ಪೊಲೀಸರೊಂದಿಗೆ ಘರ್ಷಣೆಗಿಳಿದ ವಲಸೆ ಕಾರ್ಮಿಕರು: ಲಾಠಿ ಪ್ರಹಾರ, ಮೂವರ ಬಂಧನ

ಕೊಜಿಕೋಡ್, ಮೇ 19, ಜಿಲ್ಲೆಯ ಪೆರಾಂಬ್ರಾ ಸಮೀಪದ ಕುಟ್ಟಿಯಾಡಿಯಲ್ಲಿ ಮಂಗಳವಾರ ಮಧ್ಯಾಹ್ನ ಗುಂಪು ಸೇರಿದ್ದ ವಲಸೆ ಕಾರ್ಮಿಕರನ್ನು ಚದುರಿಸಲು ಯತ್ನಿಸಿದ   ಪೊಲೀಸರೊಂದಿಗೆ  ಅದೇ ಗುಂಪು ಘರ್ಷಣೆಗಿಳಿದ ನಂತರ  ಮೂವರು ವಲಸೆ ಕಾರ್ಮಿಕರನ್ನು ಬಂಧಿಸಲಾಗಿದೆ.ಕೆಲವು   ಕಾರ್ಮಿಕರು ಕಲ್ಲು ತೂರಾಟ ನಡೆಸಿದ್ದಾರೆ   ತಮ್ಮನ್ನು ಸ್ವಂತ ಊರಿಗೆ ಬೇಗನೆ ವಾಪಸ್‍ ಕಳುಹಿಸಬೇಕೆಂದು ಪಟ್ಟುಹಿಡಿದಿದ್ದ ಉದ್ರಿಕ್ತ ಗುಂಪನ್ನು   ಚದುರಿಸಲು ಯತ್ನಿಸಿದ ಪೊಲೀಸ್ ಅಧಿಕಾರಿಗಳನ್ನು ಕೂಡಿಹಾಕಲು ಗುಂಪು ಯತ್ನಿಸಿದೆ ಎಂದು ಪೊಲೀಸ್‍ ಮೂಲಗಳು ತಿಳಿಸಿವೆ.ವಲಸೆ ಕಾರ್ಮಿಕರು   ಜಮಾಯಿಸಿದ್ದರಿಂದ, ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸಮಾಧಾನಪಡಿಸಿ    ಅವರನ್ನು ಮತ್ತೆ ತಮ್ಮ ಶಿಬಿರಗಳಿಗೆ ಕಳುಹಿಸಿದ್ದಾರೆ. ಆದರೆ, ಕೆಲವರು ಇದನ್ನು   ವಿರೋಧಿಸಿ ಪೊಲೀಸರೊಂದಿಗೆ ಘರ್ಷಣೆ ಇಳಿದಿದ್ದಾರೆ.  ಘರ್ಷಣೆಗಿಳಿದ ಕಾರ್ಮಿಕರ ಮೇಲಲೆ ಲಾಕ್‌ಡೌನ್   ಉಲ್ಲಂಘನೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಕೆಲ ವಲಸಿಗರು ಪೊಲೀಸರ ಲಾಠಿಗಳನ್ನು ಕಸಿಯಲು ಯತ್ನಿಸಿದ್ದು, ಪೊಲೀಸರು ಉದ್ರಿಕ್ತ   ಗುಂಪನ್ನು ಚದುರಿಸಿ ಅವರನ್ನು ಶಿಬಿರಗಳಿಗೆ ವಾಪಸ್‍ ಕಳುಹಿಸಿದ್ದಾರೆ ಎಂದು ಮೂಲಗಳು   ತಿಳಿಸಿವೆ.  ವಾಪಸ್‍ ಹಿಂತಿರುಗುವುದಕ್ಕೆ ಸಾರಿಗೆ ಸೌಲಭ್ಯ   ಕಲ್ಪಿಸುವಂತೆ ಕೋರಿ  ಬಿಹಾರ ಮೂಲದ ಸುಮಾರು 100 ವಲಸೆ ಕಾರ್ಮಿಕರು ಮಧ್ಯಾಹ್ನದ ವೇಳೆಗೆ ಪೆರಾಂಬ್ರಾ ಬಜಾರ್‌ನಲ್ಲಿ ಜಮಾಯಿಸಿದ್ದರು. ಸ್ವಂತ ಊರಿಗೆ ಕಳುಹಿಸಲು ವಿಳಂಬವಾದ ಕಾರಣ ವಲಸಿಗರು ಆಕ್ರೋಶಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಆದರೆ. ಪೆರಾಂಬ್ರಾ ಮತ್ತು ಹತ್ತಿರದ ಸ್ಥಳಗಳಲ್ಲಿ ಆಶ್ರಯ   ಪಡೆದಿದ್ದ ಜಾರ್ಖಂಡ್ ಮತ್ತು ಒಡಿಶಾಕ್ಕೆ ಸೇರಿದ ವಲಸೆ ಕಾರ್ಮಿಕರು ಶ್ರಮಿಕ್‍ ವಿಶೇಷ ರೈಲುಗಳ ಮೂಲಕ ತವರು ರಾಜ್ಯಗಳಿಗೆ ಮರಳಿದ್ದಾರೆ. ಬಿಹಾರದಿಂದ ಬಂದ ವಲಸಿಗರು ಸೋಮವಾರ ರಾತ್ರಿಯಿಂದ ಬೀದಿಗಿಳಿದು ವಾಪಸ್‍ ಕಳುಹಿಸುವಂತೆ ಒತ್ತಾಯಿಸುತ್ತಿದ್ದರು. ಆದರೂ, ಪೊಲೀಸರು   ಅವರನ್ನು ಸಮಾಧಾನಪಡಿಸಿದ್ದಾರೆ. ಆದರೆ, ವಲಸಿಗರು ಮತ್ತೆ ಒಟ್ಟುಗೂಡಿ   ಮಧ್ಯಾಹ್ನ ಬಜಾರ್‌ಗೆ ಬಂದು ವಾಪಸ್‍   ಕಳುಹಿಸಲು ಸಾರಿಗೆ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.  ತಮ್ಮ ತವರು ರಾಜ್ಯಗಳಿಗೆ ವಾಪಸ್ಸಾಗಲು ಸಾರಿಗೆ ಸೌಲಭ್ಯವನ್ನು ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯದ ಅನೇಕ ಭಾಗಗಳಲ್ಲಿ ವಲಸಿಗರು ಘೋಷಣೆಗಳನ್ನು ಕೂಗುತ್ತಾ ಧರಣಿ ಮತ್ತು ಪ್ರತಿಭಟನೆಗಳನ್ನು ನಡೆಸಿದ್ದಾರೆ.