ಎಸ್ಸಿಪಿ, ಟಿಎಸ್ಪಿ ಯೋಜನೆ ಸಮರ್ಪಕ ಅನುಷ್ಠಾನಗೊಳಿಸಿ: ಡಿಸಿ

ಬಾಗಲಕೋಟೆ೧೫: ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಗಳ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ರಾಜ್ಯಕ್ಕೆ ಮಾದರಿ ಜಿಲ್ಲೆಯನ್ನಾಗಿಸಲು ಶ್ರಮಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಎಸ್.ಸಿ.ಪಿ ಹಾಗೂ ಟಿ.ಎಸ್.ಪಿ ಯೋಜನೆಗಳ ಕಾರ್ಯಕ್ರಮಗಳ ಸಪ್ಟಂಬರ ಮಾಹೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದ ಉಪ ಮುಖ್ಯಮಂತ್ರಿಗಳು ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವದರಿಂದ ಎಲ್ಲ ಅಧಿಕಾರಿಗಳು ತಮ್ಮ ತಮ್ಮ ಕೇಂದ್ರ ಕಚೇರಿಗೆ ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಶೀಘ್ರವೇ ಬಿಡುಗಡೆಗೊಳಿಸುವಂತೆ ತಕ್ಷಣವೇ ಸಂಪಕರ್ಿಸಿ ಕ್ರಮಕೈಗೊಂಡು ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿಸಲು ಶ್ರಮಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು. 

ವಿವಿಧ ಇಲಾಖೆಯ ಎಸ್ಸಿಪಿ ಯೋಜನೆಯಡಿ ಒಟ್ಟು 44.03 ಕೋಟಿ ರೂ.ಗಳ ಬಿಡುಗಡೆಯಾದ ಅನುದಾನದಲ್ಲಿ ಒಟ್ಟು 25.71 ಕೋಟಿ ರೂ. ಖಚರ್ು ಮಾಡಲಾಗಿದೆ. ಟಿಎಸ್ಪಿ ಯೋಜನೆಯಡಿ ಒಟ್ಟು 15.34 ಕೋಟಿ ರೂ.ಗಳ ಬಿಡುಗಡೆಯಾದ ಅನುದಾನದ ಪೈಕಿ ಒಟ್ಟು 9.09 ಕೋಟಿ ರೂ. ಖಚರ್ು ಮಾಡಲಾಗಿದೆ ಎಂದು ಸಭೆಗೆ ತಿಳಿಸಲಾಯಿತು. ಬುಡಕಟ್ಟು ಅಭಿವೃದ್ದಿ ನಿಮಗದ ಪರಿಶಿಷ್ಟ ಪಂಗಡದವರ ಅಭಿವೃದ್ದಿಗೆ ಸಾಕಷ್ಟು ಅನುದಾನ ಲಭ್ಯವಿದ್ದು, ಜಿಲ್ಲೆಯ ಪರಿಶಿಷ್ಟ ಪಂಗಡ ಅಭಿವೃದ್ದಿಗೆ ವಿಶೇಷ ಪ್ರಸ್ತಾವನೆಗಳನ್ನು ತಕ್ಷಣವೇ ಕಳುಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

  ಕೃಷಿ ಮತ್ತು ತೋಟಗಾರಿಕೆಯಡಿ ಸಾಮೂಹಿಕ ಯೋಜನೆಯಡಿ ಹನಿ, ತುಂತುರು ನೀರಾವರಿಗಳ ಕುರಿತು ಕ್ರೀಯಾ ಯೋಜನೆ ರೂಪಿಸಲು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಅಪೌಷ್ಠಿಕ ಮಕ್ಕಳ ಅಭಿವೃದ್ದಿ ಕ್ರಮಕೈಗೊಳ್ಳಬೇಕು. ಜಿಲ್ಲೆಯಲ್ಲಿ 50 ಅಪೌಷ್ಠಿಕ ಮಕ್ಕಳಲ್ಲಿ 12 ಮಕ್ಕಳು ಪೌಷ್ಠಿಕರನ್ನಾಗಿ ಮಾಡಲಾಗಿದೆ. ಆರೋಗ್ಯ ಇಲಾಖೆಯಲ್ಲಿ ಜಿಲ್ಲಾ ಮತ್ತು ತಾಲೂಕಾ ಕೇಂದ್ರಗಳಲ್ಲಿ 5 ಬೆಡ್ಗಳನ್ನು ಅಪೌಷ್ಠಿಕ ಮಕ್ಕಳಿಗೆ ಮೀಸಲಿರಿಸಲಾಗಿದೆ. 

        ಈಗಾಗಲೇ ಹುನಗುಂದ ಆರೋಗ್ಯ ಕೇಂದ್ರದಲ್ಲಿ 12 ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ 20 ಮಕ್ಕಳು ದಾಖಲಾಗಿರುತ್ತಾರೆ ಎಂದರು ಸಭೆಗೆ ತಿಳಿಸಲಾಯಿತು.

ಎಲ್ಲ ಇಲಾಖೆಗಳು ಈ ಯೋಜನೆಗಳಡಿ ನೀಡಲಿರುವ ಸೌಲಭ್ಯಗಳ ಮಾಹಿತಿ ಪಟ್ಟಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಜಿಲ್ಲೆಯ ಅಂತರ್ಜಲ ಅಭಿವೃದ್ದಿಗೆ ಸಾಮೂಹಿಕ ಚೆಕ್ಡ್ಯಾಂಗಳನ್ನು ಹೆಚ್ಚಾಗಿ ನಿಮರ್ಿಸಬೇಕು. ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕ್ರಮಕೈಗೊಳ್ಳಬೇಕು.

            ಈ ಕುರಿತು ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಅವರು ಜಲಶಕ್ತಿ ಯೋಜನೆಯಡಿ ಆಂದೋಲನದ ಮೂಲಕ ಅಂತರ್ಜಲ ಹೆಚ್ಚಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಎಲ್ಲ ಇಲಾಖೆಯ ಅಧಿಕಾರಿಗಳು ಪ್ರತಿ ಸಭೆಯ ನಡಾವಳಿಗಳನ್ನು ಎರಡು ದಿನಗಳಲ್ಲಿ ನೀಡಬೇಕು. ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸಭೆಯಲ್ಲಿ ಸೂಚಿಸಲಾಯಿತು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿದರ್ೇಶಕ ಜಗದೀಶ ಹೆಬ್ಬಳ್ಳಿ, ಜಂಟಿ ಕೃಷಿ ನಿದರ್ೇಶಕ ರಾಜಶೇಖರ ಬಿಜಾಪೂರ, ತೋಟಗಾರಿಕೆ ಉಪನಿದರ್ೇಶಕ ಪ್ರಭುರಾಜ ಹಿರೇಮಠ, ಲೋಕೋಪಯೋಗಿ ಇಲಾಖೆಯ ಕಾರ್ಯನಿವರ್ಾಹಕ ಅಭಿಯಂತರ ಪ್ರಶಾಂತ, ನಗರಾಭಿವೃಧ್ದಿ ಕೋಶದ ಯೋಜನಾ ನಿದರ್ೇಶಕ ವಿಜಯ ಮೆಕ್ಕಳಕಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಯಲ್ಲಪ್ಪ ಪಡಸಾಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಭಾರಿ ಉಪನಿದರ್ೇಶಕ ಎ.ಕೆ.ಬಸಣ್ಣವರ, ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.