ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದು ಶತಸಿದ್ದ: ಬಸವನಗೌಡ

ಲೋಕದರ್ಶನ ವರದಿ

ಶಿಗ್ಗಾವಿ29 : 4 ಭಾರಿ ತಾಲೂಕಿನಲ್ಲಿ ಸೋಲು ಕಂಡಿದ್ದೇವೆ ಅಂದರೆ ಮುಂದೆ ಗೆಲುವು ಕಾಣುತ್ತೇವೆ ಅದು ಕಾಂಗ್ರೆಸ ಪಕ್ಷದ ಉದ್ದೇಶ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ಬಸವನಗೌಡ ದೇಸಾಯಿ ಹೇಳಿದರು.

       ತಾಲೂಕಿನ ಬಿಸನಳ್ಳಿ ಗ್ರಾಮದಲ್ಲಿ ರಾಜ್ಯಾಧ್ಯಕ್ಷ ಹಾಗೂ ಕಾಯರ್ಾದ್ಯಕ್ಷರ ಪ್ರತಿಜ್ಞಾ ದಿನದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಪಕ್ಷ ಸಂಘಟನೆ ಮುಖಾಂತರ ಏನನ್ನಾದರೂ ಗೆಲ್ಲಬಹುದು ಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದು ಶತಸಿದ್ದ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗುವುದು ಕಟ್ಟಿಟ್ಟ ಬುತ್ತಿ ಎಂದರು.

           ಕೆ.ಪಿ.ಸಿ.ಸಿ ತಾಲೂಕಿನ ವೀಕ್ಷಕರಾದ ಸುನೀತಾ ಹುರಕಡ್ಲಿ ಮಾತನಾಡಿ ಚುನಾವಣೆ ಇದ್ದಾಗ ಟಿಕೇಟ ಬೇಕು ಎಂದು ಹುಡುಕಿಕೊಂಡು ಬರುವ ಜನ ಪಕ್ಷದ ಸಂಘಟನೆ, ಸಭೆ, ಕಾರ್ಯಕ್ರಮಕ್ಕೆ ಏಕೆ ಬರುವುದಿಲ್ಲ, ಪಕ್ಷ ಎನ್ನುವುದು ನಮ್ಮ ಮನೆ ಇದ್ದ ಹಾಗೆ ಮನೆಯಲ್ಲಿ ಅನೇಕ ಸಮಸ್ಯೆಗಳಿರುತ್ತವೆ ಅವುಗಳನ್ನು ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು.

  ಜೊತೆಗೆ ತಾಲೂಕಿನಲ್ಲಿ ಅನೇಕ ಸಮಸ್ಯೆಗಳಿವೆ ಅವುಗಳನ್ನು ಸಂಘಟನೆ ಮುಖಾಂತರ ಹೋರಾಟ ಮಾಡಿ ಕಾರ್ಯಕರ್ತರ ವಿಶ್ವಾಸವನ್ನು ಪಡೆದು ಯಶಸ್ಸುಗಳೀಸಬೇಕಿದೆ ಅಲ್ಲದೆ ಮನೆ ಮನೆಗೆ ಹೋಗಿ ಪಕ್ಷದ ಸಂಘಟನೆ ಮಾಡಬೇಕು ಅಲ್ಲದೇ ಪ್ರತಿಜ್ಞಾ ಕಾರ್ಯಕ್ರಮಕ್ಕೆ ಗ್ರಾಮಪಂಚಾಯತಿ ಮಟ್ಟದಲ್ಲಿ ಕನಿಷ್ಟ 25 ಜನ ಕಾರ್ಯಕರ್ತರನ್ನು ಸೇರಿಸಿ ಕಾರ್ಯಕ್ರಮ ಯಶಸ್ವಿಗೋಳಿಸಬೇಕಾಗಿದೆ ಎಂದರು.

         ತಾಲೂಕ ಬ್ಲಾಕ ಕಾಂಗ್ರೇಸ್ ಅಧ್ಯಕ್ಷ ಎಂ.ಎನ್.ವೆಂಕೋಜಿ ಮಾತನಾಡಿ  ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪುರಸಭೆ ಮತ್ತು  ಗ್ರಾಮ ಪಂಚಾಯತಿ ಸಂಯೋಜಕರನ್ನು ನೇಮಕ ಮಾಡಿದ್ದು ಕೆಲವರು ಅನಿವಾರ್ಯ ಕಾರಣಗಳಿಂದ ಬರದೆ ಇರಬಹುದು.

 ಜೊತೆಗೆ ಖಾದ್ರಿ ಸಾಹೇಬರು ಬರುವುದಿಲ್ಲದೆ ಇರುವುದರಿಂದ ಕೆಲವರು ಸಭೆಗೆ ಬರಲು ಇರುಸು ಮುರುಸು ಮಾಡುತ್ತಾರೆೆ ಒಟ್ಟಿನಲ್ಲಿ ತಾಲೂಕಿನಲ್ಲಿ ಪದಗ್ರಹಣ ಕಾರ್ಯಕ್ರಮ ಯಶಸ್ವಿಗೋಳಿಸಬೇಕು ಎಂದರು.

        ನ್ಯಾಯವಾದಿ ರಾಜೇಶ ಕಮ್ಮಾರ ಮಾತನಾಡಿ ಪದಗ್ರಹಣ ಕಾರ್ಯಕ್ರಮದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯವನ್ನು ಹಂಚಿಕೊಂಡು ಕೆಲಸ ನಿರ್ವಹಿಸಿದರೆ ಯಶಸ್ಸು ಸಾಧಿಸಬಹುದು ಜೊತೆಗೆ ಪ್ರತಿಜ್ಞಾ ದಿನ ಕಾರ್ಯಕ್ರಮದ ಮೂಲಕ ಕನರ್ಾಟಕದಲ್ಲಿ ಕೆಲವೊಂದು ಕ್ರಾಂತಿಗಳಾಗುತ್ತವೆ ಎಂದರು.

      ಎಸ್.ಸಿ.ಎಸ್.ಟಿ ಘಟಕದ ಜಿಲ್ಲಾಧ್ಯಕ್ಷ ಎಸ್.ಎಫ್.ಮಣಕಟ್ಟಿ ಮಾತನಾಡಿ ತಾಲೂಕಿನಲ್ಲಿ ಬಿದ್ದ ಮನೆಗಳಿಗೆ ನೆರೆ ಪರಿಹಾರ ಸಿಗದೇ ಸಿಕ್ಕ ಪರಿಹಾರದಲ್ಲಿ ಅನೇಕ ಕಟ್ಟಿದ ಕಟ್ಟಡಗಳು ಬೀಳುತ್ತೀವೆ ಇದರ ಬಗ್ಗೆ ಗೃಹ ಸಚಿವರು ಗಮನಹರಿಸಬೇಕು ಎಂದರು.

       ಹಾವೇರಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಪ್ರೇಮಾ ಪಾಟೀಲ ಮಾತನಾಡಿ ತಾಲೂಕಿನಲ್ಲಿ ಅನೇಕ ಬಗೆಹರಿಯದ ಸಮಸ್ಯೆಗಳಿದ್ದು ತಾಲೂಕಿನಲ್ಲಿ  ಸಾರ್ವಜನಿಕರಿಗೆ ಸ್ಪಂದಿಸುವ ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳು ಬೇಕಾಗಿದ್ದಾರೆ ಎಂದರು. 

ಸಾಮಾಜಿಕ ಜಾಲತಾಣ ಸಂಚಾಲಕ ಮಹಾಂತೇಶ ಸಾಲಿ ಮಾತನಾಡಿ ಪದಗ್ರಹಣ ಕಾರ್ಯಕ್ರಮದ ಪರಿಕರಗಳನ್ನು ಹೇಗೆ ಇಟ್ಟುಕೊಳ್ಳಬೇಕು ಮತ್ತು ಅದರ ರೂಪರೇಷೆಗಳನ್ನು ಹೇಳಿದರು.

       ಕಾಯರ್ಾಧ್ಯಕ್ಷ ವಿರೇಶ ಆಜೂರ, ಕಾಂಚನಾ ಘಾಟಗೆ, ವಕ್ತಾರ ಮಂಜುನಾಥ ಮಣ್ಣಣ್ಣವರ, ಪುರಸಭೆ ಸದಸ್ಯರಾದ ಗೌಸಖಾನ ಮುನಶಿ, ವಸಂತಾ ಭಾಗೂರ, ಮುಸ್ತಾಕ ಮುಲ್ಲಾ, ಶಬ್ಬೀರ ಮಕಾಂನದಾರ, ಮಂಜುನಾಥ ತಿಮ್ಮಾಪೂರ, ಎಫ್.ಜಿ.ಪಾಟೀಲ, ಜಾಫರ ಭಾಗವಾನ, ಪಿರೋಜ ಕಾಮನಹಳ್ಳಿ, ಮುನ್ನಾ ಲಕ್ಷ್ಮೇಶ್ವರ, ಪ್ರಧಾನ ಕಾರ್ಯದಶರ್ಿ ಶ್ರೀಕಾಂತ ಪೂಜಾರ ನಿರೂಪಣೆ ನಿರ್ವಹಿಸಿದರು.