ವಚನ ಪಾಲಿಸುವುದರ ಜೊತೆಗೆ ಅನುಕರಣೆ ಮಾಡಬೇಕು: ಎಚ್.ಪ್ರಸನ್ನ

ಲೋಕದರ್ಶನ ವರದಿ

ವಿಜಯಪುರ 04: ಸಮಾಜದಲ್ಲಿ ಇರುವಂತಹ ಕೆಟ್ಟ ಪಿಡುಗು, ಮೂಡನಂಬಿಕೆಗಳನ್ನು ಹೊಡೆದೊಡಿಸಲು ಅನೇಕ ಶರಣ ಮಹನೀಯರ ವಚನಗಳು ಸಾಹಿತ್ಯಾತ್ಮಕವಾಗಿ ಹೋರಾಟ ಮಾಡುತ್ತವೆ. ಪ್ರಸ್ತುತ ದಿನಗಳಲ್ಲಿ ಶರಣರ ವಚನಗಳನ್ನು ಪಾಲಿಸುವುದಷ್ಟೇ ಅಲ್ಲದೇ ಅನುಕರಣೆ ಮಾಡಬೇಕು ಎಂದು ಅಪರ ಜಿಲ್ಲಾದಿಕಾರಿ ಎಚ್. ಪ್ರಸನ್ನ  ಅವರು ಹೇಳಿದರು

ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿಂದು ನಗರದ ಕಂದಗಲ್ ಹನುಮಂತರಾಯ ರಂಮಂದಿರದಲ್ಲಿ ಆಯೋಜಿಸಿದ್ದ  ಕಾಯಕ (ದಲಿತ ವಚನಕಾರರ) ಶರಣರ ಜಯಂತಿ ಕಾರ್ಯಕ್ರಮವನ್ನು  ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 

ಎಲ್ಲಾ ಶರಣರು ನುಡಿದಂತೆ ನಡೆದಿದ್ದಾರೆ, ತಮ್ಮ ವಚನ ಸಾಹಿತ್ಯವನ್ನು ರಚಿಸುವುದಲ್ಲದೆ ಪಾಲನೋಪಾದಿಯಲ್ಲಿ ನಡೆದಿದ್ದಾರೆ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿ ಎಲ್ಲರ ಮನದಲ್ಲಿ ಅಜರಾಮರವಾಗಿ ಉಳಿದ್ದಿದ್ದಾರೆ ಎಂದು ಹೇಳಿದರು.

ಸಾಮಾಜಿಕ ಪ್ರಜ್ಞೆಯೊಂದಿಗೆ ಸಾಮಾಜಿಕ ನ್ಯಾಯ ಒದಗಿಸುವ ಚಿಂತನೆ ಅಂದಿನ ಶರಣ ವಚನಕಾರರ ಗುರಿಯಾಗಿತ್ತು,  ಸತ್ಯ ಶುದ್ದ ಕಾಯಕ ಜೀವಿಗಳಾಗಿದ್ದರು, ತಮ್ಮ ಕಾಯಕದಲ್ಲಿ ದೇವರನ್ನು ಕಾಣುವ ಮನೋಭಾವ ಅವರದಾಗಿತ್ತು, ಶರಣರ ಸೇವೆ ಮಾಡುವುದರಲ್ಲೆ ಸ್ವರ್ಗವನ್ನು ಕಾಣುತ್ತಿದ್ದರು, ಶರಣರು ಪವಾಡ ಪುರುಷರಾಗಿರಲಿಲ್ಲ ಬದಲಿಗೆ ತತ್ವಾದರ್ಶಗಳನ್ನು ಬಿತ್ತುವ ಕಾಯಕ ಯೋಗಿಗಳಾಗಿದ್ದರು ಎಂದು ಹೇಳಿದರು.

ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಜಂಬುನಾಥ ಕಂಚ್ಯಾಣಿ ಅವರು ಮಾತನಾಡಿ,  12 ನೇ ಶತಮಾನದಲ್ಲಿ ಚತೃವರ್ಣ ಪದ್ದತಿಯನ್ನು ತೊಡೆದು ಹಾಕಲು ಬಸವಣ್ಣನವರ ನೇತೃತ್ವದಲ್ಲಿ ಅನುಭವ ಮಂಟಪ ರಚನೆಯಾಗಿತ್ತು. ಇಂದು ಜಾತಿ ಪದ್ದತಿ ತಾಂಡವವಾಡುತ್ತಿದ್ದು  ಇದನ್ನು ನಿಮರ್ೂಲನೆ ಮಾಡಲು ಅನೇಕ ಶರಣ ಶರಣೆಯರ ವಚನ ಸಾಹಿತ್ಯವನ್ನು ಅವಲೋಕಿಸುವ ಅವಶ್ಯಕತೆ ಇದೆ. ಬಸವಣ್ಣನವರ ಸಂದೇಶಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು. ವಚನಗಳ ರಕ್ಷಣೆಗಾಗಿ ಅನೇಕ ಶರಣರು ತಮ್ಮ ಪ್ರಾಣವನ್ನೆ ತ್ಯಾಗ ಮಾಡಿದ್ದಾರೆ. ಅಂತವರ ಸಾಲಿನಲ್ಲಿ  ಫ.ಗು.ಹಳಕಟ್ಟಿಯವರು ಒಬ್ಬರು, ವಚನ ಸಾಹಿತ್ಯದ ಉಳಿವಿಗಾಗಿ ಅವರು ಮಾಡಿದ ಹೋರಾಟ ಅವಿಸ್ಮರಣಿಯವಾದುದು ಎಂದು ಹೇಳಿದರು.

ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕಿ ಎಚ್.ಬಿ.ವಿದ್ಯಾವತಿ ಮಾತನಾಡಿ,  ಅನೇಕ ಶರಣ ಶರಣಿಯ ಮಹಾನೀಯರು ಸತ್ಯ ಶುದ್ದ ಕಾಯಕಕ್ಕೆ ಹೆಸರುವಾಸಿಯಾಗಿದ್ದು ಸಮಾಜದಲ್ಲಿ ಇರುವಂತ ಅಂಕು ಡೊಂಕುಗಳನ್ನು ತಿದ್ದುವಂತ ತತ್ವಗಳು ಅವರದಾಗಿದ್ದವು, ಕಲ್ಪನೆ ಶಕ್ತಿಗಿಂತಲೂ ಮೀರುವಂತ ಶಕ್ತಿ ಬಸವಣ್ಣನವರ ತತ್ವಗಳಿಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಚನ ಸಂಗೀತ ಗಾಯನವನ್ನು ಹನುಮಂತ ಬೋಗರ್ಿ ಹಾಗು ಸಂಗಡಿಗರು ನೆಡೆಸಿಕೊಟ್ಟರು, ಹಾಗೂ ಹರಳಯ್ಯ ಮತ್ತು ಬಸವಣ್ಣನವರ ಕುರಿತು ಡಿ, ಎಚ್, ಕೊಲ್ಹಾರ ಇವರ ನೇತೃತ್ವದಲ್ಲಿ ನಾಟಕ ಪ್ರದರ್ಶನ ನಡೆಯಿತು, ಮಂಜುಳ ಹಿಪ್ಪರಗಿ, ಮುತ್ತುರಾಜ್, ದತ್ತಾತ್ರೇಯ ಹಿಪ್ಪರಗಿ, ರವೀಂದ್ರ, ಶ್ರೀಶೈಲಾ. ರಾಜೇಶ್ವರಿ, ಪವನ್,ಮುಂತಾದ ಕಲಾವಿದರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿದ್ದಾರಾಮೇಶ್ವರ ಸ್ವಾಮೀಜಿ, ಭೀಮರಾಯ ಜಿಗಜಿಣಗಿ. ಕೋಳೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.