ಹದಗೆಟ್ಟ ಗದಗ-ಗಜೇಂದ್ರಗಡ ರಸ್ತೆ: ಸಂಚಾರಕ್ಕೆ ತೊಂದರೆ

ಗಜೇಂದ್ರಗಡ 29: ಪಟ್ಟಣದಿಂದ ಗದಗ ನಗರಕ್ಕೆ ಮತ್ತು ಪಟ್ಟಣದಿಂದ ಕುಂಟೋಜಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯುದ್ದಕ್ಕೂ ತೆಗ್ಗು-ದಿನ್ನೆಗಳು ಬಿದ್ದಿವೆ. ಅಲ್ಲಲ್ಲಿ ದೊಡ್ಡ ಹೊಂಡಗಳೇ ನಿಮರ್ಾಣವಾಗಿವೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ನೂರಾರು ವಾಹನ ಸವಾರರು, ಪ್ರಯಾಣಿಕರು ಸುಗಮ ಸಂಚಾರಕಕ್ಕೆ ಪರಿತಪಿಸುವಂತಾಗಿದೆ.

ಗಜೇಂದ್ರಗಡದಿಂದ ನಿಡಗುಂದಿ ಗ್ರಾಮಕ್ಕೆ 10 ಕಿ.ಮೀ ದೂರ ಇದೆ. ಅದನ್ನು ಸಂಚರಿಸಲು ಅರ್ಧ ಗಂಟೆಗು ಹೆಚ್ಚು ಕಾಲಾವಾಧಿ ಬೇಕಾಗುತ್ತದೆ.  ಇದಕ್ಕೆ ಮುಖ್ಯ ಕಾರಣ ರಸ್ತೆಯ ಮೇಲೆ ಬಿದ್ದ ಗುಂಡಿಗಲು. ರಸ್ತೆಯ ಮೇಲೆ ಜಲ್ಲಿ ಕಲ್ಲು ತೇಲಿ, ತಗ್ಗು ಬಿದ್ದಿವೆ. ಹೀಗಾಗಿ ಪ್ರಯಾಣಿಕರು ಹಗಲು ಹೊತ್ತಿನಲ್ಲೇ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇನ್ನು ರಾತ್ರಿ ವೇಳೆಯಲ್ಲಿ ತಿರುಗಾಡುವವರ ಕಷ್ಟ ಹೇಳತಿರದು.  ಮಳೆಯಾದರೆ ಇದರ ಸಮಸ್ಯ ಇನ್ನಷ್ಟು ಬಿಗಡಾಯಿಸಲಿದೆ. ರಾತ್ರಿ ವೇಳೆಯಲ್ಲಿ ಸಂಚರಿಸುವ ಬೈಕ್ ಸವಾರರ ಬೈಕ ದೊಡ್ಡ ದೊಡ್ಡ ಕಂದಕದಲ್ಲಿ ಬಿದ್ದು ಬೈಕ್ ಸ್ಕೀಡ್ ಆಗಿ ಗಂಭೀರ ಗಾಯವಾದ ಘಟನೆ ಜರುಗಿವೆ. ಅಲ್ಲದೇ, ರಸ್ತೆ ಸಂಚರಿಸುವ ವೃದ್ದರೂ ವಾಹನ ಸವಾರರು ದಿಗ್ಗು ದಿನ್ನೆಗಳಿಂದ ಮೈಕೈ ಮುರಿದುಕೊಂಡು ಹಾಸಿಗೆ ಹಿಡಿಯುವರ ಸಂಖ್ಯೆ ದಿನೆ ದಿನೆ ಹೆಚ್ಚುತ್ತಿದೆ. 

ಪ್ರತಿಷ್ಠಿತ ಪಟ್ಟಣವಾದ ಗಜೇಂದ್ರಗಡಕ್ಕೆ ಸಂತೆಗಾಗಿ ದಿನನಿತ್ಯದ ವ್ಯವಹಾರಗಳಿಗೆ ನರೇಗಲ್, ನಿಡಗುಂದಿ, ಸಂಕನೂರ, ಕೊಡಗಾನೂರ ಮತ್ತು ಕುಂಟೋಜಿ ಗ್ರಾಮದವರು ಸಂಚರಿಸುವ ರಸ್ತೆ ಮಾರ್ಗ ಇದಾಗಿದೆ. ಏಳೆಂಟು ಗ್ರಾಮದ ವಿದ್ಯಾಥರ್ಿಗಳು ಶಾಲಾ-ಕಾಲೇಜುಗಳಿಗೆ ಸಂಚರಿಸುವ ಮಾರ್ಗವಾಗಿದ್ದು  ರಸ್ತೆ ಹದೆಗೆಟ್ಟಿರುವದರಿಂದ ನಿಗದಿತ ವೇಳೆಯಲ್ಲಿ ಶಾಲಾ-ಕಾಲೇಜುಗಳಿಗೆ ತಲುಪದೇ ಶಿಕ್ಷಣ ಕುಂಠಿತಗೊಳ್ಳುತ್ತಿದೆ ಎಂದು ಆರೋಪಿಸುತ್ತಾರೆ ವಿದ್ಯಾಥರ್ಿಗಳು.

ಕಳೆದ ಒಂದು ದಶಕದಿಂದ ಈ ರಸ್ತೆಯ ಸ್ಥಿತಿ ಹೀಗೆ ಇದೆ. ಆಗಾಗ ತೇಪೆ ಹಚ್ಚುವ ಕಾರ್ಯ ನಡೆಯುತ್ತಿದ್ದರೂ, ಸಮಸ್ಯೆಗೆ ಶಾಶ್ವತ ಮುಕ್ತಿ ಮಾತ್ರ ದೊರಕಿಲ್ಲ. ಸುಧಾರಣೆ ಇಲ್ಲದ ರಸ್ತೆ ನೊಡಿದ ಅನ್ಯರು ಜನಪ್ರತಿನಿಧಿಗಳಿಗೆ, ಇಲಾಖೆಗೆ ವಿರುದ್ದ ಹಿಡಿ ಶಾಪ ಹಾಕುತ್ತಾ ಪ್ರಯಾಣಿಸುತ್ತಿರುವುದು ಸಾಮಾನ್ಯವಾಗಿದೆ.