ಗುರುಪ್ರೇರಣೆಯಿಂದ ಮಕ್ಕಳ ಆರೋಗ್ಯ ವೃದ್ಧಿಸಲು ಸಾಧ್ಯ: ನಿರುಪಾಧೀಶ್ವರರು

ಲೋಕದರ್ಶನ ವರದಿ

ರಬಕವಿ-ಬನಹಟ್ಟಿ 24: ಮಾತೃತ್ವಭಾವ ಹೊಂದಿದ ವೈದ್ಯ ಗುರು ಪ್ರೇರಣೆ, ಮಾತೃಪ್ರೇಮದಿಂದ ಮಕ್ಕಳ ಆರೋಗ್ಯ ವೃದ್ಧಿಸಲು ಸಾಧ್ಯ. ದೇವರು ತಾಯಿಗೆ ನೀಡಿರುವ ಶಕ್ತಿಯಿಂದ ಮಗುವಿನ ಸವರ್ೋತ್ತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ. ಅಂತೆಯೇ ವೈದ್ಯನು ಸಹ ಮಗುವಿನ ರೋಗ ಗುಣಪಡಿಸಲು ತಾಯಿಯ ವಾತ್ಸಲ್ಯವನ್ನು ತೋರಬೇಕು ಎಂದು ಮರೇಗುದ್ದಿಯ ಶ್ರೀ ನಿರುಪಾಧೀಶರರು ಹೇಳಿದರು.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹೊಸೂರ-ರಬಕವಿಯ ಡಾ. ಅಭಿನಂದನ ಡೋಲರ್ೆರವರ ಸ್ಪರ್ಶ ಮಕ್ಕಳ ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 

ಕಾರ್ಯಕ್ರಮದ ಸಾನಿಧ್ಯವಹಿಸಿದ ರಬಕವಿಯ ಶ್ರೀ ಗುರುಸಿದ್ದೇಶ್ವರರು ವೈದ್ಯ ಮತ್ತು ರೋಗಿಯ ಸಂಭಂಧ ತಾಯಿ ಮತ್ತು ಮಗುವಿನ ಸಂಭಂದಂತೆ. ತಾಯಿ ಆರೈಕೆ ಮಾಡುವಂತೆ ವೈದಯ ರೋಗಿಯನ್ನು ಆರೈಕೆ ಮಾಡುತ್ತಾನೆ. ಮಗುವಿನ ಗುಣಮುಖವೇ ವೈದ್ಯನ ಗುರಿಯಾಗಿರುತ್ತದೆ ಎಂದು ಹೇಳಿದರು.

ಬಾಗಲಕೋಟೆಯ ಡಾ. ಆರ್.ಟಿ.ಪಾಟೀಲರು ಪ್ರೀತಿ, ಗೌರವದೊಂದಿಗೆ ಮಕ್ಕಳನ್ನು ಬೆಳಸಬೇಕು. ರಾಜ್ಯದ ಪ್ರಮುಖ ಜಿಲ್ಲೆಯಲ್ಲಿ ದೊರೆಯುವ ಮಕ್ಕಳ ಆಸ್ಪತ್ರೆಯ ಸೌಲಭ್ಯಗಳನ್ನು ರಬಕವಿಯ ಸ್ಪರ್ಶ ಆಸ್ಪತ್ರೆಯಲ್ಲಿ ದೊರೆಯುಂವತೆ ಡಾ. ಡೋಲರ್ೆ ಮಾಡಿದ್ದಾರೆ. ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಉನ್ನತ ಶ್ರೇಣಿಯ ಅಸ್ಪತ್ರೆ ನಿಮರ್ಾಣ ಮಾಡಿರುವುದು ಸಾಧನೆಯೇ ಸರಿ ಎಂದರು.

ಉದ್ಯಮಿ ಗಣಪತ ಹಜಾರೆ, ಮಹಾಲಿಂಗಪುರದ ಡಾ. ಎ.ಆರ್.ಬೆಳಗಲಿ, ಬಾಗಲಕೋಟೆಯ ಡಾ.ಆರ್.ಟಿ. ಪಾಟೀಲ. ಡಾ.ಯತೀಶ ಪೂಜಾರ, ಬಿ.ಎ.ದೇಸಾಯಿ, ಧರ್ಮಣ್ಣ ಮುದಕ್ಕನವರ, ಮಹಾವೀರ ಡೋಲರ್ೆ ಮತ್ತಿತರ ಗಣ್ಯರು ವೇದಿಕೆ ಮೇಲಿದ್ದರು.

ಪ್ರಕಾಶ ಸಿಂಗನ ಕಾರ್ಯಕ್ರಮ ನಿರೂಪಿಸಿದರು, ಎಂ.ಎಸ್.ಹೊಸಮನಿಯವರು ವಂದಿಸಿದರು. ಕಾರ್ಯಕ್ರಮದ ನಿಮಿತ್ಯ ವನಮಹೋತ್ಸವ, ಭರತನಾಟ್ಯ ಕಾರ್ಯಕ್ರಮಗಳು ನಡೆದವು.