಅವಕಾಶ ದೊರಕಲಿ ಎಂದು ಅಭಿನಂದನೆಗಳನ್ನು ಸಲ್ಲಿಸಿ, ಶುಭಕೋರಿದರು. 

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ91 ಅಂಕಗಳನ್ನು ಪಡೆದ ಕನಿಕಾ ಜೈನ್ ಅವರನ್ನು ಗೌರವಿಸಲಾಯಿತು. ಹೊಸದಾಗಿ ಸ್ಥಾಪಿಸಿದ ಜೆಎಸ್‌ಗ್ಲೋಬಲ್ ಇನ್‌ಸ್ಟಿಟ್ಯೂಟ್‌ದ ಅಧ್ಯಕ್ಷ ಪ್ರೊಜಿಶಾನ್ ಸಿರಸಂಗಿ ಅವರುಅಧ್ಯಕ್ಷತೆ ವಹಿಸಿದ್ದರು.ಜಿಶಾನ್‌ಅವರತಂದೆದಾದಾಹಯತ್ ಸಿರಸಂಗಿ, ಅಂಕಲ್ ಜಯಾಂಗಿರ್ ಉಮಚಗಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ, ಸಾಹಿತಿ ಪ್ರೊ ಎಸ್‌.ಎಂ.ಸಾತ್ಮಾರ, ಸೋಹನ ಸುರೇಶ ಹೊರಕೇರಿ, ವಿ.ಜಿ.ಪಾಟೀಲ, ಡಾ. ವಂದನಾ ಕರಾಳೆ,  ಬಸನಗೌಡ ಪಾಟೀಲ, ನಿಖಿಲ್ ಹಿರೇಮಠ, ಸಹನಾ, ಪ್ರಣವ, ವಿದ್ಯಾರ್ಥಿಗಳು, ಮುಂತಾದವರು ಇದ್ದರು.