ವಾಷಿಂಗ್ಟನ್, ಮಾರ್ಚ್ 27, ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು
ಮುಂಜಾಗ್ರತಾ ಕ್ರಮವಾಗಿ ಅಮೆರಿಕದ ನ್ಯೂಯಾರ್ಕ್ ಬಂಧೀಖಾನೆಯಿಂದ ಇನ್ನೂ 175 ಕೈದಿಗಳನ್ನು
ಬಿಡುಗಡೆ ಮಾಡಿದ್ದು ಈವರೆಗೆ ಒಟ್ಟು 375 ಜನರನ್ನು ಬಂಧಮುಕ್ತಗೊಳಿಸಲಾಗಿದೆ ಎಂದು
ಮೇಯರ್ ಬಿಲ್ ಡಿ ಬ್ಲೇಸೋ ಹೇಳಿದ್ದಾರೆ.ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ದಿನದಾಂತ್ಯದ ವೇಳೆಗೆ ಬಿಡುಗಡೆಯಾದ ಸೆರೆಮನೆವಾಸಿಗಳ ಸಂಖ್ಯೆ 200 ರಿಂದ 375 ಕ್ಕೆ ಏರಿಕೆಯಾಗಲಿದೆ ಎಂದರು.ಹಿಂಸಾತ್ಮಕವಲ್ಲದ ಅಪರಾಧಗಳಿಗೆ ಶಿಕ್ಷೆಗೆ ಗುರಿಯಾಗಿದ್ದು, ಒಂದು ವರ್ಷಕ್ಕಿಂತ ಕಡಿಮೆ
ಶಿಕ್ಷೆ ಬಾಕಿ ಇದ್ದ 200 ಜನರನ್ನು ಬುಧವಾರ ಬಿಡುಗಡೆ ಮಾಡಲಾಗಿತ್ತು ಇನ್ನೂ 700 ಬಂಧಿತರ ಬಿಡುಗಡೆಯ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದೂ ಅವರು ತಿಳಿಸಿದ್ದರು.ನ್ಯೂಯಾರ್ಕ್ ನಲ್ಲಿ ಈವರೆಗೆ 21873 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು 281 ಜನರು ಸಾವನ್ನಪ್ಪಿದ್ದಾರೆ.