ಶ್ರೀನಗರ - ಜಮ್ಮು ಹೆದ್ದಾರಿಯಲ್ಲಿ ಸುಧಾರಿತ ಸ್ಫೋಟಕ : ನಿಷ್ಕ್ರಿಯಗೊಳಿಸಿ ಅನಾಹುತ ತಡೆ

      ಶ್ರೀನಗರ, ನ 21:  ಕಾಶ್ಮೀರ ಕಣಿವೆಯನ್ನು ದೇಶದ ಇತರ ಭಾಗಗಳೊಂದಿಗೆ ಸಂಪಕರ್ಿಸುವ ಶ್ರೀನಗರ - ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಇರಿಸಲಾಗಿದ್ದ ಸುಧಾರಿತ ಸ್ಫೋಟಕ ಸಾಧವನ್ನು ಭದ್ರತಾ ಪಡೆ ಸಿಬ್ಬಂದಿ ನಿಷ್ಕ್ರಿಯಗೊಳಿಸಿ ಭಾರಿ ಅನಾಹುತ ತಡೆದಿದ್ದಾರೆ. 

      ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಖುದ್ವಾನಿ ಪ್ರದೇಶದ ಲಾರಂ ಗಂಗೀಪೋರಾ ಬಳಿ ಸಂಶಯಾಸ್ಪದ ವಸ್ತುವನ್ನು ರೋಡ್ ಓಪನಿಂಗ್ ಪಾಟರ್ಿ ಗಮನಿಸಿದ್ದು, ತಕ್ಷಣವೇ ಬಾಂಬ್ ನಿಷ್ಕ್ರಿಯ ದಳಕ್ಕೆ ವಿಷಯ ತಿಳಿಸಿ ಸ್ಪೋಟ ತಡೆಯಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.  

      ಯಾವುದೇ ಅನಾಹುತವಾಗದಂತೆ ಸ್ಫೋಟಕ ಸಾಧವನ್ನು ನಿಷ್ಕ್ರಿಯಗೊಳಿಸಲಾಯಿತು ಮತ್ತು  ಈ ಮಾರ್ಗದಲ್ಲಿ ಸಂಚಾರವನ್ನು ಬದಲಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.  

      ಕಳೆದ ವಾರ ಭದ್ರತಾ ಪಡೆಗಳು ಪಂಪೋರ್ ಹೆದ್ದಾರಿಯಲ್ಲಿ ಸುಧಾರಿತ ಸ್ಫೋಟಕ ಸಾಧವನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದ್ದರು. 

      ಶ್ರೀನಗರ - ಜಮ್ಮು ಎರಡೂ ಕಡೆಯಿಂದ ಗುರುವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಘು ಮೋಟಾರು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಭಾರಿ ಮೋಟಾರು ವಾಹನಗಳ ಪ್ರವೇಶಕ್ಕೆ ಅವಕಾಶವಿರಲಿಲ್ಲ.