ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ಬಹಳ ಮುಖ್ಯ

ಲೋಕದರ್ಶನ ವರದಿ

ಯರಗಟ್ಟಿ 04: ಇಂದಿನ ಸಮಾಜದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ನೀಡುವುದು ಬಹಳ ಮುಖ್ಯ ಎಂದು ಪಶು ವೈಧ್ಯ ಡಾ.ಎಸ್.ಕೆ.ಪಾಟೀಲ ಹೇಳಿದರು.

ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ ಶಾಲೆ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡುತ್ತಾ ಪಾಲಕರು ಆಂಗ್ಲ ಮಾದ್ಯಮದ ವ್ಯಾಮೋಹವನ್ನು ಬಿಡಬೇಕು, ಪ್ರತಿಯೊಂದು ಕ್ಷೇತ್ರದಲ್ಲಿಯೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೇ ಮೇಲುಗೈ ಸಾದಿಸುತ್ತಿದ್ದಾರೆ ಎಂದರು.

ಈ ಸಂಧರ್ಭದಲ್ಲಿ ಶ್ರೀ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ವಿದ್ಯಾರ್ಥಿಗಳಿಗೆ ಬಸವಣ್ಣವರ ವಚನಗಳ ಕಂಠಪಾಠ ಸ್ಪರ್ದೇ ಎರ್ಪಡಿಸಲಾಗಿತ್ತು ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಜಿ.ಪಂಸದಸ್ಯ ಅಜೀತಕುಮಾರ ದೇಸಾಯಿ ಕಾರ್ಯಕ್ರಮ ಉದ್ಘಾಟಿಸಿದರು, ಎಸ್ಡಿಎಮ್ಸಿ ಅಧ್ಯಕ್ಷ ಸಂಜು ಚನ್ನಮೇತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಗ್ರಾ.ಪಂ.ಅಧ್ಯಕ್ಷೆ ಕಸ್ತೂರಿ ಕಡೆಮನಿ, ಉಪಾದ್ಯಕ್ಷೆ ಲಕ್ಷ್ಮೀ ಸೊನ್ನದ, ರೇಣುಕಾ ಚನ್ನಮೇತ್ರಿ, ಆರ್.ಬಿ.ಗಾಣಗಿ, ರಫಿಕ್.ಡಿ.ಕೆ, ಫಕೀರಪ್ಪ ಚನ್ನಮೇತ್ರಿ, ಈರಣ್ಣ ಹುಲ್ಲೂರ, ಗೋಪಾಲ ಚನ್ನಮೇತ್ರಿ, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಪುಂಡಲೀಕ ತಳವಾರ ಸ್ವಾಗತಿಸಿದರು, ಶಿಕ್ಷಕ ವಿಜಯ ಮರಡಿ ನಿರೂಪಿಸಿ ವಂದಿಸಿದರು.