ತಾಳಿಕೋಟಿ 21: ಪವಿತ್ರ ರಮಜಾನ್ ಮಾಸದಲ್ಲಿ ಮುಸ್ಲಿಂ ಬಾಂಧವರು ಎಲ್ಲ ಸಮಾಜದವರನ್ನು ಜೊತೆ ಗೂಡಿಸಿಕೊಂಡು ನಡೆಸುವ ಇಂತಹ ಸೌಹಾರ್ದ ಇಫ್ತಾರ್ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಸಾಮರಸ್ಯ ಇನ್ನಷ್ಟು ಬೆಳೆಯುತ್ತದೆ ಎಂದು ವಿವಿ ಸಂಘದ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಅಭಿಪ್ರಾಯಪಟ್ಟರು.
ಪಟ್ಟಣದ ಬಾವಾಪ್ಯಾರೆ ಬಡಾವಣೆಯಲ್ಲಿ ಗುರುವಾರ ಸಂಜೆ ಪುರಸಭೆ ಮಾಜಿ ಉಪಾಧ್ಯಕ್ಷ ಗೈಬೂಶಾ ಮಕಾಂದಾರ ಇವರು ಹಮ್ಮಿಕೊಂಡ ಸೌಹಾರ್ದ ಇಫ್ತಾರ ಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿ ಹಿರಿಯ ಮುಖಂಡರಾದ ಗೈಬೂಶಾ ಮಕಾಂದಾರ ಅವರು ಪಟ್ಟಣದ ಎಲ್ಲ ಸಮಾಜದವರೊಂದಿಗೆ ಅನೂನ್ಯವಾದ ಸಂಬಂಧಗಳನ್ನು ಹೊಂದಿದವರಾಗಿದ್ದಾರೆ ಅವರು ಒಂದು ಸಣ್ಣ ಕಾರ್ಯಕ್ರಮ ಮಾಡಿದರೂ ಎಲ್ಲರನ್ನು ಪ್ರೀತಿಯಿಂದ ಕರೆದು ಅತಿಥಿ ಸತ್ಕಾರ ನೀಡುತ್ತಾರೆ. ರಮಜಾನ್ ಮಾಸದ ಈ ಪವಿತ್ರ ಸಂದರ್ಭದಲ್ಲಿ ನನಗೆ ಆಮಂತ್ರ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ ಸಾನಿಧ್ಯ ವಹಿಸಿದ್ದರು. ಇಫ್ತಾರ ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ದಶರಥಸಿಂಗ್ ಮನಗೂಳಿ,ಗನಿಸಾಬ ಲಾಹೋರಿ, ಪ್ರಭುಗೌಡ ಮದರಕಲ್, ಶರಣಗೌಡ ದೊಡ್ಡಮನಿ, ರಾಜು ಹಯ್ಯಾಳ, ಈದಗಾ ಸಮಿತಿ ಮಾಜಿ ಅಧ್ಯಕ್ಷ ಮಸೂಮಸಾಬ ಕೆಂಭಾವಿ, ರೋಶನ್ ಡೋಣಿ, ಚನ್ನಬಸ್ಸು ಕಟ್ಟಿಮನಿ, ಅಬ್ದುಲ್ ಸತ್ತಾರ ಅವಟಿ, ರಾಜ ಅಹ್ಮದ್ ಒಂಟಿ,ಸಿಕಂದರ ವಠಾರ, ನಿರಂಜನಶಾ ಮಕಾಂದಾರ, ನಬಿ ಹುಣಶ್ಯಾಳ,ಮಶಾಕ್ ಚೋರಗಸ್ತಿ,ಆರೀಫ್ ಹೊನ್ನೂಟಗಿ,ಚಾಂದಸಾ ಲಾಹೋರಿ, ಮಂಜೂರ ಬೇಪಾರಿ, ಗೌಸ್ ನಾಸೀರ, ಫೈರೋಜ ತಾಳಿಕೋಟಿ, ಬುಡ್ಡಾಜನಾಬ ಮಕಾಂದಾರ, ಮುರ್ತುಜಾ ಮಕಾಂದಾರ(ಹುನಗುಂದ), ಸಲೀಂ ಗೈಬೂಶಾ ಮಕಾಂದಾರ, ಹುಸೇನ್ ಕೆಂಭಾವಿ ಮತ್ತಿತರು ಇದ್ದರು.