ವಿವಿಧ ಪತ್ರಕರ್ತರ ಸಂಘದಿಂದ ಇಫ್ತಾರ್ ಕೂಟ
Iftar gathering by various journalist associations
ಜಮಖಂಡಿ 17 : ನಗರದ ದೇಸಾಯಿ ಸರ್ಕಲ್ ಬಳಿ ಇರುವ ಜೋಗಿಮಡ್ಡಿ ಮಸೀದಿಯಲ್ಲಿ ಪವಿತ್ರವಾದ ರಮಜಾನ ಹಬ್ಬದ ಉಪವಾಸನೆ ಬಿಡುವ ಮುಸ್ಲಿಂ ಭಾಂದವರಿಗೆ ಹಣ್ಣು ಹಂಪಲ, ಸಿಹಿ ಪದಾರ್ಥ, ತಂಪಾದ ಪಾನೀಯವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ವಿವಿಧ ಪತ್ರಕರ್ತರ ಸಂಘಟನೆಯವರು ಹಂಚುವ ಮೂಲಕ ಇಫ್ತಾರ್ ಕೂಟ ನಡೆಯಿತು.
ಪವಿತ್ರವಾದ ರಮಜಾನ ಹಬ್ಬದ ಅಂಗವಾಗಿ ಮುಸ್ಲಿಂ ಸಮಾಜದ ಭಾಂದವರು ತಿಂಗಳ ಕಾಲ ಉಪವಾಸ ಮಾಡುತ್ತಾರೆ. ಸಾಯಂಕಾಲ ಪ್ರತಿಯೊಬ್ಬರು ಉಪವಾಸ ಬಿಡುತ್ತಾರೆ. ಜೋಗಿಮಡ್ಡಿ ಮಸೀದಿಯಲ್ಲಿ ಉಪವಾಸ ಬಿಡುವ ಎಲ್ಲ ಮುಸ್ಲಿಂ ಸಮಾಜ ಭಾಂದವರಿಗೆ ಹಣ್ಣು ಹಂಪಲ, ಸಿಹಿ ಪದಾರ್ಥ, ತಂಪಾದ ಪಾನೀಯವನ್ನು ಹಂಚಲಾಯಿತು.
ಕಾನಿಪ ಧ್ವನಿ ಸಂಘಟನೆಯ ತಾಲೂಕಾಧ್ಯಕ್ಷ ಕಿರಣ ಪವಾರ ಅವರ ನೇತೃತ್ವದಲ್ಲಿ ಉಪಾಧ್ಯಕ್ಷರಾದ ಗಜಾನಂದ ಕಾಂಬಳೆ, ರವಿ ಶಿಂಗೆ, ರಾಜ್ಯ ಸಮಿತಿ ಸದಸ್ಯ ಚಂದ್ರಶೇಖರ ಬಂಡಿವಡ್ಡರ ಹಾಗೂ ಕಾನಿಪ ರಕ್ಷಣಾ ಸಂಘದ ರಾಜ್ಯಾಧ್ಯಕ್ಷ ರವಿ ದೊಡಮನಿ, ಸದಸ್ಯ ಸಿದ್ದಲಿಂಗ ಕಾಂಬಳೆ, ಹಿರಿಯ ಪತ್ರಕರ್ತರಾದ ಶಶಿಕಾಂತ ತೇರದಾಳ ಮತ್ತು ಡಿ.ಬಿ.ಕೆ.ಎಸ್. ಸಂಘಟನೆ ಅಧ್ಯಕ್ಷ ಸುಭಾಸ ರಬಕವಿ, ಜಾನಪದ ಗಾಯಕ ಪ್ರಶಾಂತ ಕಲರ್ಬುಗಿ, ಪತ್ರಕರ್ತರ ಅಮೀರ ಅತ್ತಾರ ಸೇರಿದಂತೆ ಅನೇಕರು ಇದ್ದರು.
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ 