ಹುನಗುಂದ 09 : ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಪ್ರಿಯಕರನ ಜೊತೆ ಸೇರಿಕೊಂಡು ಧಾರುಣವಾಗಿ ಕೊಚ್ಚಿ ಕೊಲೆ ಮಾಡಿಸಿ ಗ್ರಾಮದ ಹೊರ ವಲಯದ ಕೃಷ್ಣಾ ನದಿ ಹಿನ್ನೀರಿನ ಕುರುಬನಾಳ ಹಳ್ಳದಲ್ಲಿ ಹೂತಿಟ್ಟ ಘಟನೆ ತಾಲೂಕಿನ ಮರೋಳ ಗ್ರಾಮದಲ್ಲಿ
ನಡೆದಿದೆ. ಶೇಖಪ್ಪ ಸಿದ್ದಪ್ಪ ಕೊಂಡೆಕರ್ (50) ಎಂಬುವನು ಕೊಲೆಯಾದ ದುದರ್ೈವಿ. ಪತ್ನಿ ಶಾಂತವ್ವ (45) ಮತ್ತು ಇವಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪ್ರಿಯಕರ ಶರಣಪ್ಪ ಸಂಗಪ್ಪ ಅಂಬಿಗೇರ (42) ಕೊಲೆ ಮಾಡಿದ
ಆರೋಪಿಗಳಾಗಿದ್ದಾರೆ.
ಶೇಖಪ್ಪ ಮತ್ತು ಶಾಂತವ್ವ ದಾಂಪತ್ಯಕ್ಕೆ ಮುದ್ದಾದ 14ವರ್ಷದ ಗಂಡು ಮಗು 10ವರ್ಷದ ಒಂದು ಹೆಣ್ಣು ಮಗು ಜನಿಸಿದ್ದರೂ ಪತಿಗಿಂತ ನಿನ್ನೆ ಮೊನ್ನೆ ಪರಿಚಯವಾದ ಪ್ರಿಯಕರನೇ ಮುಖ್ಯವಾಗಿದ್ದದ್ದೆ ಪತಿರಾಯನನ್ನು ಪ್ರಿಯಕರನಿಂದ ಬರ್ಬರವಾಗಿ ಕೊಲೆ ಮಾಡಿಸುವ ಹಂತಕ್ಕೆ ಬಂದಿತು. ಶಾಂತವ್ವ ಕೊಂಡೆಕರ್ ಸುಮಾರು ವರ್ಷಗಳಿಂದ ಮರೋಳ ಗ್ರಾಮದ ಅಂಬಿಗೇರ ಸಮುದಾಯದ ವ್ಯಕ್ತಿ ಶರಣಪ್ಪ ಸಂಗಪ್ಪ ಅಂಬಿಗೇರ ಜೊತೆ ಅನೈತಿಕ ಸಬಂಧವನ್ನು ಇಟ್ಟುಕೊಂಡು ಅವನ ಜೊತೆಗೆ ನಿರಂತರ ಮೋಬೈಲ್ನಲ್ಲಿ ಮಾತನಾಡುತ್ತಿರುವ ವಿಷಯವು ಪತಿ ಶೇಖಪ್ಪನಿಗೆ ತಿಳಿದಿತ್ತು. ಆ ಪೋನ್ ಸಲುವಾಗಿ ಆಗಾಗ ಮನೆಯಲ್ಲಿ ಗಂಡ ಹೆಂಡರ ಮಧ್ಯ ವಿರಸ ಪ್ರಾರಂಭವಾಗಿ ಕೆಲವೊಂದು ಸಾರಿ ವಿಕೋಪಕ್ಕೂ ಹೋಗಿ ಅದು ಶಾಂತವ್ವನ ತವರೂರಿನವರಿಗೆ ತಿಳಿದಿತ್ತು. ಹಿರಿಯರ ಮಾತನ್ನು ಕೇಳದೆ ತನ್ನ ಅನೈತಿಕ ಸಂಬಂಧವನ್ನು ಜಾಸ್ತಿ ಮಾಡಿದಾಗ ಗಂಡನಿಗೆ ಈ ವಿಷಯ ತಿಳಿದು ಪೋನ್ ಕಸಿದುಕೊಂಡು ಜಗಳವಾಗಿದೆ. ಇದನ್ನು ಆಕೆ ಸಹಿಸಿಕೊಳ್ಳಲಿಲ್ಲ. ನಮ್ಮ ಅನೈತಿಕ ಸಂಬಂಧಕ್ಕೆ ಈತ ಅಡ್ಡಿಯಾಗುತ್ತಾನೆ ಎಂದು ತಿಳಿದು ಪ್ರಿಯಕರನೊಂದಿಗೆ ಸೇರಿಕೊಂಡು ಅವನನ್ನು ಮುಗಿಸಲು ಸಂಚು ಮಾಡಿ ಕಳೆದ ಏಪ್ರಿಲ್ 24 ರಂದು ಶೇಖಪ್ಪ ಕೊಂಡೆಕರ್ ಎಂದಿನಂತೆ ತೋಟದ ಕೆಲಸಕ್ಕೆ ಅಂತ ಹೊಲಕ್ಕೆ ಹೋದಾಗ, ಮಧ್ಯಾಹ್ನ 12 ಗಂಟೆಯಿಂದ 1-30 ಗಂಟೆಯ ಸುಮಾರಿಗೆ ಪ್ರಿಯಕರ ಶರಣಪ್ಪ ಅಂಬಿಗೇರ ಕೊಡಲಿಯಿಂದ ಮೊದಲು ಕುತ್ತಿಗೆಗೆ ನಂತರ ನಡದ ಭಾಗಕ್ಕೆ ಹೊಡೆದು ಕೊಚ್ಚಿ ಕೊಲೆ ಮಾಡಿ ಕೃಷ್ಣಾ ನದಿಯ ಹಿನ್ನೀರಿನ ಕುರುಬನಾಳ ಹಳ್ಳದಲ್ಲಿ ಹೂತು ಹಾಕಿದ್ದಾನೆ.
ಪತಿಯ ಹತ್ಯೆಯಲ್ಲಿ ಪ್ರಿಯಕರನೊಂದಿಗೆ ಭಾಗಿ ಮಿಸ್ಸಿಂಗ್ ಕಂಪ್ಲೇಟ್ ದಾಖಲು-ಏಪ್ರಿಲ್ 24 ರಂದು ಪತಿಯನ್ನು ಪ್ರಿಯಕರೊಂದಿಗೆ ಸೇರಿ ಕೊಲೆ ಮಾಡಿಸಿ ಮುಗಿದೋಯಿತು ಅಂತ ನಿಶ್ಚಿಂತಿಯಿಂದ ಇದ್ದ ಶಾಂತವ್ವ ಕೊಂಡೇಕರ್ ಗಂಡನ ಹಿರಿಯ ಸಹೋದರ ಮತ್ತು ಅವರ ಸಂಬಂಧಿಕರು ಅವನನ್ನು ಹುಡಕಲು ಒತ್ತಾಯ ಮಾಡಿದಾಗ ಅವರ ಒತ್ತಾಯಕ್ಕೆ ಮಣಿದು ಏಪ್ರೀಲ್ 25 ರಂದು ಹುನಗುಂದ ಠಾಣಿಯಲ್ಲಿ ನನ್ನ ಗಂಡ ಕಾಣಿಯಾಗಿದ್ದಾನೆ ಎಂದು ದೂರು ದಾಖಲಿಸಿದ್ದಾಳೆ. ಆರೋಪಿಗಳನ್ನು ಎಡಮುರಿ ಕಟ್ಟಿ ಹಾಕಿದ ಪೊಲೀಸ್ರು-ಶೇಖಪ್ಪ ಕೊಂಡೆಕರ್ ಕಾಣಿಯಾಗಿದ್ದಾನೆ ಎನ್ನುವ ಪ್ರಕರಣ ದಾಖಲಾಗುತ್ತಿದ್ದಂತೆ ಹುನಗುಂದ ಸಿಪಿಐ ಅಯ್ಯನಗೌಡ ಪಾಟೀಲ ಮತ್ತು ಪಿಎಸ್ಐ ಪಿ.ಎಂ.ಪಟಾತರ ನೇತೃತ್ವದ ತಂಡ ತನಿಖೆಗೆ ಮುಂದಾದಾಗ ಸಂಬಂಧಿಕರ ಅನುಮಾನದ ಹೇಳಿಕೆ ಮತ್ತು ಪೋನ್ ಕಾಲ್ ಆಧಾರ ಮೇಲೆ ಆರೋಪಿತರಾಳ ಪತ್ನಿ ಶಾಂತವ್ವ ಮತ್ತು ಪ್ರಿಯಕರ ಶರಣಪ್ಪ ಅಂಬಿಗೇರ ಅವರನ್ನು ವಶಕ್ಕೆ ಪಡೆದಿದ್ದಾರೆ.
ಮಕ್ಕಳ ಮತ್ತು ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು; ತಾಯಿಯೇ ಕುಂತು ನನ್ನ ತಂದೆಯನ್ನು ಕೊಲೆ ಮಾಡಿಸಿದ್ದು ಅಂತ ಅಳುತ್ತಿದ್ದ ಪುಟ್ಟ ಕಂದಮ್ಮಗಳ ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು.
ತವರಿನ ಹಿರಿಯರು ಬಂದು ಬುದ್ದಿ ಹೇಳಿದ ಮೇಲೆ ತಿದ್ದಿಕೊಂಡು ಗಂಡ ಮಕ್ಕಳದೊಂದಿಗೆ ಸಂತೋಷದಿಂದ ಕಾಲ ಕಳೆದಿದ್ದರೇ ಇಂದು ಪತಿಯ ಬರ್ಬರ ಹತ್ಯೆಯಾಗುತ್ತಿರಲಿಲ್ಲ ಎರಡು ಮಕ್ಕಳು ಅನಾಥವಾಗುತ್ತಿರಲಿಲ್ಲ ಆದರೆ ಆಕೆ ಕಾಮದಾಹ ಬದುಕಿ ಬಾಳಬೇಕಾದ ಮತ್ತು ಮಕ್ಕಳ ಭವಿಷ್ಯ ನಿಮರ್ಿಸಬೇಕಾದ ವ್ಯಕ್ತಿ ಕೊಡ್ಲೆ ಏಟಿಗೆ ಉಸಿರು ಚೆಲ್ಲುವಂತಾಗಿದೆ.